Karnataka Dams Water Level: ಆಗಸ್ಟ್ 10ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
Karnataka Dam Water Level: 2024ರ ಜೂನ್ ಆರಂಭದಿಂದಲೇ ಮುಂಗಾರು ಮಳೆ ಚುರುಕು ಪಡೆದ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆ, ನದಿ, ಜಲಪಾತಗಳು ಸೇರಿ ಅನೇಕ ನೀರಿನ ಮೂಲಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಹಲವು ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಇನ್ನು ಕೆಲವು ತುಂಬುವ ಹಂತವನ್ನು ತಲುಪಿದೆ.
ಭಾರೀ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಅವಾಂತರಗಳೇ ಸೃಷ್ಟಿಯಾಗಿವೆ. ಅಲ್ಲದೆ, ಜಲಾಶಯಗಳು ಕೂಡ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗಳಿಗೆ ಹರಿಸಲಾಗುತ್ತಿದೆ. ಹಾಗಾದರೆ ಇಂದು (ಆಗಸ್ಟ್ 10) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿಯಾಗಿರುವ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 49.01 ಟಿಎಂಸಿ
* ಒಳಹರಿವು - 17403 ಕ್ಯೂಸೆಕ್
* ಹೊರಹರಿವು - 12,025 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13 ಮೀಟರ್
* ಇಂದಿನ ನೀರಿನ ಮಟ್ಟ - 19.13 ಟಿಎಂಸಿ
* ಒಳಹರಿವು - 6020 ಕ್ಯೂಸೆಕ್
* ಹೊರಹರಿವು - 6350 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 108.50 ಟಿಎಂಸಿ
* ಒಳಹರಿವು - 2,49,412 ಕ್ಯೂಸೆಕ್
* ಹೊರಹರಿವು - 1,61,797 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ- 104.70 ಟಿಎಂಸಿ
* ಒಳಹರಿವು - 45,086 ಕ್ಯೂಸೆಕ್
* ಹೊರಹರಿವು - 32,074 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.8 ಮೀಟರ್
* ಇಂದಿನ ನೀರಿನ ಮಟ್ಟ - 34.17 ಟಿಎಂಸಿ
* ಒಳಹರಿವು - 3,000 ಕ್ಯೂಸೆಕ್
* ಹೊರಹರಿವು - 2,194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44 ಮೀಟರ್
* ಇಂದಿನ ನೀರಿನ ಮಟ್ಟ - 143.25 ಟಿಎಂಸಿ
* ಒಳಹರಿವು - 11,007 ಕ್ಯೂಸೆಕ್
* ಹೊರಹರಿವು - 7,189 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73 ಮೀಟರ್
* ಇಂದಿನ ನೀರಿನ ಮಟ್ಟ - 64.65 ಟಿಎಂಸಿ
* ಒಳಹರಿವು - 8,825 ಕ್ಯೂಸೆಕ್
* ಹೊರಹರಿವು - 6,811 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91 ಮೀಟರ್
* ಇಂದಿನ ನೀರಿನ ಮಟ್ಟ - 50.55 ಟಿಎಂಸಿ
* ಒಳಹರಿವು - 10,406 ಕ್ಯೂಸೆಕ್
* ಹೊರಹರಿವು - 3,534 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58 ಮೀಟರ್
* ಇಂದಿನ ನೀರಿನ ಮಟ್ಟ - 37.10 ಟಿಎಂಸಿ
* ಒಳಹರಿವು - 8,519 ಕ್ಯೂಸೆಕ್
* ಹೊರಹರಿವು - 8,475 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38 ಮೀಟರ್
* ಇಂದಿನ ನೀರಿನ ಮಟ್ಟ - 7.66 ಟಿಎಂಸಿ
* ಒಳಹರಿವು - 1,770 ಕ್ಯೂಸೆಕ್
* ಹೊರಹರಿವು - 3,500 ಕ್ಯೂಸೆಕ್












Click it and Unblock the Notifications