Karnataka Dam Water Level: ಲಿಂಗನಮಕ್ಕಿ, ಹಾರಂಗಿ ಸೇರಿ ರಾಜ್ಯದ ಆಣೆಕಟ್ಟುಗಳ ಇಂದಿನ ನೀರಿನ ಮಟ್ಟ? ವಿವರ
ಶಿವಮೊಗ್ಗ, ಜುಲೈ 07: ರಾಜ್ಯದ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶರಾವತಿ ನದಿಗೆ ಮೈದುಂಬಿಕೊಂಡಿದೆ. ಪರಿಣಾಮವಾಗಿ ಸಾಗರ ತಾಲೂಕಿನಲ್ಲಿ ನಿರ್ಮಿಸಿರುವ 'ಲಿಂಗನಮಕ್ಕಿ ಜಲಾಶಯ' (Linganamakki Dam Water Level) ನಲ್ಲಿ ಒಳಹರಿವು ಹೆಚ್ಚಾಗಿದೆ. ಈ ಡ್ಯಾಂ ಮಾತ್ರವಲ್ಲದೇ ಹಾರಂಗಿ, ಮಲಪ್ರಭಾ, ಹೇಮಾವತಿ ಇನ್ನಿತರ ಜಲಾಶಯಗಳ ಒಳಹರಿವು ಜುಲೈ 7ರಂದು ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಮುಂಗಾರು ಮಳೆ ಪಶ್ಚಿಮ ಘಟ್ಟಗಳಲ್ಲಿ ಮುಂದುವರಿದಿದೆ. ಹೀಗಾಗಿ ಶವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾಗರ ತಾಲೋಕಿನ ಕಾರ್ಗಲ್ ನಲ್ಲಿ ಶರಾವತಿ ನದಿ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಒಳಹರಿವು ಏರಿಕೆ ಆಗಿದೆ.

ರಾಜ್ಯ ಹವಾಮಾನ ಇಲಾಖೆ ಪ್ರಕಾರ, ಜುಲೈ 7ರಂದು ಲಿಂಗನಮಕ್ಕಿ ಡ್ಯಾಂ ಒಳಹರಿವು 29,044 ಕ್ಯೂಸೆಕ್ ನಷ್ಟಿದೆ. ಇನ್ನೂ ಹೊರಹರಿವು 1570.31 ಕ್ಯೂಸೆಕ್ ನಷ್ಟಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಶರಾವತಿ ನದಿಗೆ ಮಳೆ ನೀರು ಹೇರಳವಾಗಿ ಹರಿದು ಬರುತ್ತಿದೆ. ಹೀಗಾಗಿ ಒಳಹರಿವು ಏರಿಕೆ ಆಗಿದೆ.
ಜಲಾಶಯದ ಗರಿಷ್ಟ ಮಟ್ಟ
ಇನ್ನೂ ಲಿಂಗನಮಕ್ಕಿ ಜಲಾಶಯದ ಗರಿಷ್ಟ ಮಟ್ಟ 1819 ಅಡಿ ಆದರೆ, ಸದ್ಯ ಇದರಲ್ಲಿ 1766.70 ಅಡಿಯಷ್ಟು ನೀರು ತುಂಬಿದೆ. ಇನ್ನೂ ಮುಂದಿನ ದಿನಗಳಲ್ಲಿ ಡ್ಯಾಂ ಪೂರ್ಣವಾಗಿ ಭರ್ತಿಯಾಗಲಿದೆ. ಒಟ್ಟು 151.64 TMC ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 35.38 TMC ಟಿಎಂಸಿ ನೀರು ಸಂಗ್ರಹವಾಗಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದು ಶರಾವತಿ ಹಿನ್ನೀರಿನಲ್ಲಿ ನೀರಿನ ಕೊರತೆ ಉಂಟಾಗಿ ಲಾಂಚ್ ಸೇವೆಯಲ್ಲಿ ಸ್ಥಗಿತಗೊಂಡಿತ್ತು. ಇದೀಗ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಜುಲೈ 4ರಿಂದ 'ಹಸಿರುಮಕ್ಕಿ ಲಾಂಚ್' ಪುನರಾರಂಭಗೊಂಡಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಇತರ ಡ್ಯಾಂಗಳ ನೀರಿನ ಮಟ್ಟ, ಪಟ್ಟಿ
* ಹಾರಂಗಿ ಜಲಾಶಯ
ಒಟ್ಟು ಸಾಮರ್ಥ್ಯ: 8.50 ಟಿಎಂಸಿ
ಇಂದಿನ ಸಾಮರ್ಥ್ಯ: 5.26 ಟಿಎಂಸಿ
ಒಳ ಹರಿವು : 3270 ಕ್ಯೂಸೆಕ್
ಹೊರ ಹರಿವು: 200 ಕ್ಯೂಸೆಕ್
* ಘಟಪ್ರಭಾ ಜಲಾಶಯ
ಒಟ್ಟು ಸಾಮರ್ಥ್ಯ: 51 ಟಿಎಂಸಿ
ಇಂದಿನ ಸಾಮರ್ಥ್ಯ: 15 ಟಿಎಂಸಿ
ಒಳ ಹರಿವು : 17058 ಕ್ಯೂಸೆಕ್
ಹೊರ ಹರಿವು: 109 ಕ್ಯೂಸೆಕ್
* ಮಲಪ್ರಭಾ ಜಲಾಶಯ
ಒಟ್ಟು ಸಾಮರ್ಥ್ಯ: 37.73 ಟಿಎಂಸಿ
ಇಂದಿನ ಸಾಮರ್ಥ್ಯ: 8.78 ಟಿಎಂಸಿ
ಒಳ ಹರಿವು : 7543 ಕ್ಯೂಸೆಕ್
ಹೊರ ಹರಿವು: 194 ಕ್ಯೂಸೆಕ್
* ಹೇಮಾವತಿ ಜಲಾಶಯ
ಒಟ್ಟು ಸಾಮರ್ಥ್ಯ: 37.103 ಟಿಎಂಸಿ
ಇಂದಿನ ಸಾಮರ್ಥ್ಯ: 17.599 ಟಿಎಂಸಿ
ಒಳಹರಿವು: 7796 ಕ್ಯೂಸೆಕ್
ಹೊರಹರಿವು: 250 ಕ್ಯೂಸೆಕ್
ರಾಜ್ಯಾದ್ಯಂತ ಮಳೆ ಅಬ್ಬರ ಇಲ್ಲದಿದ್ದರೂ ಮಲೆನಾಡು ಹಾಗೂ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಡ್ಯಾಂಗಳಲ್ಲಿ ಹೆಚ್ಚು ನೀರು ಸಂಗ್ರಹವಾಗುವ ನಿರೀಕ್ಷೆ ಇದೆ.












Click it and Unblock the Notifications