Karnataka Dam Water Level: ರಾಜ್ಯದಲ್ಲಿ ಅಬ್ಬರದ ಮಳೆ; ಆಲಮಟ್ಟಿ ಸೇರಿದಂತೆ ಬಹುತೇಕ ಡ್ಯಾಂಗಳ ನೀರಿನ ಮಟ್ಟ ಹೆಚ್ಚಳ
ಬೆಂಗಳೂರು, ಜುಲೈ 05: ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಅಬ್ಬರದ ಮಳೆಯಿಂದಾಗಿ ಕೆರೆ, ಕುಂಟೆ, ಹಳ್ಳ-ಕುಳ್ಳ ಮತ್ತು ನದಿಗಳಲ್ಲಿ ಹರಿವು ಹೆಚ್ಚಾಗಿದೆ. ಆಲಮಟ್ಟಿ ಜಲಾಶಯ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಶುಕ್ರವಾರ ಬೆಳಗ್ಗೆ 55112.08 ಮೀಟರ್ ಎತ್ತರದಲ್ಲಿ 44.36 ಟಿಎಂಸಿ ನೀರು ಸಂಗ್ರಹವಾಗಿದೆ.
ಕೃಷ್ಣಾ ನದಿ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ ಸೇರಿದಂತೆ ಅಲ್ಲಿನ ಪಶ್ಚಿಮ ಘಟ್ಟಗಳಲ್ಲಿ ಕಳೆದ ಕಲೆ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದರಿಂದ ಕೃಷ್ಣಾ ನದಿಗೆ ಒಳಹರಿವು ಹೆಚ್ಚುತ್ತಿದೆ. ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ ಸೇರಿದಂತೆ ಕರ್ನಾಟಕ ಜುಲೈ 05 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

| ಕರ್ನಾಟಕದ ಪ್ರಮುಖ ಜಲಾಶಯಗಳು | ಗರಿಷ್ಠ ನೀರಿನ ಮಟ್ಟ(ಮೀ) | ಇಂದಿನ ನೀರಿನ ಮಟ್ಟ(ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
| ಕೆಆರ್ಎಸ್ ಜಲಾಶಯ | 38.04 | 22.27 | 11189 | 540 |
| ಹಾರಂಗಿ ಜಲಾಶಯ | 871.38 | 4.58 | 2313 | 200 |
| ಆಲಮಟ್ಟಿ ಜಲಾಶಯ | 519.60 | 44.36 | 34584 | 430 |
| ತುಂಗಭದ್ರಾ ಜಲಾಶಯ | 497.71 | 10.09 | 15,492 | 356 |
| ಮಲಪ್ರಭಾ ಜಲಾಶಯ | 633.80 | 7.11 | 9129 | 194 |
| ಲಿಂಗನಮಕ್ಕಿ ಜಲಾಶಯ | 554.44 | 27.75 | 60239 | 586 |
| ಕಬಿನಿ ಜಲಾಶಯ | 696.13 | 17.25 | 6874 | 1333 |
| ಭದ್ರಾ ಜಲಾಶಯ | 657.73 | 18.98 | 4908 | 348 |
| ಘಟಪ್ರಭಾ ಜಲಾಶಯ | 662.91 | 12.37 | 13191 | 107 |
| ಹೇಮಾವತಿ ಜಲಾಶಯ | 890.58 | 15.83 | 6230 | 250 |
| ಸೂಫಾ ಜಲಾಶಯ | 564.00 | 34.59 | 26359 | 1718 |












Click it and Unblock the Notifications