BJP VS Congress: ‘ಹೈಕಮಾಂಡಿಗೆ ಹಫ್ತಾ ಕೊಡುತ್ತಿದ್ದಿದ್ದೂ ಬಿಜೆಪಿ’
ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ ಹೇಗಾಗಿದೆ ಎಂದರೆ, ಬಹುಶಃ ಲೋಕಸಭೆ ಚುನಾವಣೆ ಮುಗಿಯುವ ತನಕ ಈ ಕಿಡಿ ತಣ್ಣಗಾಗುವ ಲಕ್ಷಣ ಕಾಣ್ತಾ ಇಲ್ಲ. ಅತ್ತ ಬಿಜೆಪಿ ಒಂದು ಅರೋಪ ಮಾಡಿದ್ರೆ ಇತ್ತ ಕಾಂಗ್ರೆಸ್ ಕೂಡ ಮತ್ತೊಂದು ರೀತಿ ಪ್ರತ್ಯಾರೋಪ ಮಾಡಿರುತ್ತದೆ. ಈಗಲೂ ಅಷ್ಟೇ ರಾಜ್ಯದಲ್ಲಿ ಐಟಿ ದಾಳಿ ನಡೆದು, ಕೋಟಿ ಕೋಟಿ ದುಡ್ಡು ಲಾಕ್ ಆದ ಬಳಿಕ ಬೆಂಕಿಯೇ ಹೊತ್ತಿಕೊಂಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಗ್ಯಾರಂಟಿ ವಿಚಾರಗಳನ್ನೇ ಇಟ್ಟುಕೊಂಡು ಬಿಜೆಪಿ ಆರೋಪವನ್ನ ಮಾಡುತ್ತಿತ್ತು. ಆ ನಂತರ ಶಿವಮೊಗ್ಗ ಘಟನೆ ಬಗ್ಗೆ ಎರಡು ಪಕ್ಷದ ನಾಯಕರು ಫುಲ್ ಟೈಂ ಫೈಟ್ ಮಾಡಿದ್ದಾರೆ. ಇದೀಗ ಐಟಿ ದಾಳಿಯ ಬಳಿಕ ಭ್ರಷ್ಟಾಚಾರ ಆರೋಪ ಮತ್ತು ಪ್ರತ್ಯಾರೋಪ ಜೋರಾಗಿದೆ. ಇಂದು, ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಕಾಂಗ್ರೆಸ್, 'ಹೈಕಮಾಂಡಿಗೆ ಹಫ್ತಾ ಕೊಡುತ್ತಿದ್ದಿದ್ದೂ ಬಿಜೆಪಿ' ಎಂದು ಗಂಭೀರ ಆರೋಪ ಮಾಡಿದೆ.

'ಭ್ರಷ್ಟಾಚಾರದಲ್ಲಿ ಜೈಲಿಗೆ ಹೋದವರು ಬಿಜೆಪಿಗರು'
ಬಿಜೆಪಿ ವಿರುದ್ಧ ಗಂಭೀರ ಆರೋಪ ಹೊರಿಸಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಭ್ರಷ್ಟಾಚಾರದಲ್ಲಿ ಜೈಲಿಗೆ ಹೋದವರು ಬಿಜೆಪಿಗರು. ಕಮಿಷನ್ ಕಲೆಕ್ಷನ್ ನಲ್ಲಿ ರಾಜೀನಾಮೆ ಕೊಟ್ಟವರೂ ಬಿಜೆಪಿಗರು. ಕಮಿಷನ್, ಭ್ರಷ್ಟಾಚಾರಗಳ ಬಗ್ಗೆ ಸ್ವಪಕ್ಷದವರಿಂದಲೇ ಟೀಕೆಗೆ ಒಳಗಾಗಿದ್ದು ಬಿಜೆಪಿ. ಹೈಕಮಾಂಡಿಗೆ ಹಫ್ತಾ ಕೊಡುತ್ತಿದ್ದಿದ್ದೂ ಬಿಜೆಪಿ. ಹುದ್ದೆಗಳನ್ನು ಮಾರಾಟಕ್ಕೆ ಇಟ್ಟಿದ್ದೂ ಬಿಜೆಪಿ. ಇಂತಹ ಭ್ರಷ್ಟ ಜನತಾ ಪಾರ್ಟಿ ಕಾಂಗ್ರೆಸ್ ಕಡೆ ಕೈ ತೋರಿಸುವುದು ಕೋತಿ ಮೊಸರು ತಿಂದು ಮೇಕೆಯತ್ತ ಕೈ ತೋರಿಸಿದಂತೆಯೇ ಸರಿ.' ಎಂದು ಕಮಲ ಪಾಳಯದ ವಿರುದ್ಧ ವಾಗ್ದಾಳಿ ನಡೆಸಿದೆ.
ಭ್ರಷ್ಟಾಚಾರದಲ್ಲಿ ಜೈಲಿಗೆ ಹೋದವರು ಬಿಜೆಪಿಗರು.
— Karnataka Congress (@INCKarnataka) October 16, 2023
ಕಮಿಷನ್ ಕಲೆಕ್ಷನ್ ನಲ್ಲಿ ರಾಜೀನಾಮೆ ಕೊಟ್ಟವರೂ ಬಿಜೆಪಿಗರು.
