Dam Water Level Today: ಉತ್ತಮ ಮಳೆ, ರಾಜ್ಯದ ವಿವಿಧ ಡ್ಯಾಂಗಳ ನೀರು ಸಂಗ್ರಹ ಹೆಚ್ಚಳ: ಒಳ-ಹೊರ ಹರಿವು ಎಷ್ಟಿದೆ?
ಬೆಂಗಳೂರು, ಜೂನ್ 11: ಮುಂಗಾರು ಮಳೆ ರಾಜ್ಯದಲ್ಲಿ ಅಬ್ಬರ ಶುರುವಿಟ್ಟುಕೊಂಡಿದೆ. ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲೂ ಕನಿಷ್ಠ ನಾಲ್ಕೈದು ಕಡೆಗಳಲ್ಲಿ ಮಳೆ ದರ್ಶನ ನೀಡಿದೆ. ಕರಾವಳಿ, ಒಳನಾಡು, ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಕಳೆದೊಂದು ವಾರದಿಂದ ಕೊಡಗು, ಸೋಮವಾರ ಪೇಟೆ, ಮಂಡ್ಯ, ಮೈಸೂರು ಭಾಗಗಳಲ್ಲಿ ಉತ್ತಮ ಮಳೆ ಆಗಿದೆ. ಕೆಆರ್‌ಎಸ್, ಕಬಿನಿ, ಹಾರಂಗಿ ಹಾಗೂ ಭದ್ರಾ ಡ್ಯಾಂಗಳಲ್ಲಿ ಒಳಹರಿವು ಹೆಚ್ಚಾಗಿದೆ. ಕೆಲವೆಡೆ ಜಲಾಶಯಗಳ ನೀರನ್ನು ಹೊರಕ್ಕೆ ಬಿಡಲಾಗುತ್ತದೆ.
ನಿರಂತರ ಮಳೆಯಿಂದಾಗಿ ಕಬಿನಿ ಮತ್ತು ಹಾರಂಗಿ ಜಲಾಶಯಗಳಲ್ಲಿ ಕ್ರಮವಾಗಿ 5000 ಕ್ಯೂಸೆಕ್ ಮತ್ತು 2000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಹೊರ ಹರಿವು ಜೊತೆಗೆ ವ್ಯಾಪಕ ಮಳೆಯಿಂದಾಗಿ ನದಿ ಹಾಗೂ ಡ್ಯಾಂಗಳ ಒಳಹರಿವು ಏರಿಕೆಯಾಗಿದೆ. ಕಬಿನಿ ಅಣೆಕೆಟ್ಟಿನಲ್ಲಿ ಇವತ್ತಿಗೆ 2851 ಅಡಿಯಷ್ಟು ನೀರು ಸಂಗ್ರಹವಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ (ಜೂನ್ 11) ನೀರಿನ ಸಂಗ್ರಹ ವಿವರ ಇಲ್ಲಿದೆ.

ಹಾರಂಗಿ ಜಲಾಶಯದ ಮಾಹಿತಿ
ಜಲಾಶಯದ ಒಟ್ಟು ಎತ್ತರ: 2859 ಅಡಿಗಳು
ಅಣೆಕಟ್ಟಿನ ಒಟ್ಟು ನೀರು ಸಾಮರ್ಥ್ಯ: 8.5 ಟಿಎಂಸಿ
ಇಂದಿನ ನೀರಿನ ಸಂಗ್ರಹ: 6.247 ಟಿಎಂಸಿ
ಒಳಹರಿವು :1200 ಕ್ಯೂಸೆಕ್
ಹೊರ ಹರಿವು: 2000 ಕ್ಯೂಸೆಕ್
ಕಬಿನಿ ಅಣೆಕಟ್ಟಿನ ಇಂದಿನ ವಿವರ
ಡ್ಯಾಂ ಒಟ್ಟು ಎತ್ತರ: 2284 ಅಡಿಗಳು
ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ಸಂಗ್ರಹ: 15.89 ಟಿಎಂಸಿ
ಒಳಹರಿವು: 1840 ಕ್ಯೂಸೆಕ್
ಹೊರಹರಿವು ಎಷ್ದಟಿದೆ: 5000 ಕ್ಯೂಸೆಕ್
KRS ಜಲಾಶಯದ ನೀರು ಸಂಗ್ರಹ ಅಪ್ಡೇಟ್ಸ್
ಒಟ್ಟು ಜಲಾಶಯದ ಎತ್ತರ: 124.80 ಅಡಿ
ಪೂರ್ಣ ನೀರಿನ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರಿನ ಸಂಗ್ರಹ : 30.241 ಟಿಎಂಸಿ
ಒಳಹರಿವು: 2645 ಕ್ಯೂಸೆಕ್
ಹೊರ ಹರಿವು: 884 ಕ್ಯೂಸೆಕ್
24 ಗಂಟೆಗಳಲ್ಲಿ ದಾಖಲಾದ ಮಳೆ ವಿವರ
ರಾಜ್ಯದಲ್ಲಿ ಮುಂದಿನ ಮೂರು ದಿನ ಸಾಧಾರಣದಿಂದ ಭಾರೀ ಮಳೆ, ಕೆಲವೆಡೆ ಅತ್ಯಧಿಕ ಮಳೆ ಬರುವ ಮುನ್ಸೂಚನೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ 77ಮಿ.ಮೀ, ದಾವಣಗೆರೆ 72 ಮಿ.ಮೀ, ಮೈಸೂರು 72 ಮಿ.ಮೀ, ದಕ್ಷಿಣ ಕನ್ನಡ 67ಮಿ.ಮೀ, ಬೆಂಗಳೂರು ನಗರ 55 ಮಿ.ಮೀ, ಚಾಮರಾಜನಗರ 49 ಮಿ.ಮೀ, ಬೆಂಗಳೂರು ಗ್ರಾಮಾಂತರ 48ಮಿ.ಮೀ, ಮಂಡ್ಯ 41ಮಿ.ಮೀ, ಯಾದಗಿರಿ 40ಮಿ.ಮೀ, ಉತ್ತರ ಕನ್ನಡ 40 ಮಿ.ಮೀ, ಕೋಲಾರ 40 ಮಿ.ಮೀ, ಚಿಕ್ಕಬಳ್ಳಾಪುರ- 39ಮಿ.ಮೀ, ವಿಜಯನಗರ 38ಮಿ.ಮೀ, ಹಾವೇರಿ- 38ಮಿ.ಮೀ ಹಾಗೂ ಕೊಡಗು 32 ಮಿ.ಮೀ. ಮಳೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.












Click it and Unblock the Notifications