Dam Storage Today: ಕಬಿನಿ ಒಳಹರಿವು 12,227 ಕ್ಯೂಸೆಕ್! ಕರ್ನಾಟಕ ಪ್ರಮುಖ ಅಣೆಕಟ್ಟಗಳ ಇಂದಿನ ಮಟ್ಟ

ಬೆಂಗಳೂರು, ಆಗಸ್ಟ್ 29: ಕರ್ನಾಟಕದಾದ್ಯಂತ ಅದರಲ್ಲೂ ಹೆಚ್ಚಾಗಿ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಸಾಲಿಗೆ ಹೊಂದಿಕೊಂಡಿರುವ ಮಲೆನಾಡು, ಅರೇ ಮಲೆನಾಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ರಾಜ್ಯದ ಒಳನಾಡಿನ ಕೆಲವೆಡೆ ಜೋರು ಮಳೆ ಆಗುತ್ತಿದೆ. ಇದರಿಂದಾಗಿ ಈಗಾಗಲೇ ತುಂಬಿರುವ ನದಿಗಳು ಹಾಗೂ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುವ ಪ್ರಕ್ರಿಯೆ ಮುಂದುವರಿದಿದೆ.

ಕಬಿನಿ ಡ್ಯಾಂನಲ್ಲಿ ಇಂದಿನ ಒಳಹರಿವು ಬರೋಬ್ಬರಿ 12,227 ಕ್ಯೂಸೆಕ್‌ನಷ್ಟು ಹೆಚ್ಚಾಗಿದೆ. ಹೊರ ಹರಿವು ಕಡಿಮೆ ಇದೆ. ಹಾಸನ, ಶಿವಮೊಗ್ಗ, ಸಕಲೇಶಪುರ, ಮಡಿಕೇರಿ, ಮೈಸೂರು, ಉಡುಪಿ, ಮಂಗಳೂರು ಹಾಗೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರಿದಿದೆ. ಈ ನಿರಂತರ ಮಳೆಯಿಂದಾಗಿ ತುಂಗ, ಭದ್ರಾ, ಕೆಆರ್‌ಎಸ್, ಹಾರಂಗಿ, ಕಬಿನಿ, ನುಗು, ತಾರಕ ಸೇರಿದಂತೆ ವಿವಿಧ ಒಳ ಮತ್ತು ಹೊರ ಹರಿವು ಏರಿಕೆ ಆಗಿದೆ.

Karnataka Dam Water Level Heavy Rains Raise Inflow in State All Reservoirs

ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯಲಿದೆ. ನದಿಗಳ ಒಳಹರಿವು ಮತ್ತಷ್ಟು ಹೆಚ್ಚಾಗಲಿದೆ. ಇಂದು ಆಗಸ್ಟ್ 29 ರಂದು ರಾಜ್ಯದ ಪ್ರಮುಖ ಅಣೆಕಟ್ಟುಗಳ ನೀರಿನ ಮಟ್ಟ, ಸಂಗ್ರಹ ಮತ್ತಿತರ ವಿವರಗಳು ಇಲ್ಲಿವೆ. ಪಟ್ಟಿ ನೋಡಿ.

ರಾಜ್ಯದ ಅಣೆಕಟ್ಟುಗಳ ಇಂದಿನ ಮಟ್ಟ

ಕೆಆರ್‌ಎಸ್ ಡ್ಯಾಂ ಅಪ್ಡೇಟ್ ಮಾಹಿತಿ

* ಡ್ಯಾಂ ಒಟ್ಟು ನೀರು ಶೇಖರಣೆ ಸಾಮರ್ಥ್ಯ: 49.452 ಟಿಎಂಸಿ

* ಇಂದಿನ ನೀರಿನ ಮಟ್ಟ: 48.447 ಟಿಎಂಸಿ

* ಇಂದಿನ ಒಳ ಹರಿವು: 7409 ಕ್ಯೂಸೆಕ್

* ಒಟ್ಟು ಹೊರ ಹರಿವಿನ ಮಟ್ಟ: 6569 ಕ್ಯೂಸೆಕ್

ಹಾರಂಗಿ ಅಣೆಕಟ್ಟಿನ ನೀರಿನ ವಿವರ

* ಡ್ಯಾಂ ಒಟ್ಟು ನೀರು ಶೇಖರಣೆ ಸಾಮರ್ಥ್ಯ: 8.5 ಟಿಎಂಸಿ

* ಇಂದಿನ ನೀರಿನ ಮಟ್ಟ: 8.131 ಟಿಎಂಸಿ

* ಇಂದಿನ ಒಳ ಹರಿವು: 5321 ಕ್ಯೂಸೆಕ್

* ಒಟ್ಟು ಹೊರ ಹರಿವಿನ ಮಟ್ಟ: 6041 ಕ್ಯೂಸೆಕ್

ಹೇಮಾವತಿ ಜಲಾಶಯದ ಇಂದಿನ ಮಟ್ಟ

* ಡ್ಯಾಂ ಒಟ್ಟು ನೀರು ಶೇಖರಣೆ ಸಾಮರ್ಥ್ಯ: 37.10 ಟಿಎಂಸಿ

* ಇಂದಿನ ನೀರಿನ ಮಟ್ಟ: 36.919 ಟಿಎಂಸಿ

* ಇಂದಿನ ಒಳ ಹರಿವು: 7523 ಕ್ಯೂಸೆಕ್

* ಒಟ್ಟು ಹೊರ ಹರಿವಿನ ಮಟ್ಟ: 7135 ಕ್ಯೂಸೆಕ್

ಕಬಿನಿ ಡ್ಯಾಂ ನೀರಿನ ಸಂಗ್ರಹ

* ಡ್ಯಾಂ ಒಟ್ಟು ನೀರು ಶೇಖರಣೆ ಸಾಮರ್ಥ್ಯ: 2284 ಟಿಎಂಸಿ

* ಇಂದಿನ ನೀರಿನ ಮಟ್ಟ: 2284 ಟಿಎಂಸಿ

* ಇಂದಿನ ಒಳ ಹರಿವು: 12,227 ಕ್ಯೂಸೆಕ್

* ಒಟ್ಟು ಹೊರ ಹರಿವಿನ ಮಟ್ಟ: 7442 ಕ್ಯೂಸೆಕ್

ನುಗು ಡ್ಯಾಂ ಇಂದಿನ ಮಟ್ಟ

* ಡ್ಯಾಂ ಒಟ್ಟು ನೀರು ಶೇಖರಣೆ ಸಾಮರ್ಥ್ಯ: 2380 ಟಿಎಂಸಿ

* ಇಂದಿನ ನೀರಿನ ಮಟ್ಟ: 2377 ಟಿಎಂಸಿ

* ಇಂದಿನ ಒಳ ಹರಿವು: 651 ಕ್ಯೂಸೆಕ್

* ಒಟ್ಟು ಹೊರ ಹರಿವಿನ ಮಟ್ಟ: 300 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+