ಕಮಿಷನ್, ಭ್ರಷ್ಟಾಚಾರಗಳ ಬಗ್ಗೆ ಸ್ವಪಕ್ಷದವರಿಂದಲೇ ಟೀಕೆಗೆ ಒಳಗಾಗಿದ್ದು ಬಿಜೆಪಿ.
ಹೈಕಮಾಂಡಿಗೆ ಹಫ್ತಾ ಕೊಡುತ್ತಿದ್ದಿದ್ದೂ ಬಿಜೆಪಿ.
ಹುದ್ದೆಗಳನ್ನು ಮಾರಾಟಕ್ಕೆ ಇಟ್ಟಿದ್ದೂ ಬಿಜೆಪಿ.
ಇಂತಹ ಭ್ರಷ್ಟ ಜನತಾ ಪಾರ್ಟಿ…
'ಅಧಿಕಾರವಿಲ್ಲದ, ಲೂಟಿಯ ಅವಕಾಶ ವಂಚಿತ...'
ಹಾಗೇ ಮತ್ತೊಂದು ಟ್ವೀಟ್ ಮೂಲಕ, 'ಅಧಿಕಾರವಿಲ್ಲದ, ಲೂಟಿಯ ಅವಕಾಶ ವಂಚಿತ ಬಿಜೆಪಿ ಜೆಡಿಎಸ್ ನಾಯಕರು ಮತಿ ಭ್ರಮಣೆಯಾದಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವೇ ಇಲ್ಲದ ಗುತ್ತಿಗೆದಾರನ ಮನೆಯಲ್ಲಿ ಹಣವಿದ್ದರೆ ಕಾಂಗ್ರೆಸ್ ಗೆ ಸಂಬಂಧ ಕಟ್ಟುವ ಬಿಜೆಪಿಗರು ಚಿಲುಮೆ ಪ್ರಕರಣದಲ್ಲಿ ಆಗಿನ ಹಾಲಿ ಸಚಿವರೊಬ್ಬರಿಗೆ ಸಂಬಂಧಿಸಿದ ದಾಖಲೆಗಳು ನೇರಾನೇರಾ ಸಾಕ್ಷಿಯಾಗಿ ಸಿಕ್ಕಿದ್ದವು. ಚಿಲುಮೆ ಹಗರಣದಲ್ಲಿ ಇಡೀ ಬಿಜೆಪಿ ಕೈವಾಡವಿರುವುದನ್ನು @BJP4Karnataka ಬಹಿರಂಗವಾಗಿ ಒಪ್ಪಿಕೊಳ್ಳುವುದೇ??' ಎಂದು ನೇರವಾಗಿ ಸವಾಲು ಹಾಕಿದೆ ಕರ್ನಾಟಕ ಕಾಂಗ್ರೆಸ್.
ಅಧಿಕಾರವಿಲ್ಲದ, ಲೂಟಿಯ ಅವಕಾಶ ವಂಚಿತ ಬಿಜೆಪಿ ಜೆಡಿಎಸ್ ನಾಯಕರು ಮತಿಭ್ರಮಣೆಯಾದಂತೆ ವರ್ತಿಸುತ್ತಿದ್ದಾರೆ.
— Karnataka Congress (@INCKarnataka) October 16, 2023
ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವೇ ಇಲ್ಲದ ಗುತ್ತಿಗೆದಾರನ ಮನೆಯಲ್ಲಿ ಹಣವಿದ್ದರೆ ಕಾಂಗ್ರೆಸ್ ಗೆ ಸಂಬಂಧ ಕಟ್ಟುವ ಬಿಜೆಪಿಗರು ಚಿಲುಮೆ ಪ್ರಕರಣದಲ್ಲಿ ಆಗಿನ ಹಾಲಿ ಸಚಿವರೊಬ್ಬರಿಗೆ ಸಂಬಂಧಿಸಿದ ದಾಖಲೆಗಳು ನೇರಾನೇರಾ ಸಾಕ್ಷಿಯಾಗಿ…
ಒಟ್ನಲ್ಲಿ ಐಟಿ ದಾಳಿ ವಿಚಾರವಾಗಿ ಫೈಟಿಂಗ್ ಬಲು ಜೋರಾಗಿದೆ. ಹೀಗಾಗಿ ಈ ಫೈಟಿಂಗ್ ಯಾವಾಗ ಮುಗಿಯುತ್ತೆ ಅಂತಾ ಕಾದು ನೋಡಬೇಕು. ಈಗಿನ ಪರಿಸ್ಥಿತಿ ನೋಡಿದರೆ, ಈ ಕಿತ್ತಾಟ ಲೋಕಸಭೆ ಚುನಾವಣೆ ಮುಗಿಯುವ ತನಕ ನಿಲ್ಲುವ ಲಕ್ಷಣಗಳು ಮಾತ್ರ ಕಾಣ್ತಾ ಇಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಿತ್ತಾಟ ಕೂಡ ಭರ್ಜರಿ ಮನರಂಜನೆ ನೀಡುವುದು ಪಕ್ಕಾ.












Click it and Unblock the Notifications