Karnataka Dam Water Level: ರಾಜ್ಯದ ಬಹುತೇಕ ಜಲಾಶಯಗಳಿಗೆ ಒಳಹರಿವು ಹೆಚ್ಚಳ; ಡ್ಯಾಂಗಳ ನೀರಿನ ಮಟ್ಟ ಎಷ್ಟು ಗೊತ್ತಾ?
ಬೆಂಗಳೂರು, ಜೂನ್ 19: ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದು, ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಕರ್ನಾಟಕದಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ಮಳೆಯಾದ ಹಿನ್ನೆಲೆ ಕೆರೆ, ಕುಂಟೆ, ಹಳ್ಳ-ಕುಳ್ಳ ಮತ್ತು ನದಿಗಳಲ್ಲಿ ಹರಿವು ಹೆಚ್ಚಾಗಿದೆ. ಇದರಿಂದ ಜಲಾಶಯಗಳಲ್ಲೂ ಒಳಹರಿವು ಹೆಚ್ಚಾಗಿದೆ.
ಕರಾವಳಿ, ಮಲೆನಾಡು ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ಹರಿವು ಹೆಚ್ಚಿದೆ. ಇದರಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಿದೆ. ಹಳೇ ಮೈಸೂರು ಮತ್ತು ಬೆಂಗಳೂರು ಜನತೆಗೆ ಜೀವನಾಡಿಯಾಗಿರುವ ಕೆಆರ್ಎಸ್ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ ಸೇರಿದಂತೆ ಕರ್ನಾಟಕ ಜೂನ್ 19 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರಮುಖ ಜಲಾಶಯಗಳ ನೀರಿನ ಮಟ್ಟ!
| ಕರ್ನಾಟಕದಪ್ರಮುಖ ಜಲಾಶಯಗಳು | ಗರಿಷ್ಠ ನೀರಿನ ಮಟ್ಟ(ಮೀ) | ಇಂದಿನ ನೀರಿನ ಮಟ್ಟ(ಟಿಎಂಸಿ) | ಒಳಹರಿವು(ಕ್ಯೂಸೆಕ್ಸ್) | ಹೊರಹರಿವು(ಕ್ಯೂಸೆಕ್ಸ್) |
| ಹೇಮಾವತಿ ಜಲಾಶಯ | 890.58 | 10.57 | 623 | 250 |
| KRS ಜಲಾಶಯ | 38.04 | 14.34 | 1849 | 466 |
| ಹಾರಂಗಿ ಜಲಾಶಯ | 871.38 | 3.25 | 366 | 200 |
| ಆಲಮಟ್ಟಿ ಜಲಾಶಯ | 519 | 28.25 | 11587 | 430 |
| ತುಂಗಭದ್ರಾ ಜಲಾಶಯ | 497.71 | 5.98 | 801 | 1858 |
| ಮಲಪ್ರಭಾ ಜಲಾಶಯ | 633.80 | 6.50 | 0 | 194 |
| ಲಿಂಗನಮಕ್ಕಿ ಜಲಾಶಯ | 554.44 | 14.24 | 1369 | 2379 |
| ಕಬಿನಿ ಜಲಾಶಯ | 696.13 | 8.86 | 693 | 300 |
| ಭದ್ರಾ ಜಲಾಶಯ | 657.73 | 15.10 | 446 | 342 |
| ಘಟಪ್ರಭಾ ಜಲಾಶಯ | 662.91 | 7.95 | 0 | 113 |
| ಸೂಫಾ ಜಲಾಶಯ | 564.00 | 30.76 | 1873 | 4867 |












Click it and Unblock the Notifications