Karnataka Reservoir Level: ಆಲಮಟ್ಟಿ, ಸೂಪಾ ಡ್ಯಾಂಗಳ ಒಳಹರಿವು ಭಾರೀ ಹೆಚ್ಚಳ, ಇಂದಿನ ನೀರಿನ ಮಟ್ಟ

ಬೆಂಗಳೂರು: ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದ್ದು, ರಾಜ್ಯದ ಜಲಾಶಯಗಳಲ್ಲಿ ತಕ್ಕಮಟ್ಟಿನ ನೀರಿನ ಸಂಗ್ರಹವಾಗಿದೆ. ಇದರಲ್ಲಿ ಆಲಮಟ್ಟಿ, ಹಾರಂಗಿ, ತುಂಗಭದ್ರಾ, ಕಬಿನಿ, ಲಿಂಗನಮಕ್ಕಿ ಸೇರಿದಂತೆ ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಆದರೆ ಒಳನಾಡು ಜಿಲ್ಲೆಗಳಲ್ಲಿ ಉಂಟಾದ ಮಳೆ ಕೊರತೆಯಿಂದ ಇತರ ಕೆಲವು ಡ್ಯಾಂಗಳಲ್ಲಿ ನೀರಿನ ಪ್ರಮಾಣ ನಿರೀಕ್ಷೆಯಷ್ಟು ಸಂಗ್ರಹವಾಗಿಲ್ಲ.

ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ನಿಗದಿಯಂತೆ ನೀರು ಬಿಟ್ಟಿದ್ದಕ್ಕೆ ಇತ್ತೀಚೆಗೆ ವಿಪಕ್ಷಗಳು ಕಿಡಿ ಕಾರಿದ್ದವು. ಮಂಡ್ಯ, ರಾಮನಗರ ಸೇರಿದಂತೆ ರಾಜ್ಯದ ಈ ಭಾಗದ ರೈತರಿಗೆ ಅನುಕೂಲವಾಗುವಂತೆ ನದಿ ಹಾಗೂ ಕಾಲುವೆಗಳಿಗೆ ನೀರು ಹರಿಸಲು ಅಗ್ರಹ ಕೇಳಿ ಬಂದಿದೆ. ಜಲಾಶಯದಲ್ಲಿ ಕೇವಲ 91 ಅಡಿಯಷ್ಟು ಮಾತ್ರವೇ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 124 ಅಡಿ ನೀರು ಸಂಗ್ರಹವಾಗಿತ್ತು.

Karnataka Dam Levels

ಹೊಸದಾಗಿ ಕ್ರಸ್ಟ್ ಗೇಟ್ ಅಳಡಿಕೆಯಾದ ಮೂರು ರಾಜ್ಯಗಳಿಗೆ ನೀರೊದಗಿಸುವ ತುಂಗಭದ್ರಾ ಡ್ಯಾಂ ಒಳಹರಿವು ಬರೋಬ್ಬರಿ 21,000 ಕ್ಯೂಸೆಕ್ ಕ್ಕೂ ಅಧಿಕವಿದೆ. ಅದೇ ರೀತಿ ಆಲಮಟ್ಟಿ 55,000, ನಾರಾಯಣಪುರ 21000, ಲಿಂಗನಮಕ್ಕಿ 15,000, ಸೂಪಾ ಡ್ಯಾಂ ಒಳಹರಿವು 13,000 ಕ್ಯೂಸೆಕ್‌ಗೂ ಅಧಿಕವಿದೆ. ಮಳೆ ಕೊರತೆ ಮುಂದುವರಿದರೆ, ನದಿ-ಜಲಾಶಯಗಳ ನೀರಿನ ಬಳಕೆ ಹೆಚ್ಚಾದಲ್ಲಿ ಡ್ಯಾಂಗಳು ಬೇಗನೆ ಖಾಲಿಯಾಗುವ ಸಾಧ್ಯತೆ ಇದೆ. ಇಂದು ಮಂಗಳವಾರ (ಜೂನ್ 28) ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ.

