Karnataka Dam water level : ಇಡೀ ಕರ್ನಾಟಕವೇ ಖುಷಿಪಡುವ ಸುದ್ದಿ: ಡ್ಯಾಂ ಭರ್ತಿ, 14 ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ

Karnataka Dam water level Aug 05: ಕರ್ನಾಟಕದ ವಿವಿಧ ಭಾಗದಲ್ಲಿ ಆಗಸ್ಟ್‌ ಪ್ರಾರಂಭದಿಂದಲೇ ಉತ್ತಮ ಮಳೆಯಾಗುತ್ತಿದ್ದು, ಕರ್ನಾಟಕದ ಜಲಾಶಯಗಳು ಶೇ 61ರಷ್ಟು ಭರ್ತಿಯಾಗಿದೆ. ಈ ಮೂಲಕ ಕರ್ನಾಟಕದ ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲೂ ನೀರಿನ ಮಟ್ಟ ಹೆಚ್ಚಳವಾಗಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಬರಗಾಲದ ನಡುವೆಯೂ ಉತ್ತಮ ಮಳೆಯಾಗಿದೆ. ಇದರಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.

ಕರ್ನಾಟಕದ ಒಳನಾಡಿನಲ್ಲಿ ಮಳೆ ಆಗದೆ ಸಂಕಷ್ಟ ಎದುರಾಗಿದೆ. ಒಳನಾಡಿನ ವಿವಿಧ ಪ್ರದೇಶಗಳಲ್ಲಿ ಒಣ ಪರಿಸ್ಥಿತಿ ಇದೆ. ಆದರೆ, ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಇನ್ನು ಮುಂದಿನ 15ರಿಂದ 20 ದಿನ ಉತ್ತಮ ಮಳೆಯಾದರೆ ಕೆಆರ್‌ಎಸ್ ಜಲಾಶಯ ಸಹ ಭರ್ತಿ ಆಗಲಿದೆ. ವಿವಿಧ ಜಲಾಶಯಗಳ ಒಳಹರಿವು ಈಗಾಗಲೇ ಹೆಚ್ಚಳವಾಗಿದೆ. ಕಬಿನಿ ಜಲಾಶಯ, ಆಲಮಟ್ಟಿ ಹಾಗೂ ತುಂಗಾ ಜಲಾಶಯಗಳು ಈಗಾಗಲೇ ಭರ್ತಿಯಾಗಿವೆ. ಇನ್ನಷ್ಟು ಜಲಾಶಯಗಳು ಬಹುತೇಕ ಭರ್ತಿಯಾಗುವ ಹಂತದಲ್ಲಿವೆ.

Karnataka Dam water level Aug 05

ಕರ್ನಾಟಕದಲ್ಲಿ ವಾಯು ಚಂಡಮಾರುತ!

ವಾಯು ಚಂಡಮಾರುತ ಪರಿಚಲನೆ ಪ್ರಭಾವ ಕರ್ನಾಟಕದ ಈ ಭಾಗಗಳಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಮೇಘಸ್ಫೋಟ ಕಾರಣಕ್ಕೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಆಗಸ್ಟ್‌ 10ರ ವರೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಅಲ್ಲದೆ ಕರ್ನಾಟಕದ 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಪ್ರಮುಖ 14 ಜಲಾಶಯಗಳ ಆಗಸ್ಟ್‌ 5ರ ಬುಧವಾರದ ನೀರಿನ ಮಟ್ಟದ ವಿವರ ಇಲ್ಲಿದೆ.

ಕೆಆರ್‌ಎಸ್ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 103.40
ಒಳಹರಿವು: 31,122
ಹೊರಹರಿವು: 1,882 ಕ್ಯೂಸೆಕ್ಸ್‌ಗಳಲ್ಲಿ

ಹಾರಂಗಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,857.22
ಒಳಹರಿವು: 7,147
ಹೊರಹರಿವು: 6,291 ಕ್ಯೂಸೆಕ್ಸ್‌ಗಳಲ್ಲಿ

ಕಬಿನಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00
ಇಂದಿನ ಮಟ್ಟ: 2282.50
ಒಳಹರಿವು: 27115
ಹೊರಹರಿವು: 25000 ಕ್ಯೂಸೆಕ್ಸ್‌ಗಳಲ್ಲಿ

ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2912.24
ಒಳಹರಿವು: 5041
ಹೊರಹರಿವು: 500 ಕ್ಯೂಸೆಕ್ಸ್‌ಗಳಲ್ಲಿ

ಲಿಂಗನಮಕ್ಕಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,785.90
ಒಳಹರಿವು: 27,952
ಹೊರಹರಿವು: 1,828 ಕ್ಯೂಸೆಕ್ಸ್‌ಗಳಲ್ಲಿ

ಸೂಪಾ ಜಲಾಶಯ

ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 541.66
ಒಳಹರಿವು: 41,043.8
ಹೊರಹರಿವು: 0 ಕ್ಯೂಸೆಕ್ಸ್‌ಗಳಲ್ಲಿ

ಮಾಣಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 583.29
ಒಳಹರಿವು: 7,122
ಹೊರಹರಿವು: 0

ತುಂಗಭದ್ರಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,616.13
ಒಳಹರಿವು: 91,546
ಹೊರಹರಿವು: 1,447

ಮಲಪ್ರಭಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.50
ಇಂದಿನ ಮಟ್ಟ: 2,061.20
ಒಳಹರಿವು: 6,668
ಹೊರಹರಿವು: 1,194

ಘಟಪ್ರಭಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,160.80
ಒಳಹರಿವು: 21,825
ಹೊರಹರಿವು: 1,765

ತುಂಗಾ

ಗರಿಷ್ಠ ಮಟ್ಟ (ಅಡಿಗಳಲ್ಲಿ): 588.24
ಇಂದಿನ ಮಟ್ಟ: 588.22
ಒಳಹರಿವು: 59,607
ಹೊರಹರಿವು: 50,753

ಭದ್ರಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 164.9
ಒಳಹರಿವು: 14,451
ಹೊರಹರಿವು: 192

ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.60
ಇಂದಿನ ಮಟ್ಟ: 518.89
ಒಳಹರಿವು: 1,40,257
ಹೊರಹರಿವು: 1,49,597

ನಾರಾಯಣಪುರ ಜಲಾಶಯ

ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 491.38
ಒಳಹರಿವು: 1,50,000
ಹೊರಹರಿವು: 1,45,376

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+