Rain Alert: ಮಳೆ.. ಮಳೆ.. ತುಂಬುತ್ತಿವೆ ಕರ್ನಾಟಕದ ಡ್ಯಾಂಗಳು!
ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ, ಹೀಗಾಗಿ ಕರ್ನಾಟಕದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಅದರಲ್ಲೂ ಕರ್ನಾಟಕದ ಜೀವನಾಡಿ ಮಲೆನಾಡು ಪ್ರದೇಶದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿದ್ದು, ನದಿಗಳ ನೀರಿನ ರಭಸಕ್ಕೆ ಡ್ಯಾಂಗಳು ಕೂಡ ತುಂಬಿ ತುಳುಕಿವೆ. ಹಾಗಾದ್ರೆ ಕರ್ನಾಟಕದ ಯಾವ ಯಾವ ಡ್ಯಾಂಗೆ ಎಷ್ಟು ನೀರು ಹರಿದು ಬರುತ್ತಿದೆ? ಬನ್ನಿ ತಿಳಿಯೋಣ.
1 ತಿಂಗಳ ಹಿಂದೆ ಅಂದರೆ ಏಪ್ರಿಲ್ 2024 ರಲ್ಲಿ ಒಂದೊಂದು ಹನಿ ನೀರಿಗೂ ಕಷ್ಟ ಆಗಿತ್ತು. ಕರ್ನಾಟಕದ ಯಾವುದೇ ಹಳ್ಳಿಗೆ ಹೋದರೂ & ಯಾವುದೇ ನಗರಗಳಿಗೆ ಹೋಗಿ ಅಲ್ಲೆಲ್ಲಾ ನೀರಿಗಾಗಿ ದೊಡ್ಡ ಹೋರಾಟ ಶುರುವಾಗಿತ್ತು. ಜನರು ಪ್ರತಿ ದಿನ ತಮ್ಮ ಕೆಲಸವನ್ನು ಬಿಟ್ಟು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹೀಗಿದ್ದಾಗಲೇ ಮಳೆರಾಯ ಕರ್ನಾಟಕದ ಮೇಲೆ ಕರುಣೆಯ ತೋರಿಸಿ ಮಳೆ ಸುರಿಸಿದ್ದ.

ನೀರು.. ನೀರು.. ನೀರು..
ನೋಡ ನೋಡುತ್ತಲೇ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಗುಡುಗು ಸಹಿತ ಭಾರಿ ಮಳೆ ಕೂಡ ಬಂದಿತ್ತು. ಈ ಮೂಲಕ ನೀರಿನ ಸಂಕಷ್ಟ ಬಗೆಹರಿದಿದ್ದು ಮುಂದಿನ ಕೆಲ ದಿನಗಳ ಕಾಲ, ಹೀಗೆ ಮತ್ತಷ್ಟು ಮಳೆ ಬೀಳುವ ಮನ್ಸೂಚನೆ ನೀಡಲಾಗಿದೆ. ಹಾಗಾದ್ರೆ ಕರ್ನಾಟಕದ ಯಾವ ಡ್ಯಾಂನಲ್ಲಿ ಎಷ್ಟು ನೀರು ಇದೆ? ಕುಡಿಯುವ ನೀರಿನ ಸಮಸ್ಯೆ ಸರಿಯಾಯ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಕರ್ನಾಟಕದ ಡ್ಯಾಂಗಳ ನೀರಿನ ಮಟ್ಟ
1) ಕೆಆರ್‌ಎಸ್ ಜಲಾಶಯ: 49.45 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಡ್ಯಾಂ ಇದೀಗ 12.27 ಟಿಎಂಸಿ ನೀರು ಸಂಗ್ರಹ ಹೊಂದಿದೆ. ಹಾಗೇ ಕೆಆರ್‌ಎಸ್ ಜಲಾಶಯಕ್ಕೆ 2,893 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ಡ್ಯಾಂನಲ್ಲಿ ಭರ್ತಿ 11.13 ಟಿಎಂಸಿ ನೀರು ಸಂಗ್ರಹ ಆಗಿತ್ತು. ಇದೀಗ 537 ಕ್ಯುಸೆಕ್ ನೀರನ್ನು KRS ಡ್ಯಾಂನಿಂದ ಹೊರಗೆ ಬಿಡಲಾಗುತ್ತಿದೆ.
