ಶುಭ ಮೂಹರ್ತ, ಸ್ಥಳ, ಭೋಜನ ಮಾಹಿತಿಯೊಂದಿಗೆ ಮತದಾನದ ಮಮತೆಯ ಕರೆಯೋಲೆ: ಏನಿದರ ವಿಶೇಷತೆ?
ಮೈಸೂರು, ಮೇ 08: ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮತದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಮತದಾನ ಮಾಡುವವರ ಸಂಖ್ಯೆ ಮಾತ್ರ ಹೆಚ್ಚಾಗದಿರುವುದು ವಿಷಾದದ ಸಂಗತಿಯಾಗಿದೆ. ಹೀಗಾಗಿ ಪ್ರತಿ ಚುನಾವಣೆ ಬಂದಾಗಲೂ ಮತದಾನ ಮಾಡುವಂತೆ ಮತದಾರರಿಗೆ ಮನವಿ ಮಾಡಿಕೊಳ್ಳುವುದು ಮುಂದುವರೆಯುತ್ತಲೇ ಬಂದಿದೆ.
ರಾಜಕೀಯ ವ್ಯವಸ್ಥೆ ಬಗ್ಗೆ ಮಾತನಾಡುವ ಬಹಳಷ್ಟು ಮಂದಿ ಮತದಾನದ ದಿನ ಮತಚಲಾಯಿಸುವುದೇ ಇಲ್ಲ. ಇನ್ನು ಕೆಲವರು ಅಯ್ಯೋ ನಾವು ಮತ ಹಾಕಿ ಆಗುವುದೇನು ಎಂಬ ಉಡಾಫೆಯ ಮಾತನಾಡುತ್ತಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮತದಾನವಾಗುತ್ತಿದೆ. ಆದರೆ ನಗರ ಪ್ರದೇಶದ ಜನರು ಏಕೆ ಹೀಗೆ? ಎಂದು ಪ್ರಶ್ನೆ ಮಾಡುವ ಸಮಯ ಬಂದಿದೆ.

ಯುವ ಮಾತದಾರರ ಸಂಖ್ಯೆ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಹೆಚ್ಚುತ್ತಲೇ ಹೋಗುತ್ತಿದೆ. ಇವರೆಲ್ಲರೂ ಕಡ್ಡಾಯ ಮತದಾನ ಮಾಡುವಂತೆ ಮಾಡುವ ಕೆಲಸ ಜರೂರಾಗಿ ಆಗಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಮಗೆ ನೀಡಿದ ಹಕ್ಕಾಗಿದ್ದು ಅದನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ನಾವು ಪ್ರಭುಗಳು ಎನ್ನುವುದನ್ನು ಸಾಬೀತು ಮಾಡುವ ಸಮಯ ಇದಾಗಿದೆ.
ಮತದಾರರನ್ನು ಹುರಿದುಂಬಿಸುವ ಕಾರ್ಯ
ಹಾಗೆನೋಡಿದರೆ ಸುಶಿಕ್ಷಿತರು, ಬುದ್ದಿವಂತರು ಎಂದೆನಿಸಿಕೊಳ್ಳುತ್ತಿರುವವರೇ ಮತದಾನದ ದಿನದಂದು ಮತಗಟ್ಟೆಯತ್ತ ಬರುತ್ತಿಲ್ಲ. ಅಂತಹವರನ್ನು ಕರೆತರುವ ಪ್ರಯತ್ನವನ್ನು ಚುನಾವಣಾ ಆಯೋಗ ಮಾಡುತ್ತಿದೆ. ಗ್ರಾಮೀಣ ಪ್ರದೇಶದಿಂದ ಆರಂಭವಾಗಿ ನಗರ ಪ್ರದೇಶದವರೆಗೆ ಎಲ್ಲರಲ್ಲೂ ಮತ ಜಾಗೃತಿ ಮೂಡಿಸುವ ಕೆಲಸವನ್ನು ಹಲವು ರೀತಿಯಲ್ಲಿ ಮಾಡಲಾಗುತ್ತಿದೆ. ಇದರ ಜತೆ ಜತೆಯಲ್ಲಿ ಸಾರ್ವಜನಿಕವಾಗಿ ಸಂಘಟನೆಗಳು ಕೂಡ ಮತ ಚಲಾಯಿಸುವಂತೆ ಮತದಾರರನ್ನು ಹುರಿದುಂಬಿಸುತ್ತಿರುವುದು ಕಂಡು ಬರುತ್ತಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಮದುವೆ, ಇನ್ನಿತರ ಕಾರ್ಯಕ್ರಮಗಳಲ್ಲಿ ಸ್ವಯಂ ಪ್ರೇರಿತರಾಗಿ ಕಡ್ಡಾಯವಾಗಿ ಮತದಾನ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಕರೆ ನೀಡುತ್ತಿರುವುದು ಆ ಮೂಲಕ ಜನರಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿರುವುದು ಕಂಡು ಬರುತ್ತಿದೆ. ಆದರೆ ಸ್ವಾತಂತ್ರ್ಯ ಬಂದು 76 ವರ್ಷಗಳಾದ ಮೇಲೆಯೂ ನಾವು ಮತದಾನ ಮಾಡಿ ಎಂದು ಹೇಳಬೇಕಾಗಿ ಬಂದಿರುವುದು ಬೇಸರದ ಸಂಗತಿಯಾಗಿದೆ.
