Karnataka Election Exit Poll 2023 LIVE: ಚುನಾವಣೋತ್ತರ ಸಮೀಕ್ಷೆಗಳ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಕ್ಕಿವೆ?

ಬೆಂಗಳೂರು,

ಮೇ
10:
ಕರ್ನಾಟಕ
ರಾಜ್ಯಾದ್ಯಂತ
224
ಕ್ಷೇತ್ರಗಳಿಗೂ
ಒಂದೇ
ಹಂತದಲ್ಲಿ
ಇಂದು
(ಮೇ
10)
ಬುಧವಾರ
ಮತದಾನ
ಪ್ರಕ್ರಿಯೆ
ನಡೆದು
ಸಂಜೆ
6
ಗಂಟೆಗೆ
ಮುಕ್ತಾಯವಾಗಿದೆ.
ಸದ್ಯ
ವಿವಿಧ
ಸುದ್ದಿ
ಮಾಧ್ಯಮ
ಸಂಸ್ಥೆಗಳು
ಮತ್ತು
ಏಜೆನ್ಸಿ
ಗಳು
ನಡೆಸಿದ
ಚುನಾವಣೋತ್ತರ
ಸಮೀಕ್ಷೆಯಲ್ಲಿ
ಬಿಜೆಪಿ,
ಕಾಂಗ್ರೆಸ್‌,
ಜೆಡಿಎಸ್‌
ಮತ್ತು
ಇತರೆ
ಪಕ್ಷಗಳಿಗೆ
ಎಷ್ಟು
ಸ್ಥಾನ
ಬಂದಿವೆ
ಎಂದು
ತಿಳಿಸಿವೆ.
ಇದರಲ್ಲಿ
ಬಹುತೇಕ
ಸಂಸ್ಥೆಗಳು
ನೀಡಿರುವ
ಸಮೀಕ್ಷೆಯಲ್ಲಿ
ಕಾಂಗ್ರೆಸ್
ಮುನ್ನಡೆ
ಎಂದು
ಹೇಳಲಾಗುತ್ತಿದೆ.
ಆಡಳಿತ
ಪಕ್ಷ
ಬಿಜೆಪಿಗೆ
ಹಿನ್ನಡೆ
ಎಂದು
ತಿಳಿಸಿದೆ.
ಕುರಿತ
ಅಂಕಿ
ಸಂಖ್ಯೆ
ಇಲ್ಲಿ
ತಿಳಿಯಿರಿ.

id="toptextpromo">
id='are-slot-1'
class='oiad
oi-axt
oiadv'>

May 10, 2023, 11:31 pm IST

ಚುನಾವಣೋತ್ತರ ಸಮೀಕ್ಷೆಯನ್ನು ಸ್ವತಃ ಸಿದ್ದರಾಮಯ್ಯ ಮತ್ತ ಡಿಕೆಶಿ ತಿರಸ್ಕರಿಸಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದ್ದಾರೆ. ಆದರೆ ಮತದಾರನ ಅಂತಿಮ ತೀರ್ಪು ಏನೆಂದು ಮೇ 13ರಂದು ತಿಳಿಯಲಿದೆ.
May 10, 2023, 11:30 pm IST

ಒಟ್ಟಾರೆ ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿದಾಗ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಸ್ಪಷ್ಟವಾಗಿದೆ. ಆದರೆ ಸರಳ ಬಹುಮತದ ಗೆರೆಯನ್ನು ದಾಟುತ್ತಾ ಎನ್ನುವ ಯಕ್ಷಪ್ರಶ್ನೆ ಉಳಿದುಕೊಂಡಿದೆ. ಒಂದು ವೇಳೆ ಕಾಂಗ್ರೆಸ್ ಮ್ಯಾಜಿಕ್ ನಂಬರ್ 113 ಪಡೆಯದೇ ಇದ್ದರೆ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. ಅದು ಮತ್ತೊಂದು ಸಮ್ಮಿಶ್ರ ಸರ್ಕಾರ, ಆಪರೇಷನ್ ಕಮಲಕ್ಕೂ ಮತ್ತೆ ರಾಜ್ಯ ಸಾಕ್ಷಿಯಾದರೆ ಅಚ್ಚರಿ ಪಡಬೇಕಿಲ್ಲ.
May 10, 2023, 9:25 pm IST

ಕಾಂಗ್ರೆಸ್ ಈ ಬಾರಿ 130 ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದ್ದು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದರು. ಕರಾವಳಿ ಭಾಗದಲ್ಲಿ ಕೂಡ ಕಾಂಗ್ರೆಸ್ ಹೆಚ್ಚಿನ ಸೀಟುಗಳನ್ನು ಪಡೆಯಲಿದೆ ಎಂದಿದ್ದಾರೆ.
May 10, 2023, 8:48 pm IST

ಎಕ್ಸಿಟ್ ಪೋಲ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಮೀಕ್ಷೆಗಳನ್ನು ನಾನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಈ ಬಾರಿ 146 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ನಾವು ಕಷ್ಟ ಪಟ್ಟು ಕೆಲಸ ಮಾಡಿದ್ದೇವೆ, ಗೆಲುವು ಸಾಧಿಸುವ ನಂಬಿಕೆ ಇದೆ ಎಂದರು. ರಾಜ್ಯದಲ್ಲಿ ಡಬಲ್ ಇಂಜಿನ್ ಫೇಲ್ ಆಗಿದ್ದು ಜನ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.
May 10, 2023, 8:18 pm IST

ಟುಡೇಸ್ ಚಾಣಕ್ಯ ಸಮೀಕ್ಷೆ: ಬಿಜೆಪಿಗಿಂತ ಕಾಂಗ್ರೆಸ್‌ ಮುನ್ನಡೆ

ಟುಡೇಸ್ ಚಾಣಕ್ಯ ಸಮೀಕ್ಷಾ ವರದಿಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದಿದೆ. ಆಡಳಿತ ಪಕ್ಷ ಬಿಜೆಪಿಗೆ ಕೇವಲ 92 ಸೀಟು ಬಂದರೆ, ಕಾಂಗ್ರೆಸ್‌ಗೆ ಬರೊಬ್ಬರಿ 120 ಸ್ಥಾನ ಸಿಗಲಿವೆ, ಜೆಡಿಎಸ್‌ಗೆ 12 ಮತ್ತು ಇತರೆ (00) ಪಕ್ಷಗಳಿಗೆ ಒಂದೇ ಒಂದು ಸೀಟು ಲಭಿಸುವುದಿಲ್ಲ ಎಂದು ಸಮೀಕ್ಷೆ ಮಾಹಿತಿ ನೀಡಿದೆ.
May 10, 2023, 8:13 pm IST

ಕಾಂಗ್ರೆಸ್‌ಗೆ ಭರ್ಜರಿ 140 ಸೀಟು

ಇಂಡಿಯಾ ಟುಡೆ ಆಕ್ಸಿಸ್ ಮೈ ಇಂಡಿಯಾ ಸಂಸ್ಥೆ ಕರ್ನಾಟಕ ರಾಜ್ಯ ಚುನಾವಣೋತ್ತರ ಸಮೀಕ್ಷೆ ನಡೆಸಿದೆ. ಆ ಸಂಸ್ಥೆಯ ವರದಿಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ 62-80, ಕಾಂಗ್ರೆಸ್ 120-140, ಜೆಡಿಎಸ್ 22-25, ಇತರೆ 00-03. ಇಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ. ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ 113ಕ್ಕಿಂತಲೂ ಅಧಿಕ ಸೀಟು ಗಳಿಸಲಿವೆ ಎಂದು ಹೇಳಲಾಗುತ್ತಿದೆ.
May 10, 2023, 7:55 pm IST

ಚುನಾವಣೊತ್ತರ ಸಮೀಕ್ಷೆಗಳ ಫಲಿತಾಂಶದ ಪಟ್ಟಿ

Karnataka Election 2023 Exit Poll LIVE
ಕರ್ನಾಟಕದಲ್ಲಿಂದು ಮತದಾನ ಪೂರ್ಣಗೊಂಡ ನಂತರ ಪ್ರಕಟಗೊಂಡ ವಿವಿಧ ಸಂಸ್ಥೆಗಳ ಸಮೀಕ್ಷಾ ವರದಿಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ಇತರೆ ಪಕ್ಷಗಳಿಗೆ ಒಟ್ಟು 224 ಸೀಟುಗಳಲ್ಲಿ ಎಷ್ಟು ಸೀಟುಗಳು ಲಭಿಸಿವೆ ಎಂಬ ಮಾಹಿತಿಯು ಪಟ್ಟಿ ರೂಪದಲ್ಲಿ ನಿಮ್ಮ ಮುಂದೆ.
May 10, 2023, 7:49 pm IST

ರಾಜನೀತಿ ಸಮೀಕ್ಷೆ: ಕಮಲಕ್ಕೆ 100 ಸೀಟು, ಕೈಗೆ 92

ರಾಜನೀತಿ ಚುನಾವಣೋತ್ತರ ಸಮೀಕ್ಷಾ ವರದಿಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ 100, ಕಾಂಗ್ರೆಸ್ ಪಕ್ಷಕ್ಕೆ 92, ಜಾತ್ಯಾತೀತ ಜನತಾದಳ (JDS) ಪಕ್ಷಕ್ಕೆ 31 ಸೀಟುಗಳು ಮತ್ತು ಇತರೆ 01 ಸ್ಥಾನ ನೀಡಿರುವ ಬಗ್ಗೆ ರಾಜನೀತಿ ತಿಳಿಸಿದೆ.
May 10, 2023, 7:38 pm IST

ಸಿಎನ್‌ಕ್ಸ್ ಸಮೀಕ್ಷೆ: ಬಿಜೆಪಿಗೆ 100 ಸ್ಥಾನ

ರಾಜ್ಯ ಸಾರ್ವತ್ರಿಕ ಚುನಾವಣೆ ನಂತರ ಸಿಎನ್‌ಎಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆಗಲಿದೆ ಎಂದು ಭವಿಷ್ಯ ನುಡಿದಿದೆ. ಆಡಳಿತ ಪಕ್ಷ ಬಿಜೆಪಿಗೆ 100 ಸ್ಥಾನಗಳು ಬರಲಿದ್ದು, ಕಾಂಗ್ರೆಸ್‌ಗೆ 91 ಸ್ಥಾನ ಸಿಗಲಿವೆ ಎಂದು ತಿಳಿಸಿದೆ. ಇತ್ತ ಸ್ಥಳೀಯ ಪಕ್ಷ ಜೆಡಿಎಸ್‌ಗೆ 31 ಸ್ಥಾನ ಮತ್ತು ಇತರೆ ಪಕ್ಷಗಳಿಗೆ 01 ಸೀಟು ಧಕ್ಕಲಿವೆ ಎಂದು ತಿಳಿಸಿದೆ.
May 10, 2023, 7:29 pm IST

ಇಟಿಜಿ ಏಜೆನ್ಸಿ ಸಮೀಕ್ಷೆ: ಕಾಂಗ್ರೆಸ್‌ಗೆ ಗರಿಷ್ಠ 113 ಸ್ಥಾನ

ರಾಜ್ಯ ಸಾರ್ವತ್ರಿಕ ಚುನಾವಣೆ ನಂತರ 'ಟೈಮ್ಸ್ ನೌ- ಇಟಿಜಿ' ಸಂಸ್ಥೆ ಮಾಡಿದ ಸಮೀಕ್ಷೆಯಲ್ಲಿ ಬಿಜೆಪಿ 85, ಕಾಂಗ್ರೆಸ್ 113, ಪಕ್ಷಕ್ಕೆ ಜೆಡಿಎಸ್ ಪಕ್ಷಕ್ಕೆ 23 ಹಾಗೂ ಇತರೆ ಪಕ್ಷಗಳಿಗೆ 03 ಸ್ಥಾನ ಸಿಗಲಿದೆ ಎಂದು ತಿಳಿಸಿದೆ.
May 10, 2023, 7:19 pm IST

ವಿಪಕ್ಷ ಕಾಂಗ್ರೆಸ್‌ಗೆ ಮುನ್ನಡೆ- ಆಡಳಿತ ಪಕ್ಷಕ್ಕೆ ಹಿನ್ನಡೆ

ಟಿವಿ9 ಭಾರತವರ್ಷ್ - ಪೋಲ್‌ಸ್ಟ್ರಾಟ್ ನಡೆಸಿದ ಕರ್ನಾಟಕ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಆಡಳಿತ ಪಕ್ಷ ಬಿಜೆಪಿಗೆ 88-98 ಸೀಟುಗಳು ಲಭಿಸಿದರೆ, ವಿರೋಧ ಪಕ್ಷ ಕಾಂಗ್ರೆಸ್ ಗೆ 99-109 ಸ್ಥಾನಗಳು ದೊರೆಯಲಿವೆ. ಇತ್ತ ಜೆಡಿಎಸ್‌ಗೆ 21-26 ಸೀಟುಗಳು ಮತ್ತು ಇತರೆ ಪಕ್ಷಗಳಿಗೆ 00-04 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಲಿವೆ ಎಂದು ಹೇಲಾಗುತ್ತಿದೆ.
May 10, 2023, 7:10 pm IST

ದಿ ನ್ಯೂಸ್ ನೇಷನ್ -ಸಿಜಿಎಸ್‌ ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ

ದಿ ನ್ಯೂಸ್ ನೇಷನ್ -ಸಿಜಿಎಸ್‌ ನಡೆಸಿದ ಕರ್ನಾಟಕ ವಿಧಾನಸಭಾ ಚುನಾವಣೋತ್ತರ- 2023 ಸಮೀಕ್ಷಾ ವರದಿಯಲ್ಲಿ ಆಡಳಿತ ಪಕ್ಷಕ್ಕೆ 114 ಸೀಟುಗಳು ಬರಬಹುದು ಎಂದು ಅಂದಾಜಿಸಿದೆ. ವಿರೋಧ ಪಕ್ಷ ಕಾಂಗ್ರೆಸ್‌ಗೆ 86 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ. ಇನ್ನೂ ಸ್ಥಳೀಯ ಪಕ್ಷ ಜೆಡಿಎಸ್‌ಗೆ ದಿ ನ್ಯೂಸ್ ನೇಷನ್ -ಸಿಜಿಎಸ್‌ ಸಮೀಕ್ಷೆಯಲ್ಲಿ 21 ಸೀಟು ಬಂದರೆ, ಇತರೆ ಪಕ್ಷಗಳಿಗೆ 03 ಸ್ಥಾನ ಬರಬಹುದು ಎಂದು ಹೇಳಿದೆ.
May 10, 2023, 6:57 pm IST

ಟಿವಿ ನೈನ್ ಕನ್ನಡ ಸಿ-ವೋಟರ್ ಸಮೀಕ್ಷೆ: ಬಿಜೆಪಿಗೆ ಹಿನ್ನಡೆ

ಟಿವಿ ನೈನ್ ಕನ್ನಡ ಸಿ-ವೋಟರ್ ಸಮೀಕ್ಷೆ ಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಹೇಳಿದೆ. ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ 100-112, ಬಿಜೆಪಿಗೆ ಪಕ್ಷಕ್ಕೆ 83-95ಸೀಟು, ಜೆಡಿಎಸ್‌ಗೆ 21-29 ಸ್ಥಾನ ಮತ್ತು ಇತರೆ ಪಕ್ಷಗಳಿಗೆ 02-06 ಸೀಟು ಗಳಿಸಲಿದೆ ಎಂದು ಹೇಳಲಾಗುತ್ತಿದೆ.
May 10, 2023, 6:53 pm IST

ಜನ್ ಕೀ ಬಾತ್‌ ಸಮೀಕ್ಷೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಮುನ್ನಡೆ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೋತ್ತರ ಕುರಿತು ಸುವರ್ಣ ನ್ಯೂಸ್‌ ಜನ್ ಕೀ ಬಾತ್ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಬಿಜೆಪಿ ಮುನ್ನಡೆ ಎಂದು ತಿಳಿಸಲಾಗಿದೆ. ಸಮೀಕ್ಷೆ ಪ್ರಕಾರ ಬಿಜೆಪಿಗೆ 94-117 ಸೀಟುಗಳು, ಕಾಂಗ್ರೆಸ್‌ಗೆ 91-106 ಸ್ಥಾನ, ಜೆಡಿಎಸ್ ಪಕ್ಷಕ್ಕೆ 14-24 ಹಾಗೂ ಇತರೆ ಪಕ್ಷಗಳಿಗೆ 0-02 ಸ್ಥಾನ ಧಕ್ಕಲಿವೆ ಎಂದು ಜನ್ ಕೀ ಬಾತ್ ಸಮೀಕ್ಷೆ ತಿಳಿಸಿದೆ.
May 10, 2023, 6:50 pm IST

ರಿಪಬ್ಲಿಕ್ ಮಾರ್ಕ್ಯೂ, ಝೀ ನ್ಯೂಸ್, ಸಿ-ವೋಟರ್ ಸೇರಿದಂತೆ ವಿವಿಧ ಸಂಸ್ಥೆಗಳು, ಏಜೆನ್ಸಿಗಳು ನಡೆಸುವ ಚುನಾವಣೋತ್ತರ ಸಮೀಕ್ಷಾ ವರದಿಯಲ್ಲಿ ಪ್ರಕಟಿಸುವಂತೆ ಯಥಾವತ್ತಾಗಿ ಇಲ್ಲಿ ಪ್ರಸಾರ ಮಾಡಲಾಗುತ್ತಿದೆ.
May 10, 2023, 6:47 pm IST

ಸಿ-ವೋಟರ್ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೋತ್ತರ ಸಿ-ವೋಟರ್ ಸಮೀಕ್ಷಾ ವರದಿಯಲ್ಲಿ ಬಿಜೆಪಿ 83-95 ಸ್ಥಾನ ಗಳಿಸಿದರೆ, ಕಾಂಗ್ರೆಸ್ 100-112 ಸೀಟು, ಜೆಡಿಎಸ್ 21-29 ಹಾಗೂ ಇತರೆ ಪಕ್ಷಗಳು 02-06 ಸೀಟುಗಳು ಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇಲ್ಲಿ ಸಹ ಕಳೆದ ಮೂರುವರೆ ವರ್ಷದಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ ಪಕ್ಷವು ಈ ಬಾರಿ ಅತ್ಯಧಿಕ ಸ್ಥಾನ ಗಳಿಸಲಿದೆ ಎಂದು ಹೇಳಲಾಗುತ್ತಿದೆ.
May 10, 2023, 6:44 pm IST

ರಿಪಬ್ಲಿಕ್‌ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೋತ್ತರ ರಿಪಿಬ್ಲಿಕ್ ನ್ಯೂಸ್ ಸಮೀಕ್ಷಾ ವರದಿಯಲ್ಲಿ ಬಿಜೆಪಿಗೆ 85-100 ಸೀಟುಗಳು ಬರಲಿವೆ ಎಂದು ಹೇಳಿದೆ. ಕಾಂಗ್ರೆಸ್‌ ಪಕ್ಷಕ್ಕೆ 94-108, ಜೆಡಿಎಸ್ ಗೆ 24-32 ಮತ್ತು ಇತರೆ ಪಕ್ಷಗಳಿಗೆ 02-05 ಸೀಟುಗಳು ಲಭಿಸಲಿವೆ ಎಂದು ತಿಳಿಸಿದೆ. ಇದರಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಲಿದೆ ಎಂದು ಹೇಳಲಾಗಿದೆ.
May 10, 2023, 6:39 pm IST

ಝಿ ನ್ಯೂಸ್ ಸಮೀಕ್ಷಾ ವರದಿ

ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೋತ್ತರ ಝಿ ನ್ಯೂಸ್ ಸಮೀಕ್ಷಾ ವರದಿಯಲ್ಲಿ ಬಿಜೆಪಿಗೆ 79-94 ಸೀಟುಗಳು ಬರಲಿವೆ ಎಂದು ಹೇಳಿದೆ. ಕಾಂಗ್ರೆಸ್‌ ಪಕ್ಷಕ್ಕೆ 94-118, ಜೆಡಿಎಸ್ ಗೆ 25-23 ಮತ್ತು ಇತರೆ ಪಕ್ಷಗಳಿಗೆ 02-05 ಸೀಟುಗಳು ಲಭಿಸಲಿವೆ ಎಂದು ಹೇಳಿದೆ.
May 10, 2023, 6:07 pm IST

ಕರ್ನಾಟಕದಲ್ಲಿ ಮತದಾನ ಪ್ರಕ್ರಿಯೆ ಅಂತ್ಯ

ಕರ್ನಾಟಕ ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಂದೆರಡು ಕಡೆಗಳಲ್ಲಿ ಬಿಟ್ಟುರೆ ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಬೆಳಗ್ಗೆ 7ಗಂಟೆಗೆ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ನಿಗದಿಯಂತೆ ಸಂಜೆ 6ಗಂಟೆಗೆ ಅಂತ್ಯಗೊಂಡಿದೆ. ಈಗಾಗಲೇ ಸರತಿ ಸಾಲಿನಲ್ಲಿ ಮತ ಹಾಕಲು ನಿಂತವರಿಗೆ ಮಾತ್ರವೇ ಮತದಾನ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ.
May 10, 2023, 5:46 pm IST

ಸಂಜೆ 5ಗಂಟೆವರೆಗೆ ಶೇ.65.69 ಮತದಾನ

ಕರ್ನಾಟಕ ರಾಜ್ಯ ಸಾರ್ವತ್ರಿಕ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆಯವರೆಗೆ ರಾಜ್ಯಾದ್ಯಂತ ಶೇಕಡಾ 65.69 ರಷ್ಟು ಮತದಾನ ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶೇಕಡಾ 50 ರಷ್ಟು ಮಾತ್ರ ಮತದಾನ ಆಗಿದೆ ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.
May 10, 2023, 4:44 pm IST

2018ರಲ್ಲಿ 'ಎಬಿಪಿ ನ್ಯೂಸ್ -ಸಿ ವೋಟರ್' ನಡೆಸಿದ ಕರ್ನಾಟಕ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 110, ಕಾಂಗ್ರೆಸ್‌ಗೆ 88, ಸ್ಥಳೀಯ ಜೆಡಿಎಸ್ ಪಕ್ಷಕ್ಕೆ 24 ಮತ್ತು ಇತರೆ ಪಕ್ಷಗಳಿಗೆ 02 ಸೀಟುಗಳು ಬರುತ್ತವೆ ಎಂದು ಹೇಳಿತ್ತು. ಇದು ಬಿಜೆಪಿಯಲ್ಲಿ ಅಧಿಕಾರದ ಭರವಸೆ ಹುಟ್ಟು ಹಾಕಿತ್ತು.
May 10, 2023, 4:30 pm IST

2018ರ ಕರ್ನಾಟಕ ಚುನಾವಣೋತ್ತರ ಸಮೀಕ್ಷೆ ಮಾಹಿತಿ

ಕರ್ನಾಟಕದಾದ್ಯಂತ 2018ರಲ್ಲಿ ಒಟ್ಟು ಶೇಕಡಾ 72.36 ರಷ್ಟು ಮತದಾನ ಆಗಿತ್ತು. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಆರಂಭವಾದ ಚುನಾವಣೋತ್ತರ ಸಮೀಕ್ಷೆಯಲ್ಲಿ 'ಇಂಡಿಯಾ ಟಿವಿ-ವಿಎಂಆರ್' ನೀಡಿದ್ದ ಸಮೀಕ್ಷೆಯಲ್ಲಿ ಬಿಜೆಪಿಗೆ 94, ಕಾಂಗ್ರೆಸ್‌ಗೆ 97 ಮತ್ತು ಸ್ಥಳೀಯ ಜೆಡಿಎಸ್ ಪಕ್ಷಕ್ಕೆ 28 ಹಾಗೂ ಇತರೆ ಪಕ್ಷಗಳಿಗೆ 03 ಸೀಟುಗಳು ಬರುತ್ತವೆ ಎಂದು ಹೇಳಿತ್ತು.
May 10, 2023, 4:11 pm IST

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ನಂತರ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಚುನಾವಣೋತ್ತರ ಸಮೀಕ್ಷೆ ಆರಂಭವಾಗಲಿದೆ. ಈ ಕುರಿತು ನಾಡಿನ ಜನರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾತರರದಿಂದ ಕಾಯುತ್ತಿದ್ದಾರೆ.
May 10, 2023, 4:10 pm IST

ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ ಭರಪೂರ ಸ್ಪಂದನೆ ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇಕಡಾ 52.03ರಷ್ಟು ಮತದಾನ ನಡೆದಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.
May 10, 2023, 4:10 pm IST

ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ ಶನಿವಾರ ಆರಂಭವಾಗಲಿದೆ. ಅಂದೇ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮಧ್ಯೆ ಚುನಾವಣೋತ್ತರ ಸಮೀಕ್ಷೆ ತೀವ್ರ ಕುತೂಹಲ ಕೆರಳಿಸಿದೆ. ಜಿಲ್ಲಾವಾರು, ವಿಭಾಗವಾರು, ಕ್ಷೇತ್ರವಾರು ಸಮೀಕ್ಷೆಯ ಅಂಶಗಳು ಇಂದು ಸಂಜೆ 6ಗಂಟೆ ನಂತರ ಬಹಿರಂಗಗೊಳ್ಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+