2) ಕಬಿನಿ ಜಲಾಶಯ: ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಡ್ಯಾಂ ಕರ್ನಾಟಕದ ಪ್ರಮುಖ ಡ್ಯಾಂ ಪೈಕಿ ಒಂದಾಗಿದೆ. ಈ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹ ಮಾಡಬಹುದು. ಆದರೆ ಈಗ ಕೇವಲ 7.55 ಟಿಎಂಸಿ ನೀರು ಸಂಗ್ರಹ ಇದ್ದು, 1034 ಕ್ಯುಸೆಕ್ ನೀರು ಒಳಗೆ ಹರಿದು ಬರುತ್ತಿದೆ. ಹೀಗೆ ಭಾರಿ ಮಳೆಯ ಹಿನ್ನೆಲೆ ಮೈಸೂರಿನ ಈ ಜಲಾಶಯಕ್ಕೆ ಭಾರಿ ನೀರು ಬರುತ್ತಿದ್ದು, 300 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
3) ಹೇಮಾವತಿ ಡ್ಯಾಂ: ಕಾವೇರಿ ಉಪನದಿ ಹೇಮಾವತಿಗೆ ಕಟ್ಟಿದ ಡ್ಯಾಂ ಹೇಮಾವತಿ ಜಲಾಶಯ. ಇಲ್ಲಿ 37.10 ಟಿಎಂಸಿ ಸಾಮರ್ಥ್ಯ ಇದ್ದು, ಬರದ ಕಾರಣಕ್ಕೆ ಹೇಮಾವತಿ ಜಲಾಶಯ ಬರಿದಾಗುತ್ತಿದೆ. ಇದೀಗ 9.83 ಟಿಎಂಸಿ ಬಾಕಿ ಉಳಿದಿದೆ. ಆದರೆ ಕಳೆದ ವರ್ಷ ಇದೇ ವೇಳೆಗೆ ಬರೋಬ್ಬರಿ 17.17 ಟಿಎಂಸಿ ನೀರು ಹೇಮಾವತಿ ಡ್ಯಾಂನಲ್ಲಿ ಸಂಗ್ರಹ ಆಗಿತ್ತು. 769 ಕ್ಯುಸೆಕ್ ಒಳಹರಿವು ಇದ್ದು, 250 ಕ್ಯುಸೆಕ್ ಹೊರಗೆ ಬಿಡಲಾಗುತ್ತಿದೆ.
4) ತುಂಗಭದ್ರಾ ಜಲಾಶಯ: ತುಂಗಭದ್ರಾ ಡ್ಯಾಂನಲ್ಲಿ ನೀರೆ ಇಲ್ಲ, ಹೀಗಾಗಿ ಡೆಡ್ ಸ್ಟೋರೆಜ್‌ಗೆ ಡ್ಯಾಂ ತಲುಪಿದೆ. ಗರಿಷ್ಠ 105.79 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ ಕೇವಲ 3.35 ಟಿಎಂಸಿ ನೀರು ಸಂಗ್ರಹ ಉಳಿದಿದೆ. ಕಳೆದ ವರ್ಷ 4.30 ಟಿಎಂಸಿ ನೀರು ಸಂಗ್ರಹ ಇತ್ತು ಈ ವರ್ಷ ಜಲಾಶಯದಲ್ಲಿ ನೀರು ಡೆಡ್ ಸ್ಟೋರೇಜ್ ಹಂತ ತಲುಪಿದ್ದು, ಒಳಹರಿವು ನಿಂತು ಹೋಗಿದೆ.
5) ಆಲಮಟ್ಟಿ ಡ್ಯಾಂ: ಅತಿದೊಡ್ಡ ಡ್ಯಾಂಗಳ ಪೈಕಿ ಆಲಮಟ್ಟಿ ಕೂಡ ಒಂದಾಗಿದೆ. ಆದರೆ ಆಲಮಟ್ಟಿ ಕೂಡ ಮಳೆ ಇಲ್ಲದೆ ಬರಿದಾಗಿದ್ದು ಇಲ್ಲಿಗೆ ಮಹಾರಾಷ್ಟ್ರದಿಂದ ನೀರು ಬರಬೇಕಿದೆ. ಜಲಾಶಯದ ಒಟ್ಟು ಸಾಮರ್ಥ್ಯ 123.08 ಟಿಎಂಸಿ ಆಗಿದ್ರೂ 22.16 ಟಿಎಂಸಿ ನೀರು ಬಾಕಿ ಉಳಿದಿದೆ. ಕಳೆದ ವರ್ಷ ಈ ವೇಳೆಗೆ 21.90 ಟಿಎಂಸಿ ನೀರು ಆಲಮಟ್ಟಿ ಜಲಾಶಯದಲ್ಲಿ ಇತ್ತು. ಜಲಾಶಯದಿಂದ ಒಟ್ಟಾರೆ 3,530 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
ಈ ಜಿಲ್ಲೆಗಳಿಗೆ ಭಾರಿ ಮಳೆ!
ಇದೀಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಸೇರಿದಂತೆ ಕರ್ನಾಟಕದ ಮಲೆನಾಡು ಭಾಗ ಮತ್ತು ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ ಸುರಿಯಲಿದೆ. ಆ ಪ್ರಕಾರ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ & ಯಾದಗಿರಿ ಜಿಲ್ಲೆಗಳು ಸಾಮಾನ್ಯ ಮಳೆ ಪಡೆಯಲಿವೆ. ಹಾಗೇ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ & ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದ್ದು, ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ ಎಂದು ಎಚ್ಚರಿಸಲಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಬೋರ್‌ಗಳಲ್ಲಿ ನೀರು ಖಾಲಿ!
ಅಂತರ್ಜಲ ಕುಸಿತ ದೊಡ್ಡ ಸಮಸ್ಯೆ ತಂದೊಡ್ಡಿದೆ, ಕರ್ನಾಟಕದ ಬಹುತೇಕ ಬೋರ್‌ಗಳಲ್ಲಿ ನೀರು ಖಾಲಿ ಆಗಿದೆ. ಅಂತರ್ಜಲ ಕುಸಿಯುತ್ತಿರುವ ಕಾರಣಕ್ಕೆ ಜನರೀಗ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ಮಳೆ ಬರುತ್ತಿದ್ದು ಕೆರೆ ಮತ್ತು ತೊರೆಗಳು ನಿಧಾನವಾಗಿ ತುಂಬುತ್ತಿವೆ. ಈ ನೀರಿಂದ ಇನ್ನೂ ಒಂದು ಇಲ್ಲ 2 ತಿಂಗಳು ದಿನದೂಡಬಹುದು. ಆದರೆ ಜೂನ್ & ಜುಲೈಗೆ ಒಳ್ಳೆಯ ಮಳೆಯು ಬೀಳುವ ನಿರೀಕ್ಷೆ ಇರುವುದು ಖುಷಿ ಕೊಡುತ್ತಿದೆ. ಹೀಗೆ ರೈತರು ಉತ್ತಮವಾಗಿ ಮುಂಗಾರು ಮಳೆ ಬರಲಿದೆ ಅಂತಾ ಕಾಯುತ್ತಿದ್ದಾರೆ. ಈಗಾಗಲೇ, ಕೇರಳಕ್ಕೆ ಮುಂಗಾರು ಮಾರುತಗಳು ಎಂಟ್ರಿ ಕೊಟ್ಟಿದ್ದು. ಇನ್ನೇನು ಕರ್ನಾಟಕದಲ್ಲಿ ಕೂಡ ಮುಂಗಾರು ಮಳೆ ಅಬ್ಬರಿಸಲಿದೆ.












Click it and Unblock the Notifications