Karnataka Dam Water Level: ಕರ್ನಾಟಕದ 13 ಪ್ರಮುಖ ಜಲಾಶಯದ ಅಕ್ಟೋಬರ್ 24ರ ನೀರಿನ ಮಟ್ಟದ ವಿವರ ಇಲ್ಲಿದೆ!
Karnataka Dam Water Level: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕವೂ ಸೇರಿದಂತೆ 6 ರಾಜ್ಯಗಳಲ್ಲಿ ಧಾರಾಕಾರ ಮಳೆ ಮುಂದಿವರಿದಿದೆ. ಇನ್ನೊಂದು ವಾರದ ವರೆಗೆ ಮಳೆ ಆರ್ಭಟ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯದಲ್ಲಿ ನೈಋತ್ಯ ಮಾನ್ಸೂನ್‌ನಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿತ್ತು. ಅಲ್ಲದೇ ವಾಯುಭಾರ ಕುಸಿತ ಹಾಗೂ ಚಂಡಮಾರುತದ ಪ್ರಸರಣ ಸೇರಿದಂತೆ ಹಲವು ಕಾರಣಕ್ಕೆ 2025ನೇ ಸಾಲಿನಲ್ಲಿ ವಾಡಿಕೆಗೆ ಉತ್ತಮ ಮಳೆಯಾಗಿದ್ದು, ಜಲಾಶಯಗಳಲ್ಲಿ ನೀರು ತುಂಬಿದೆ.
ಸಾಮಾನ್ಯವಾಗಿ ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿತ್ತು. ಇದೀಗ ಹಿಂಗಾರು ಸಹ ಉತ್ತಮವ ನಿರೀಕ್ಷೆ ಇದ್ದು, ಜಲಾಶಯಗಳಿಗೆ ಜೀವಕಳೆ ಮೂಡಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿರುವುದರಿಂದ ಯಾವುದೇ ಸಂಕಷ್ಟ ಎದುರಾಗಿಲ್ಲ. ಅಲ್ಲದೇ ರೈತರ ವ್ಯವಸಾಯಕ್ಕೂ ಅನುಕೂಲವಾಗಿದೆ. ಇನ್ನು ಉತ್ತಮ ಮಳೆ ಹಾಗೂ ಜಲಾಶಯಗಳ ನೀರಿನ ಸಂಗ್ರಹ ಉತ್ತಮವಾಗಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡು ಹಾಗೂ ವಿವಿಧ ರಾಜ್ಯಗಳ ನಡುವೆ ಜಲ ವಿವಾದಕ್ಕೂ ಬ್ರೇಕ್ ಬಿದ್ದಂತೆ ಆಗಿದೆ. ಅಕ್ಟೋಬರ್ 24ರಂದು ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎನ್ನುವ ವಿವರ ನೋಡೋಣ.

ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 124.80
ಒಳಹರಿವು: 20,797
ಹೊರಹರಿವು: 40,000 ಕ್ಯೂಸೆಕ್ಸ್‌ಗಳಲ್ಲಿ
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,858.25
ಒಳಹರಿವು: 800
ಹೊರಹರಿವು: 1,500 ಕ್ಯೂಸೆಕ್ಸ್‌ಗಳಲ್ಲಿ
ಕಬಿನಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284
ಇಂದಿನ ಮಟ್ಟ: 2,283.96
ಒಳಹರಿವು: 4,835
ಹೊರಹರಿವು: 3,454 ಕ್ಯೂಸೆಕ್ಸ್‌ಗಳಲ್ಲಿ
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2,921.50
ಒಳಹರಿವು: 16,394
ಹೊರಹರಿವು: 4,600 ಕ್ಯೂಸೆಕ್ಸ್‌ಗಳಲ್ಲಿ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,815.35
ಒಳಹರಿವು: 4,643
ಹೊರಹರಿವು: 4,508 ಕ್ಯೂಸೆಕ್ಸ್‌ಗಳಲ್ಲಿ
ಸೂಪಾ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 558.47
ಒಳಹರಿವು: 1,143.05
ಹೊರಹರಿವು: 2,507.83 ಕ್ಯೂಸೆಕ್ಸ್‌ಗಳಲ್ಲಿ
ಮಾಣಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 593.66
ಒಳಹರಿವು: 859
ಹೊರಹರಿವು: 670
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,626.06
ಒಳಹರಿವು: 21,697
ಹೊರಹರಿವು: 12,696
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.5
ಇಂದಿನ ಮಟ್ಟ: 2,079.50
ಒಳಹರಿವು: 394
ಹೊರಹರಿವು: 394
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,174.85
ಒಳಹರಿವು: 339
ಹೊರಹರಿವು: 184
ಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 184.3
ಒಳಹರಿವು: 5,806
ಹೊರಹರಿವು: 5,204
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.6
ಇಂದಿನ ಮಟ್ಟ: 519.6
ಒಳಹರಿವು: 1,288
ಹೊರಹರಿವು: 1,288
ನಾರಾಯಣಪುರ ಜಲಾಶಯ
ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 491.66
ಒಳಹರಿವು: 1,500
ಹೊರಹರಿವು: 8,646












Click it and Unblock the Notifications