Karnataka Dam Water Level: ತುಂಗಭದ್ರಾ ಡ್ಯಾಂಗೆ ಹರಿದು ಬಂದು 9 TMC ನೀರು; ರಾಜ್ಯ 14 ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ

ಬೆಂಗಳೂರು, ಜುಲೈ 19: ಕರ್ನಾಟಕ ಎಲ್ಲೆಡೆ ಮಳೆರಾಯನ ಆರ್ಭಟ ಹೆಚ್ಚಳವಾಗಿದ್ದು, ಜಲಾಶಯಗಳಿಗೆ ನಿರಂತರವಾಗಿ ಭರ್ತಿಯಾಗುತ್ತಿವೆ. ಸದ್ಯ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಲು 10 ಅಡಿ ಬಾಕಿ ಇದೆ. ಉಳಿದಂತೆ ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್​​ಕ್ಕೂ ಅಧಿಕ ನೀರು ಹರಿದು ಬರುತ್ತಿದೆ. ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ ಸರಿಸುಮಾರು 9 ಟಿಎಂಸಿ ನೀರು ಹರಿದು ಬಂದಿದೆ. ಈ ಹಿಂದೆ ನೀರಿಲ್ಲದೆ ಬರಿದಾಗಿದ್ದ ಜಲಾಶಯಕ್ಕೆ ಇದೀಗ ಭರ್ಜರಿ ನೀರು ಹರಿದು ಬರುತ್ತಿದೆ. 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 55.196 ಟಿಎಂಸಿ ನೀರು ಸಂಗ್ರಹವಾಗಿದೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಜುಲೈ 19) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dams Water level Today KRS Kabini Bhadra dam water level as on July 19th
ಪ್ರಮುಖ ಜಲಾಶಯಗಳು ಗರಿಷ್ಠ ನೀರಿನ ಮಟ್ಟ ಇಂದಿನ ನೀರಿನ ಮಟ್ಟ ಒಳಹರಿವು ಹೊರಹರಿವು
​ಆಲಮಟ್ಟಿ ಜಲಾಶಯ 519.60 99.32 72,286 65,480
​ತುಂಗಭದ್ರಾ ಜಲಾಶಯ 497.71 46.80 1,06,579 499
​ಕೆ ಆರ್‌ ಎಸ್‌ 38.04 35.28 36772 2448
​ಮಲಪ್ರಭಾ ಜಲಾಶಯ 633.80 15.01 6247 194
​ಲಿಂಗನಮಕ್ಕಿ ಜಲಾಶಯ 554.44 68.89 69228 0
​ಕಬಿನಿ ಜಲಾಶಯ 696.13 18.09 42829 46667
​ಭದ್ರಾ ಜಲಾಶಯ 657.73 36.74 42165 174
​ಘಟಪ್ರಭಾ ಜಲಾಶಯ 662.91 29.85 13829 426
​ಹೇಮಾವತಿ ಜಲಾಶಯ 890.58 28.66 30547 250
​ವರಾಹಿ ಜಲಾಶಯ 594.36 10.30 9940 0
​ಹಾರಂಗಿ ಜಲಾಶಯ 871.38 6.55 10700 10,000
​ಸೂಫಾ 564.00 60.28 33358 0
​ನಾರಾಯಣಪುರ 492.25 31.01 68797 46329
​ವಾಣಿವಿಲಾಸ ಸಾಗರ 652.24 17.97 0 147
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+