Karnataka Dam Water Level: ಭರ್ಜರಿ ಮಳೆ; ಸೂಫಾ ಡ್ಯಾಂ ಸೇರಿದಂತೆ ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ಎಷ್ಟು?

ಬೆಂಗಳೂರು, ಜುಲೈ 10: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅದರಲ್ಲೂ ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜುಲೈ 12ರವರೆಗೆ ಕರಾವಳಿ ಭಾಗ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

50ರ ಸಂಭ್ರಮ ಹೊತ್ತಲ್ಲೇ ಕಬಿನಿ ಡ್ಯಾಂ ಬಹುತೇಕ ಭರ್ತಿಯಾಗಿದ್ದು, ಕೇರಳ ಮತ್ತು ಕಬಿನಿ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಜಲಾಶಯಕ್ಕೆ ನಿತ್ಯ 4-5 ಸಾವಿರ ಕ್ಯೂಸೆಕ್​ ನೀರು ಹರಿದು ಬರುತ್ತಿದೆ. ಅಲ್ಲದೇ ರಾಜ್ಯದ ವಿವಿಧ ಭಾಗದಲ್ಲಿ ಅಬ್ಬರದ ಮಳೆಯಾಗುತ್ತಿದ್ದು, ಬಹುತೇಕ ಜಲಾಶಯಗಳು ಭರ್ತಿಯಾಗುತ್ತಿವೆ.

Karnataka Dams Water level Today KRS Kabini Bhadra dam water level as on July 10th

ಇನ್ನೂ ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರೀ ಬಹುತೇಕ ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಕರೆ, ಕಟ್ಟೆ ಹಾಗೂ ಜಲಾಶಯಗಳು ಭರ್ತಿಯಾಗುತ್ತಿವೆ. ಇತ್ತ ಮಳೆಯ ಅಬ್ಬರಕ್ಕೆ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೂಫಾ ಡ್ಯಾಂ ಬಹುತೇಕ ಭರ್ತಿಯಾಗಿದೆ. ಹಾಗಾದ್ರೆ ಸೂಫಾ ಜಲಾಶಯ ಸೇರಿದಂತೆ ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಜಲಾಶಯಗಳಲ್ಲಿ ಜುಲೈ 10 ರಂದು ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದ ಪ್ರಮುಖ ಜಲಾಶಯಗಳು ಗರಿಷ್ಠ ನೀರಿನ ಮಟ್ಟ(ಮೀ) ಇಂದಿನ ನೀರಿನ ಮಟ್ಟ(ಟಿಎಂಸಿ) ಒಳಹರಿವು(ಕ್ಯೂಸೆಕ್ಸ್) ಹೊರಹರಿವು(ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ 519.60 71.39 78668 430
ತುಂಗಭದ್ರಾ ಜಲಾಶಯ 497.71 22.82 23079 235
ಮಲಪ್ರಭಾ ಜಲಾಶಯ 633.80 10.93 25079 235
ಕೆ ಆರ್‌ ಎಸ್ 38.04 25.59 6600 574
ಲಿಂಗನಮಕ್ಕಿ ಜಲಾಶಯ 554.44 40.71 23420 1405
ಕಬಿನಿ ಜಲಾಶಯ 696.13 18.52 6148 2000
ಭದ್ರಾ ಜಲಾಶಯ 657.73 23.09 7806 156
ಘಟಪ್ರಭಾ ಜಲಾಶಯ 662.91 21.10 25079 235
ಹೇಮಾವತಿ ಜಲಾಶಯ 890.58 18.81 6166 250
ವರಾಗು ಜಲಾಶಯ 594.36 6.41 3058 0
ಹಾರಂಗಿ ಜಲಾಶಯ 871.38 5.76 2121 700
ಸೂಫಾ 564.00 42.15 19685 2032
ನಾರಾಯಣಪುರ ಜಲಾಶಯ 492.25 21.16 201 201
ವಾಣಿವಿಲಾಸ ಸಾಗರ 652.24 18.06 0 147

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+