ಕರ್ನಾಟಕದಲ್ಲಿ ಮಳೆ; ರಾಜ್ಯದ 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು,ಮೇ 31: ರಾಜ್ಯದಲ್ಲಿ ಬೇಸಿಗೆಯ ಬಿರು ಬೀಸಿಲಿಗೆ ಡ್ಯಾಂಗಳ ನೀರು ತಳ ಸೇರಿತ್ತು. ಇದೀಗ ರಾಜ್ಯದಲ್ಲಿ ಮುಂಗಾರು ಮಳೆಗೂ ಮೊದಲೇ ವರುಣಾರ್ಭಟ ಜೋರಾಗಿದ್ದು, ಕರ್ನಾಟಕದಲ್ಲಿ ಮಳೆಯ ರೌದ್ರ ನರ್ತನ ಎಷ್ಟಿರ ಮಟ್ಟಿಗೆ ಇದೆ ಅಂದ್ರೆ ಒಂದೇ ವಾರದಲ್ಲಿ ಜಲಾಶಯಗಳಿಗೆ ಭರಪೂರ ನೀರು ಹರಿದು ಬಂದಿದೆ. ಒಂದೇ ವಾರದಲ್ಲಿ ರಾಜ್ಯದ 14 ಜಲಾಶಯಗಳಲ್ಲಿ ಒಳ ಹರಿವು ಭರ್ಜರಿ ಹೆಚ್ಚಳವಾಗಿದೆ. ಒಂದೇ ವಾರದಲ್ಲಿ ಬರೋಬ್ಬರಿ 54 ಟಿಎಂಸಿ ನೀರು ಹರಿದು ಬಂದಿದ್ದು,ರಾಜ್ಯದ ರೈತರು ಸಂತಸದಲ್ಲಿದ್ದಾರೆ.
ಮುಂಗಾರು ಮಳೆಯ ಅಬ್ಬರಕ್ಕೂ ಮೊದಲೇ ರಾಜ್ಯದ ಜೀವನಾಡಿಗಳಾದ ಜಲಾಶಯಗಳು ಭರ್ತಿಯಾಗುತ್ತವೆ. ರಾಜ್ಯದ ಜಲಾಶಯಗಳಲ್ಲಿ ನೀರು ಸಂಗ್ರಹಮಟ್ಟವು 50 ಟಿಎಂಸಿಯಷ್ಟು ಹೆಚ್ಚಳವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಇತ್ತ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ ಎದುರಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ ಮುಂಗಾರು ಪ್ರವೇಶದಿಂದ ಕರ್ನಾಟಕದಲ್ಲಿ ಮೇ 23ರಿಂದ ಜೋರು ಮಳೆಯಾಗುತ್ತಿದ್ದು, ಜೂನ್ ಆರಂಭಕ್ಕೂ ಮೊದಲೇ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಮುಂಗಾರು ಆರಂಭದ ದಿನಗಳಲ್ಲಿಯೇ ಮಳೆ ಉತ್ತಮವಾಗಿ ಜಲಾಶಯಕ್ಕೆ ನೀರು ಬರುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ರು, ಅಷ್ಟೇ ಅವಾಂತರಗಳು ಸೃಷ್ಟಿಯಾಗಿವೆ. ಮಳೆ ಹೊಡೆತಕ್ಕೆ ಕಾವೇರಿ, ಕೃಷ್ಣಾ, ತುಂಗಭದ್ರಾ, ಕಬಿನಿ, ಹೇಮಾವತಿ ನದಿಗಳಲ್ಲಿ ನೀರಿನಮಟ್ಟ ಹೆಚ್ಚಾಗಿ ಕೆಆರ್‌ಎಸ್, ಆಲಮಟ್ಟಿ, ಕಬಿನಿ, ನಾರಾಯಣಪುರ ಸೇರಿದಂತೆ ರಾಜ್ಯ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ.
