ಪಾದಯಾತ್ರೆಯೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಅಂತಿಮಯಾತ್ರೆಗೆ ನಾಂದಿ!
ಕರ್ನಾಟಕ ರಾಜಕೀಯದಲ್ಲಿ ಮಹತ್ತರ ಬದಲಾವಣೆಯ ಮುನ್ಸೂಚನೆಗಳು ಕಾಣಿಸುತ್ತಿವೆ. ಬಿಜೆಪಿ ಈಗ ಒಡೆದ ಮನೆಯಾಗಿರುವುದು ಸ್ಪಷ್ಟವಾಗಿದ್ದು, ಮುಡಾ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ಮಾಡುವಲ್ಲಿ ವಿಫಲವಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಬಿಟ್ಟಿದೆ ಎನ್ನುವ ಊಹಾಪೋಹಗಳ ಮಧ್ಯೆಯೇ, ಮುಡಾ ಹಗರಣ ವಿರೋಧಿಸಿ ಪಾದಯಾತ್ರೆ ಮಾಡುವ ಬಿಜೆಪಿ ನಾಯಕರ ಉತ್ಸಾಹಕ್ಕೆ ಜೆಡಿಎಸ್ ತಣ್ಣೀರು ಎರಚಿದೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಲು ನಮ್ಮ ಬೆಂಬಲವಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಈ ಬಗ್ಗೆ ಟ್ವಿಟ್ ಮಾಡಿದ್ದು, ಮೈತ್ರಿಗೆ ಕತ್ತರಿ ಬಿದ್ದಿದೆ ಎಂದು ಅಣಕಿಸಿದೆ. ಬಿಜೆಪಿ ಉದ್ದೇಶ ಏನು ಎನ್ನುವುದು ಈಗ ಎಚ್‌ಡಿ ಕುಮಾರಸ್ವಾಮಿಯವರಿಗೆ ಅರ್ಥವಾಗಿದೆ ಎಂದು ಹೇಳಿರುವ ಕಾಂಗ್ರೆಸ್, ಹೆಚ್‌ಡಿಕೆ ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾರೆ ಎಂದಿದೆ.
ಮೈತ್ರಿಗೆ ಬಿತ್ತು ಕತ್ರಿ.
— Karnataka Congress (@INCKarnataka) July 31, 2024
ಪಾದಯಾತ್ರೆಯು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಅಂತಿಮಯಾತ್ರೆಗೆ ನಾಂದಿ ಹಾಡಲಿದೆ!
ಬಿಜೆಪಿಯ ಪಾದಯಾತ್ರೆ ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿಯವರ ಬುಡ ಅಲ್ಲಾಡಿಸಲು ಸೃಷ್ಟಿಯಾದ ನಾಟಕ ಎನ್ನುವುದು @JanataDal_S ಪಕ್ಷಕ್ಕೆ ಈಗ ಅರ್ಥವಾದಂತಿದೆ,
ಮತ್ತೊಂದೆಡೆ @hd_kumaraswamy ಅವರು ಬಿಜೆಪಿಗೆ ಮಗ್ಗುಲು…
ಕಾಂಗ್ರೆಸ್ ಟ್ವೀಟ್‌ನಲ್ಲಿ ಏನಿದೆ?
ಮೈತ್ರಿಗೆ ಬಿತ್ತು ಕತ್ರಿ. ಪಾದಯಾತ್ರೆಯು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಅಂತಿಮಯಾತ್ರೆಗೆ ನಾಂದಿ ಹಾಡಲಿದೆ! ಬಿಜೆಪಿಯ ಪಾದಯಾತ್ರೆ ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿಯವರ ಬುಡ ಅಲ್ಲಾಡಿಸಲು ಸೃಷ್ಟಿಯಾದ ನಾಟಕ ಎನ್ನುವುದು ಜೆಡಿಎಸ್‌ಗೆ ಈಗ ಅರ್ಥವಾದಂತಿದೆ, ಮತ್ತೊಂದೆಡೆ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿಗೆ ಮಗ್ಗುಲು ಮುಳ್ಳಾಗಿ ಕಾಡಲು ಶುರು ಮಾಡಿದ್ದಾರೆ, ಅಂದಹಾಗೆ ಈ ಪಾದಯಾತ್ರೆ ಪಾಲಿಟಿಕ್ಸ್ ನಲ್ಲಿ ಯಾರ ಕಾಲನ್ನು ಯಾರು ಎಳೆಯುವುದರಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾಲವೇ ಬಹಿರಂಗಪಡಿಸಲಿದೆ ಎಂದು ಹೇಳಿದೆ.












Click it and Unblock the Notifications