ಕೆ.ಆರ್.ಎಸ್. ಜಲಾಶಯದ ಇಂದಿನ ಮಟ್ಟ

ಅಣೆಕಟ್ಟಿನ ಒಟ್ಟು ನೀರಿನ ಸಾಮರ್ಥ್ಯ: 49.45 ಟಿಎಂಸಿ

ಇಂದಿನ ನೀರಿನ ಸಂಗ್ರಹ: 17.04 ಟಿಎಂಸಿ

ಒಟ್ಟು ಒಳಹರಿವು: 2552ಕ್ಯೂಸೆಕ್

ಹೊರ ಹರಿವು: 1745 ಕ್ಯೂಸೆಕ್

ಆಲಮಟ್ಟಿ ಜಲಾಶಯದ ವಿವರ

ಅಣೆಕಟ್ಟಿನ ಒಟ್ಟು ನೀರಿನ ಸಾಮರ್ಥ್ಯ: 124.08 ಟಿಎಂಸಿ

ಇಂದಿನ ನೀರಿನ ಸಂಗ್ರಹ: 117/88 ಟಿಎಂಸಿ

ಒಟ್ಟು ಒಳಹರಿವು: 55,685 ಕ್ಯೂಸೆಕ್

ಹೊರ ಹರಿವು: 20,000 ಕ್ಯೂಸೆಕ್

ಹಾರಂಗಿ ಡ್ಯಾಂ ಮಟ್ಟ

ಅಣೆಕಟ್ಟಿನ ಒಟ್ಟು ನೀರಿನ ಸಾಮರ್ಥ್ಯ: 8.50 ಟಿಎಂಸಿ

ಇಂದಿನ ನೀರಿನ ಸಂಗ್ರಹ: 08 ಟಿಎಂಸಿ

ಒಟ್ಟು ಒಳಹರಿವು: 2356 ಕ್ಯೂಸೆಕ್

ಹೊರ ಹರಿವು: 1500 ಕ್ಯೂಸೆಕ್

ಕಬಿನಿ ಜಲಾಶಯ

ಅಣೆಕಟ್ಟಿನ ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ

ಇಂದಿನ ನೀರಿನ ಸಂಗ್ರಹ: 14.43 ಟಿಎಂಸಿ

ಒಟ್ಟು ಒಳಹರಿವು: 3594 ಕ್ಯೂಸೆಕ್

ಹೊರ ಹರಿವು: 300 ಕ್ಯೂಸೆಕ್

ಹೇಮಾವತಿ ಜಲಾಶಯ ವಿವರ

ಅಣೆಕಟ್ಟಿನ ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ

ಇಂದಿನ ನೀರಿನ ಸಂಗ್ರಹ: 23.75 ಟಿಎಂಸಿ

ಒಟ್ಟು ಒಳಹರಿವು: 6390 ಕ್ಯೂಸೆಕ್

ಹೊರ ಹರಿವು: 500 ಕ್ಯೂಸೆಕ್

ವಾಣಿ ವಿಲಾಸ ಸಾಗರ ಅಣೆಕಟ್ಟು

ಅಣೆಕಟ್ಟಿನ ಒಟ್ಟು ನೀರಿನ ಸಾಮರ್ಥ್ಯ: 30.32 ಟಿಎಂಸಿ

ಇಂದಿನ ನೀರಿನ ಸಂಗ್ರಹ: 23.47 ಟಿಎಂಸಿ

ಒಟ್ಟು ಒಳಹರಿವು: 00 ಕ್ಯೂಸೆಕ್

ಹೊರ ಹರಿವು: 00 ಕ್ಯೂಸೆಕ್

ತುಂಗಭದ್ರಾ ಅಣೆಕಟ್ಟು ಅಪ್ಡೇಟ್

ಅಣೆಕಟ್ಟಿನ ಒಟ್ಟು ನೀರಿನ ಸಾಮರ್ಥ್ಯ: 107.79 ಟಿಎಂಸಿ

ಇಂದಿನ ನೀರಿನ ಸಂಗ್ರಹ: 34.15 ಟಿಎಂಸಿ

ಒಟ್ಟು ಒಳಹರಿವು: 21,773 ಕ್ಯೂಸೆಕ್

ಹೊರ ಹರಿವು: 3600 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+