ಆರು ಲಕ್ಷ ದಾಟಿದ ರಾಜ್ಯದ ಕೊರೊನಾ ವೈರಸ್ ಪ್ರಕರಣ
ಬೆಂಗಳೂರು, ಸೆಪ್ಟೆಂಬರ್ 30: ರಾಜ್ಯದಲ್ಲಿ ಬುಧವಾರ 8,856 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಕೋವಿಡ್ ಪ್ರಕರಣಗಳ ಸಂಖ್ಯೆ ಆರು ಲಕ್ಷ ದಾಟಿದೆ. 24 ಗಂಟೆಗಳಲ್ಲಿ 87 ಮಂದಿ ಮೃತಪಟ್ಟಿದ್ದು, 8890 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 6,01,767ಕ್ಕೆ ಏರಿದೆ. 1,07,616 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇದುವರೆಗೂ 8,864 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 821 ಮಂದಿ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 94,886 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 4,226 ಪ್ರಕರಣಗಳು ಪತ್ತೆಯಾಗಿವೆ. 3667 ಮಂದಿ ಬಿಡುಗಡೆಯಾಗಿದ್ದಾರೆ. 24 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಇದರಿಂದ ಬೆಂಗಳೂರು ನಗರದಲ್ಲಿನ ಒಟ್ಟು ಪ್ರಕರಣಗಳು 2,32,663ಕ್ಕೆ ತಲುಪಿದ್ದು, 1,82,581 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ ನಂತರ ಅತ್ಯಧಿಕ ಪ್ರಕರಣಗಳು ಮೈಸೂರಿನಲ್ಲಿ (564) ವರದಿಯಾಗಿವೆ.

ಹಾಸನ 446, ದಕ್ಷಿಣ ಕನ್ನಡ 240, ಬೆಂಗಳೂರು ಗ್ರಾಮಾಂತರ 188, ಬಳ್ಳಾರಿ 109, ಶಿವಮೊಗ್ಗ 248, ತುಮಕೂರು 362, ಮಂಡ್ಯ 244, ಉಡುಪಿ 139, ದಾವಣಗೆರೆ 173, ಕಲಬುರಗಿ 97, ವಿಜಯಪುರ 80, ಉತ್ತರ ಕನ್ನಡ 146, ಕೊಪ್ಪಳ 87, ಚಿತ್ರದುರ್ಗ 180, ಚಿಕ್ಕಮಗಳೂರು 167, ಬೆಳಗಾವಿ 243, ಚಿಕ್ಕಬಳ್ಳಾಪುರದಲ್ಲಿ 89 ಪ್ರಕರಣಗಳು ವರದಿಯಾಗಿವೆ.
ಅತಿ ಕಡಿಮೆ ಪ್ರಕರಣ ಬೀದರ್‌ನಲ್ಲಿ-28 ದಾಖಲಾಗಿದೆ. ಕೊಡಗು 96, ಕೋಲಾರ 78, ಹಾವೇರಿ 134, ಪ್ರಕರಣಗಳು ದಾಖಲಾಗಿವೆ. ಚಾಮರಾಜನಗರ 50, ಗದಗ 67, ರಾಯಚೂರು 93, ರಾಮನಗರ 44, ಯಾದಗಿರಿ 59, ಧಾರವಾಡ 128, ಬಾಗಲಕೋಟೆ 51 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications