Bajrang Dal; ಕೈ ಭರವಸೆಗೆ ರಾಜಹುಲಿ ಘರ್ಜನೆ; ಯಾವನಿಂದಲೂ ಬಜರಂಗ ಬ್ಯಾನ್ ಮಾಡೋಕೆ ಸಾಧ್ಯ ಇಲ್ಲ: ಯಡಿಯೂರಪ್ಪ

ಬೆಂಗಳೂರು,ಮೇ4: ರಾಜ್ಯ ರಾಜಕಾರಣದ ಚುನಾವಣಾ ಭರಾಟೆಯಲ್ಲಿ ಜೋರಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರು ರಾಜಕೀಯ ಪಕ್ಷಗಳು ಭರಪೂರ ಪ್ರಣಾಳಿಕೆಯಿಂದ ಮತದಾರರ ಓಲೈಕೆಗೆ ಮೂರು ರಾಜಕೀಯ ಪಕ್ಷಗಳು ಮುಂದಾಗಿದೆ. ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾಗ್‌ ಭರವಸೆ ಸಾಕಷ್ಟು ಸದ್ದು ಮಾಡುತ್ತಿದ್ದು, ಕೈ ಭರವಸೆ ವಿರುದ್ದ ಯಡಿಯೂರಪ್ಪ ಗರಂ ಆಗಿದ್ದಾರೆ.

ಈ ಕುರಿತು ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಜರಂಗ ದಳ ಬ್ಯಾನ್ ಮಾಡುವ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಯಲ್ಲಿ ಹೇಳಿದೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬಜರಂಗ ದಳವನ್ನು ಯಾವನಿಂದಲೂ ಬ್ಯಾನ್ ಮಾಡೋಕೆ ಸಾಧ್ಯ ಇಲ್ಲ, ಹುಚ್ಚುಚ್ಚುರು ತರ ಆಡ್ತಿರೋ ಕಾಂಗ್ರೆಸ್ ನಾಯಕರಿಗೆ ಜನರು ಚುನಾವಣೆಯಯಲ್ಲಿ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಕಾಂಗ್ರೆಸ್‌ ನಾಯಕರ ವಿರುದ್ದ ಹರಿಹಾಯ್ದಿದ್ದಾರೆ.

Karnataka Election 2023 : Bajrang Dal Ban BS Ydiyurappa Outrage Aagainst Congress Manifesto

ಇನ್ನು ಮಂಡ್ಯ, ಕೆಆರ್ ಪೇಟೆಗೆ ಹೋಗುತ್ತಿದ್ದೇನೆ. ಸಂಜೆ ದಾವಣಗೆರೆ ಮೂಲಕ ನಾಳೆ ನನ್ನ ಪ್ರವಾಸ ಮುಂದುವರಿಯಲಿದೆ, ರಾಜ್ಯದಲ್ಲಿ ನಮ್ಮ ಪರವಾದ ವಾತವರಣ ಇದೆ, ನಮ್ಮ ನಿರೀಕ್ಷೆ ಮೀರಿ ಬಿಜೆಪಿ ಪರವಾಗಿ ವಾತವರಣ ಇದೆ. ಈ ಬಾರಿ 135 ಸೀಟು ಗೆದ್ದು ನಾವು ಸರ್ಕಾರವನ್ನ ರಚಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರ ಪ್ರವಾಸದಿಂದ ವಾತಾವರಣ ಇನ್ನೂ ಬಿಜೆಪಿ ಪರವಾಗಿ ಹೆಚ್ಚಾಗಿದೆ. ಬೆಂಗಳೂರಲ್ಲಿ ಮೋದಿಯ ರೋಡ್ ಶೋ ಮಾಡುತ್ತಿದ್ದಾರೆ, ಇದರಿಂದ ಪಕ್ಷದ ಮೇಲೆ ಪರಿಣಾಮ ಆಗಿ, ಪಕ್ಷ ಗೆಲುವಿಗೆ ಸಹಕಾರಿ ಆಗಲಿದೆ. ನರೇಂದ್ರ ಮೋದಿಯ ಬೆಂಗಳೂರು ರೋಡ್ ಶೋ ಬದಲಾವಣೆ ಆಗಿದೆ. ಶನಿವಾರ ಸಂಜೆ ಇದ್ದ ರೋಡ್ ಶೋ ಭಾನುವಾರ ಬೆಳಿಗ್ಗೆಗೆ ನಡೆಯಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+