ರಾಜ್ಯದಲ್ಲಿ ಸುರಿದ ಭರಪೂರ ಮಳೆಯಿಂದ ಡ್ಯಾಂಗಳಿಗೆ ಭರ್ಜರಿ ನೀರು ಬಂದಿದೆ. ಮೇ 23 ರಿಂದ ಮೇ 29ರ ನಡುವೆ ಕರ್ನಾಟಕದ 14 ಜಲಾಶಯಗಳಿಗೆ ಒಟ್ಟು 54 ಟಿಎಂಸಿ ನೀರು ಬಂದು ಸೇರಿದೆ. ಕೃಷ್ಣಾಜಲಾನಯನ ಪ್ರದೇಶದ ಡ್ಯಾಂಗಳಲ್ಲಿ 27 ಟಿಎಂಸಿ ಒಳಹರಿವು ಇದ್ರೆ, ಕಾವೇರಿ ಜಲಾನಯನ ಪ್ರದೇಶ ಡ್ಯಾಂಗಳಲ್ಲಿ 19 ಟಿಎಂಸಿ ಒಳ ಹರಿವು ಇದೆ. ಇತರೆ ಜಲಾಶನಯನ ಪ್ರದೇಶದಲ್ಲಿ 8 ಟಿಎಂಸಿ ನೀರು ಇದೆ. ಒಟ್ಟು 54 ಟಿಎಂಸಿ ನೀರು ಹರಿದು ಬಂದಿದೆ.
ಇನ್ನೂ ಲಿಂಗನಮಕ್ಕಿ ಡ್ಯಾಂನಲ್ಲಿ 23 % ನೀರು ಸಂಗ್ರಹವಾಗಿದೆ, ಸೂಪಾ ಡ್ಯಾಂನಲ್ಲಿ ಶೇ. 28 ರಷ್ಟು ನೀರು ಸಂಗ್ರಹವಾದ್ರೆ ವರಾಹಿ ಡ್ಯಾಂನಲ್ಲಿ ಶೇ. 28 ರಷ್ಟು, ಭದ್ರಾ ಡ್ಯಾಂನಲ್ಲಿ 37, ತುಂಗಭದ್ರಾ ಡ್ಯಾಂನಲ್ಲಿ 12, ಘಟಪ್ರಭಾ ಡ್ಯಾಂನಲ್ಲಿ 19, ಮಲಪ್ರಭಾ ಡ್ಯಾಂನಲ್ಲಿ 28, ಆಲಮಟ್ಟಿ ಡ್ಯಾಂನಲ್ಲಿ 37,ಕೆಆರ್‌ಎಸ್ ಡ್ಯಾಂನಲ್ಲಿ 43 ನೀರು ಸಂಗ್ರಹವಾಗಿದ್ದು, 14 ಜಲಾಶಯಗಳಲ್ಲಿ ಸೇರಿ ಹೇಳುವುದಾದ್ರೆ ಒಟ್ಟಾರೆ 33 ರಷ್ಟು ಸಂಗ್ರಹವಾಗಿದೆ.
ಇನ್ನೂ ರಾಜ್ಯದಲ್ಲಿ ಮೇ ತಿಂಗಳಲ್ಲಿಯೇ ಹೆಚ್ಚು ಮಳೆಯಾಗುತ್ತಿದ್ದು, ಜೂನ್ ಹಾಗೂ ಸೆಪ್ಟೆಂಬರ್ ಒಳಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 1 ರಿಂದ ಸೆ.30ರವರೆಗೆ ಅಂದ್ರೇ ನಾಲ್ಕು ತಿಂಗಳ ಅವಧಿಯಲ್ಲಿ ವಾಡಿಕೆಯಂತೆ 852 ಮಿಲಿ ಮೀಟರ್ ಮಳೆಯಾಗಬೇಕು. ಆದರೆ, ಈ ವರ್ಷ ಇದು ಸಾವಿರ ಮಿಲಿ ಮೀಟರ್‌ಗೂ ಅಧಿಕ ಮಳೆಯಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications