Karnataka Dam Water Level: ಭಾರೀ ಮಳೆಗೆ KRS ಜಲಾಶಯ ಸೇರಿದಂತೆ ಹಲವು ಡ್ಯಾಂಗಳ ಒಳಹರಿವು ಹೆಚ್ಚಳ: ಇಲ್ಲಿದೆ ಮಾಹಿತಿ
ಬೆಂಗಳೂರು, ಜೂನ್ 22: ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂಗಾರು ಚುರುಕುಕೊಂಡ ಬೆನ್ನಲ್ಲೇ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಈ ವರ್ಷ ಮುಂಗಾರು ಆರಂಭಕ್ಕೂ ಮೊದಲೇ ರಾಜ್ಯದಲ್ಲಿ ಭರ್ಜರಿ ಮಳೆಯಾಗಿದ್ದು, ಅರುಣನ ಆಗಮನದಿಂದಾಗಿ ಕೆರೆ, ಕುಂಟೆ, ಹಳ್ಳ-ಕುಳ್ಳ ಮತ್ತು ನದಿಗಳಲ್ಲಿ ಹರಿವು ಹೆಚ್ಚಾಗಿದೆ. ಇದರಿಂದ ಜಲಾಶಯಗಳಲ್ಲೂ ಒಳಹರಿವು ಹೆಚ್ಚಾಗಿದೆ. ಇನ್ನೂ ಕರಾವಳಿ ಹಾಗೂ ಮಲೆನಾಡು ಭಾಗದ ಬಹುತೇಕ ಜಿಲ್ಲೆಗಳಲ್ಲಿ ಜೂನ್ 23ರಿಂದ ಭಾರಿ ಮಳೆಯಾಗಲಿದೆ. ಅಲ್ಲದೇ ಜೂನ್ 25ರ ವರೆಗೆ ಕರಾವಳಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಇನ್ನೂ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಕರ್ನಾಟಕದ ಬಹುತೇಕ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ ಸೇರಿದಂತೆ ಕರ್ನಾಟಕ ಜೂನ್ 22 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಮುಖ ಜಲಾಶಯಗಳ ನೀರಿನ ಮಟ್ಟ!
| ಕರ್ನಾಟಕದ ಪ್ರಮುಖ ಜಲಾಶಯಗಳು | ಗರಿಷ್ಠ ನೀರಿನ ಮಟ್ಟ(ಮೀ) | ಇಂದಿನ ನೀರಿನ ಮಟ್ಟ(ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
| ಕೆಆರ್ಎಸ್ ಜಲಾಶಯ | 38.04 | 14.15 | 1338 | 467 |
| ಹಾರಂಗಿ ಜಲಾಶಯ | 871.38 | 3.27 | 289 | 200 |
| ಆಲಮಟ್ಟಿ ಜಲಾಶಯ | 519.60 | 29.13 | 4318 | 430 |
| ತುಂಗಭದ್ರಾ ಜಲಾಶಯ | 497.71 | 5.69 | 831 | 1888 |
| ಮಲಪ್ರಭಾ ಜಲಾಶಯ | 633.80 | 6.45 | 0 | 194 |
| ಲಿಂಗನಮಕ್ಕಿ ಜಲಾಶಯ | 554.44 | 13.90 | 903 | 2417 |
| ಕಬಿನಿ ಜಲಾಶಯ | 696.13 | 8.97 | 1000 | 300 |
| ಭದ್ರಾ ಜಲಾಶಯ | 657.73 | 15.17 | 562 | 343 |
| ಘಟಪ್ರಭಾ ಜಲಾಶಯ | 662.91 | 7.91 | 0 | 113 |
| ಹೇಮಾವತಿ ಜಲಾಶಯ | 890 | 10.73 | 1234 | 200 |
| ಸೂಫಾ ಜಲಾಶಯ | 564.00 | 30.42 | 2438 | 4131 |












Click it and Unblock the Notifications