ಆಕರ್ಷಕ ಮತಗಟ್ಟೆಗಳ ನಿರ್ಮಾಣ
ಎರಡ್ಮೂರು ದಶಕಗಳ ಹಿಂದೆ ನಮ್ಮ ದೇಶದಲ್ಲಿ ಅನಕ್ಷರಸ್ತರಿದ್ದರು ಅವರಿಗೆ ಮತದಾನದ ಮಹತ್ವದ ಬಗೆಗೆ ಅರಿವು ಇರಲಿಲ್ಲ ಹೀಗಾಗಿ ಮತದಾನದ ಶೇಕಡವಾರು ಸಂಖ್ಯೆ ಕಡಿಮೆಯಾಗುತ್ತಿತ್ತು ಎಂದು ಹೇಳಬಹುದಿತ್ತು. ಆದರೆ ಈಗ ಅಕ್ಷರಸ್ತರ ಸಂಖ್ಯೆ ಹೆಚ್ಚಾಗಿದೆ. ಆದರೂ ಕೆಲವರು ಮತದಾನ ಮಾಡಬೇಕೆನ್ನುವ ಮನಸ್ಥಿತಿಗೆ ಬಾರದ ಇರುವುದರಿಂದಲೇ ನಾವು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಚುನಾವಣೆ ಘೋಷಣೆಯಾದಲ್ಲಿಂದ ಇಲ್ಲಿವರೆಗೆ ಚುನಾವಣೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವ ಮೂಲಕ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಚುನಾವಣಾ ಆಯೋಗ ಮಾಡುತ್ತಲೇ ಬಂದಿದ್ದು, ಜತೆಗೆ ಮತದಾರರನ್ನು ಸೆಳೆಯುವ ಸಲುವಾಗಿ ಹಲವು ವಿಶೇಷತೆಗಳನ್ನು ಅಳವಡಿಸಿರುವುದು ಗಮನಾರ್ಹವಾಗಿದೆ. ಈಗಾಗಲೇ ಮಹಿಳೆಯರನ್ನು ಸೆಳೆಯುವ ಸಖೀ, ಆದಿವಾಸಿ, ಬುಡಕಟ್ಟು ಸಮುದಾಯವನ್ನು ಆಕರ್ಷಿಸಲು ಸಾಂಪ್ರದಾಯಿಕ ಮತಗಟ್ಟೆಗಳನ್ನು ಅಲ್ಲಲ್ಲಿ ನಿರ್ಮಿಸಿರುವುದು ವಿಶೇಷವಾಗಿದೆ.
ಮತದಾರರಿಗೆ ಸವಿನಯ ಆಮಂತ್ರಣ
ಇದೆಲ್ಲದರ ನಡುವೆಯೂ ಕೆಲವು ಸಂಘಸಂಘ-ಸಂಸ್ಥೆಗಳು ಮತದಾನದ ಜಾಗೃತಿ ಮೂಡಿಸುತ್ತಿವೆ. ಅದರಂತೆ ಮೈಸೂರಿನ
ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಅಪೂರ್ವ ಸ್ನೇಹ ಬಳಗವು ವಿವಾಹ ಮಾದರಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ, ಮನೆಮನೆಗೆ ತೆರಳಿ ಆಮಂತ್ರಣ ಪತ್ರಿಕೆ ನೀಡಿ ಮತದಾನಕ್ಕೆ ಆಮಂತ್ರಿಸುತ್ತಿರುವುದು ಕಂಡು ಬಂದಿದೆ.
ಮೈಸೂರು ನಗರದ ನಂಜುಮಳಿಗೆ ಸುತ್ತಮುತ್ತ ಸಾರ್ವಜನಿಕರಿಗೂ ಹಾಗೂ ವ್ಯಾಪಾರಸ್ಥರಿಗೆ ಆಮಂತ್ರಣ ಪತ್ರ ನೀಡಿ ಮತದಾನ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಇನ್ನು ಮತದಾರರನ್ನು ಆಹ್ವಾನಿಸುವ ಆಮಂತ್ರಣ ಪತ್ರ ಹೇಗಿದೆ ಎಂದು ನೋಡಿದ್ದೇ ಆದರೆ, ಭಾರತ ಸರ್ಕಾರ ಹೆಸರಿನಲ್ಲಿ ಚುನಾವಣೆ ಆಯೋಗದ ಆಮಂತ್ರಣ ಪತ್ರಿಕೆಯನ್ನು ಥೇಟ್ ವಿವಾಹದ ಆಮಂತ್ರಣದಂತೆಯೇ ಮುದ್ರಿಸಲಾಗಿದೆ.
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ 1945 ಸರಿಯಾದ ಶ್ರೀ ಶೋಭಕೃತ್ ನಾಮಸಂವತ್ಸರ ದಿನಾಂಕ 10.5.2023 ರ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಲ್ಲುವ ಶುಭ ಗಳಿಗೆಯಲ್ಲಿ ಮತದಾನ ಚುನಾವಣೆಯೋತ್ಸವ ನೆರವೇರುವಂತೆ ಭಾರತ ಸರ್ಕಾರ ನಿಶ್ಚಯಿಸಿರುವುದರಿಂದ, ತಾವು ಸಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಸ್ವಯಿಚ್ಛೆಯಂತೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯವನ್ನು ರೂಪಿಸಬೇಕೆಂದು ಕೋರುವ ತಮ್ಮ ಆಗಮನಾಭಿಲಾಷಿಗಳು ಭಾರತ ಚುನಾವಣೆ ಆಯೋಗ, ಸ್ಥಳ ತಮ್ಮ ತಮ್ಮ ಮತಗಟ್ಟೆ ಕೇಂದ್ರ ಎಂದು ಮುದ್ರಿಸಲಾಗಿದೆ.
ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ
ಇಷ್ಟೇ ಅಲ್ಲದೆ ವಿಶೇಷ ಸೂಚನೆಯಾಗಿ ದಯವಿಟ್ಟು ಉಡುಗೊರೆ ಕೊಡಬೇಡಿ ಮತ್ತು ಪಡೆಯಬೇಡಿ ಬಲಿಷ್ಠ ಭಾರತ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ, ಹಣ ಕೇಳದೆ ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿಕೊಳ್ಳುವ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಚುನಾವಣಾ ಆಯೋಗದ ಕಾರ್ಯಕ್ಕೆ ತಮ್ಮ ಅಳಿಲು ಸೇವೆಯನ್ನು ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಅಪೂರ್ವ ಸ್ನೇಹ ಬಳಗವು ಮಾಡಿದೆ.
ಮತದಾರರಿಗೆ ಮತದಾನದ ಆಹ್ವಾನ ಪತ್ರಿಕೆ ನೀಡುವ ವೇಳೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಎಸ್ ಎನ್ ರಾಜೇಶ್, ಆನಂದ್, ಆದರ್ಶ್, ಗಿರೀಶ್, ಸುಚೇಂದ್ರ, ಚಕ್ರಪಾಣಿ ಇನ್ನಿತರರು ಇದ್ದರು. ಸುವ್ಯವಸ್ಥಿತ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಪ್ರತಿಯೊಬ್ಬರೂ ಮತ ಚಲಾಯಿಸಿ ಎನ್ನುವುದು ಮನವಿಯಾಗಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications