Karnataka Dam Water Level: 1,75,000 ಕ್ಯೂಸೆಕ್ ಕಾವೇರಿ ನೀರು ಬಿಡುಗಡೆ? ಈ ಪ್ರದೇಶಗಳಿಗೆ ಭಾರೀ ಪ್ರವಾಹ ಎಚ್ಚರಿಕೆ
ಬೆಂಗಳೂರು, ಜುಲೈ 27: ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಮಳೆ ಪ್ರಯಾಣ ಹೆಚ್ಚಾಗಿದೆ. ನಿತ್ಯವು ಬಿಡುವಿದಲ್ಲದಂತೆ ಮಳೆ ಅಬ್ಬರಿಸುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಂತೂ ವ್ಯಾಪಕ ಮಳೆ ದಾಖಲಾಗುತ್ತಿದೆ. ಪರಿಣಾಮ ನದಿಗಳು ತುಂಬಿ ಹರಿಯುತ್ತಿವೆ. ವಿವಿಧ ಜಲಾಶಯಗಳಿಂದ ಭಾನುವಾರ (ಜುಲೈ 27) ಸಾವಿರಾರು ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಹೀಗಾಗಿ ಡ್ಯಾಂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ.
ಕೊಡಗಿನ ತಲಕಾವೇರಿಯಲ್ಲಿ (ಜುಲೈ 27) ಇಂದು ಬೆಳಗ್ಗೆ 179.2 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇನ್ನು ಇದೇ ಜಿಲ್ಲೆಯಲ್ಲಿ ಭಾಗಮಂಡಲದಲ್ಲಿ ಇಂದು ಬೆಳಗ್ಗೆವರೆಗೆ 117.2mm ಮಳೆ ಸುರಿದಿದೆ. ಕಳೆದೊಂದು ತಿಂಗಳಿನಿಂದ ಈ ಭಾಗದಲ್ಲಿ ಮಳೆ ಆಗುತ್ತದೆ ಇದೆ. ತ್ರಿವೇಣಿ ಸಂಗಮ, ದೇವಸ್ಥಾನ, ರಸ್ತೆಗಳು, ಹಳ್ಳಗಳು ಮುಳುಗಿವೆ. ಯಾರೊಬ್ಬರು ಕಾಲಿಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮಳೆಯ ನಿರಂತರ ಸುರಿಯುವಿಕೆಯಿಂದ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಡ್ಯಾಂಗಳು ಭರ್ತಿಯಾಗಿದ್ದು, ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಕೊಡಗಿನ ಅಲ್ಲಾಡಿಯಲ್ಲಿ 217.4 ಮಿ.ಮೀ, ಬಿರುನಾನಿ - 217ಮಿ.ಮೀ, ಯವಕಪಾಡಿ 163ಮಿ.ಮೀ, ಶ್ರೀಮಂಗಲ 153 ಮಿ.ಮೀ, ದೊಡ್ಡಪುಲಿಕೋಟೆ 145 ಮಿ.ಮೀ, ಬೆಂಗಳೂರು 121 ಮಿ.ಮೀ, ಬಲ್ಲಮಾವಟಿ 116 ಮಿ.ಮೀ. ಮಳೆ ದಾಖಲಾಗಿದೆ. ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಸಂಗ್ರಹ, ಹೊರ ಹರಿವು ಮತ್ತು ಪ್ರವಾಹ ಎಚ್ಚರಿಕೆ ಸ್ಥಳಗಳ ವಿವರ ಇಲ್ಲಿದೆ.
ಕ್ಷಣಕ್ಷಣಕ್ಕೂ ನೀರು ಬಿಡುಗಡೆ ಪ್ರಮಾಣ ಏರಿಕೆ: ಪ್ರವಾಹ ಎಚ್ಚರಿಕೆ
* ಹಾರಂಗಿ ಜಲಾಶಯದಿಂದ 25,000 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುವುದು. ಆದ್ದರಿಂದ ಕುಶಾಲನಗರ, ಪಿರಿಯಾಪಟ್ಟಣ ಮತ್ತು ಕೆ.ಆರ್. ನಗರ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಬೇಕು.
* ಒಳಹರಿವು ಹೆಚ್ಚಾಗಿರುವ ಕಬಿನಿ ಅಣೆಕಟ್ಟಿನಿಂದ ಬರೋಬ್ಬರಿ 40,000 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದ್ದು, ಇದರಿಂದಾಗಿ ಎಚ್.ಡಿ. ಕೋಟೆ, ಟಿ. ನರಸೀಪುರ, ಕೊಳ್ಳೇಗಾಲ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸುರಕ್ಷಿತವಾಗಿರುವಂತೆ ಸೂಚನೆ ನೀಡಲಾಗಿದೆ.
* ಈಗಾಗಲೇ ಭರ್ತಿಯಾಗಿರುವ ಕೃಷ್ಣ ರಾಜ ಸಾಗರ (KRS) ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಪರಿಣಾಮ ಈ ಡ್ಯಾಂನಿಂದ ಸುಮಾರು 70,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕೆಆರ್‌ಎಸ್ ಹೊರ ಹರಿವಿನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಇದು ಶ್ರೀರಂಗಪಟ್ಟಣ, ಟಿ. ನರಸೀಪುರದ ಮೇಲೆ ಪರಿಣಾಮ ಬೀರುತ್ತದೆ.

1,75,000 ಕ್ಯೂಸೆಕ್ ನೀರು ಬಿಡುಗಡೆ, ಪ್ರವಾಹ
ಮುಂದಿನ 48 ಗಂಟೆಗಳಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಏಕೆಂದರೆ
ಕಬಿನಿ ಜಲಾನಯನ ಪ್ರದೇಶದ ಅಣೆಕಟ್ಟುಗಳ ಹೊರಹರಿವು ಸುಮಾರು 55,000 ರಿಂದ 60,000 ಕ್ಯೂಸೆಕ್ ಬಿಡುಗಡೆ ಆಗಲಿದೆ. ಕೆಆರ್‌ಎಸ್ ಸೇರಿದಂತೆ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಲಹರಿವು ಹೆಚ್ಚುತ್ತಲೇ ಇದೆ. ಇದರಿಂದ ಒಟ್ಟಾರೆ ಕಾವೇರಿ ಕಾವೇರಿ ಟಿ.ನರಸೀಪುರ ಮತ್ತು ಕೊಳ್ಳೇಗಾಲದಲ್ಲಿ ಪ್ರವಾಹಕ್ಕೆ ಸಿಲುಕಬಹುದು. ಈ ಪ್ರದೇಶಗಳು ಮುಂದಿನ 24-48 ಗಂಟೆಗಳಲ್ಲಿ 1,00,000 ದಿಂದ 1,75,000 ಕ್ಯೂಸೆಕ್ ನೀರು ಬಿಡುಗಡೆಗೆ ಸಾಕ್ಷಿ ಆಗಲಿವೆ, ಜನರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಕಾವೇರಿ ನೀರಾವರಿ ನಿಗಮ ನಿಯಮಿತ ಎಚ್ಚರಿಕೆ ನೀಡಿದೆ.
ಜಲಾಶಯಗಳ ಇಂದಿನ ಮಟ್ಟ, ವಿವರ
ಕೆಆರ್‌ಎಸ್ ಅಣೆಕಟ್ಟು
ಡ್ಯಾಂ ಎತ್ತರ: 124.80 ಅಡಿ
ನೀರು ಭರ್ತಿ ವಿವರ: 123.80 ಅಡಿ
ಒಟ್ಟು ನೀರು ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರು ಸಂಗ್ರಹ ಮಟ್ಟ: 48.062
ಒಟ್ಟು ಒಳಹರಿವು : 52,586 ಕ್ಯೂಸೆಕ್
ಇಂದಿನ ಹೊರಹರಿವು - 56,474 ಕ್ಯೂಸೆಕ್ ಗೂ ಹೆಚ್ಚು.
ಹೇಮಾವತಿ ಅಣೆಕಟ್ಟಿನ ನೀರನ ಮಾಹಿತಿ
ಡ್ಯಾಂ ಒಟ್ಟು ಎತ್ತರ: 2922 ಅಡಿ
ಇಂದಿನ ನೀರು ಭರ್ತಿ ಮಟ್ಟ: 2921 ಅಡಿ
ಒಟ್ಟು ನೀರು ಸಂಗ್ರಹ ಸಾಮರ್ಥ್ಯ 37.10 ಟಿಎಂಸಿ
ಇಂದಿನ ನೀರು ಸಂಗ್ರಹ ಮಟ್ಟ: 36.137 ಟಿಎಂಸಿ
ಇಂದಿನ ಒಳಹರಿವು : 38,715 ಕ್ಯೂಸೆಕ್
ಒಟ್ಟು ಹೊರಹರಿವು - 38,990 ಕ್ಯೂಸೆಕ್
ತಾರಕ ಅಣೆಕಟ್ಟು ವಿವರ
ತಾರಕ ಅಣೆಕಟ್ಟು (ಮೈಸೂರು) ಇಂದಿನ ಮಟ್ಟ
ಡ್ಯಾಂ ಒಟ್ಟು ಎತ್ತರ: 125 ಅಡಿ
ನೀರು ಸಂಗ್ರಹಣಾ ಸಾಮರ್ಥ್ಯ: 3.95 ಟಿಎಂಸಿ
ಇಂದಿನ ಒಳಹರಿವು : 6600 ಕ್ಯೂಸೆಕ್
ಒಟ್ಟು ಹೊರಹರಿವು : 9000 ಕ್ಯೂಸೆಕ್












Click it and Unblock the Notifications