‘ಬಿಜೆಪಿ ಅಂದ್ರೆ ಒಂಥರಾ ವಾಷಿಂಗ್ ಮೆಷಿನ್ ಇದ್ದಂತೆ...’ ಹಿಂಗೆ ಹೇಳಿದ್ದು ಯಾರು?

ಲೋಕಸಭೆ ಚುನಾವಣೆ 2024ರ ದಿನಾಂಕ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ & ಬಿಜೆಪಿ ನಾಯಕರು ಪರಸ್ಪರ ಭರ್ಜರಿ ಫೈಟಿಂಗ್ ಮಾಡುತ್ತಿದ್ದಾರೆ. ಈ ತಿಕ್ಕಾಟದಲ್ಲಿ ಭಾರಿ ವಾಗ್ದಾಳಿ ಕೂಡ ನಡೆದಿದೆ. ಹಾಗೇ ಪಕ್ಷಾಂತರ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೇ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ಈಗ ಹೊಸ ಆರೋಪದ ಬಾಂಬ್ ಸಿಡಿಸಿದೆ!

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶಾದ್ಯಂತ ಅನೇಕ ನಾಯಕರು ಕಾಂಗ್ರೆಸ್ ಮತ್ತು ವಿವಿಧ ವಿರೋಧ ಪಕ್ಷಗಳನ್ನು ತೊರೆದು ಬಿಜೆಪಿಗೆ ಬಂದಿದ್ದಾರೆ. ಈಗ ಇದೇ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್ ಒಂದು ಟ್ವೀಟ್ ಮಾಡಿದೆ. ಈ ಮೂಲಕ 'ಬಿಜೆಪಿ ಅಂದ್ರೆ ಒಂಥರಾ ವಾಷಿಂಗ್ ಮೆಷಿನ್ ಇದ್ದಂತೆ' ಅಂತಾ ಕಾಂಗ್ರೆಸ್ ಹೇಳಿದೆ. ಹಾಗಾದರೆ ಕಾಂಗ್ರೆಸ್ ನೀಡಿರುವ ಸಂಪೂರ್ಣ ಹೇಳಿಕೆಯ ಬಗ್ಗೆ ತಿಳಿಯಬೇಕಾ? ಈ ಮೂಲಕ ಬಿಜೆಪಿ ಬಗ್ಗೆ ಇದೀಗ ಕಾಂಗ್ರೆಸ್ ಯಾವ ತಂತ್ರ ಹೂಡಿದೆ..? ಹಾಗಾದ್ರೆ ಸಂಪೂರ್ಣ ಮಾಹಿತಿಗೆ ಮುಂದೆ ಓದೋಣ ಬನ್ನಿ.

Karnataka Congress Alleged That BJP Is Like Washing Machine

ಯಾವೊಬ್ಬ ಭ್ರಷ್ಟಾಚಾರಿಯನ್ನೂ....

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಬಿಜೆಪಿ ಅಂದ್ರೆ ಒಂಥರಾ ವಾಷಿಂಗ್ ಮೆಷಿನ್ ಇದ್ದಂತೆ, ಕಂಪೆನಿಗಳು ಭ್ರಷ್ಟಾಚಾರದ ಆರೋಪ ಹೊತ್ತಿದ್ದರೆ ಚುನಾವಣಾ ಬಾಂಡ್ ಖರೀದಿಸುವ ಮೂಲಕ ಶುದ್ಧರಾಗಬಹುದು! ರಾಜಕಾರಿಣಿಗಳು ಭ್ರಷ್ಟರಾಗಿದ್ದರೆ ಬಿಜೆಪಿ ಸೇರುವ ಮೂಲಕ ಪವಿತ್ರರಾಗಬಹುದು! "ಯಾವೊಬ್ಬ ಭ್ರಷ್ಟಾಚಾರಿಯನ್ನೂ ಬಿಡುವುದಿಲ್ಲ" ಎಂದಿದ್ದ ಮೋದಿಯವರು ನುಡಿದಂತೆ ನಡೆಯುತ್ತಿದ್ದಾರೆ, ಯಾವೊಬ್ಬ ಭ್ರಷ್ಟರನ್ನೂ ಬಿಡದೆ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ! ಭ್ರಷ್ಟಾಚಾರದ ವಿರುದ್ಧ ಮೋದಿಯವರ ಸರ್ಜಿಕಲ್ ಸ್ಟ್ರೈಕ್ ಅಮೋಘವಾದುದು!!' ಎಂದು ಗಂಭೀರ ಆರೋಪ ಮಾಡಿದೆ ಕಾಂಗ್ರೆಸ್.

ನಿಲ್ಲುವುದಿಲ್ಲ ಈ ಮಹಾಯುದ್ಧ!

ಹೀಗೆ ಚುನಾವಣೆ ದಿನಾಂಕ ಹತ್ತಿರ ಆಗುತ್ತಿದ್ದಂತೆ ಬಿಜೆಪಿ & ಕಾಂಗ್ರೆಸ್ ನಡುವಿನ ತಿಕ್ಕಾಟ ಕೂಡ ಬಲು ಜೋರಾಗುತ್ತಿದೆ. ಒಂದು ಕಡೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿದೆ. ಇದೇ ಸಮಯದಲ್ಲಿ ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಈ ಮೂಲಕ ಇಬ್ಬರ ನಡುವಿನ ತಿಕ್ಕಾಟ ಈಗ ತಾರಕಕ್ಕೇರಿದೆ. ಅಲ್ಲದೆ ಚುನಾವಣೆ ಮುಗಿಯುವ ತನಕ ಈ ಯುದ್ಧವು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

Karnataka Congress Alleged That BJP Is Like Washing Machine

ಕರ್ನಾಟಕದಲ್ಲಿ ಯಾವಾಗ ಚುನಾವಣೆ?

ಚುನಾವಣಾ ಆಯೋಗದ ಅಧಿಕಾರಿಗಳು ಘೋಷಣೆ ಮಾಡಿರುವ ಪ್ರಕಾರ, ಏಪ್ರಿಲ್ 26 ರಂದು & ಮೇ 7 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಫಲಿತಾಂಶವು, ಜೂನ್ 4 ಕ್ಕೆ ಹೊರಬೀಳಲಿದೆ. ಈ ಮೂಲಕ, ಇಡೀ ಪ್ರಪಂಚದ ಗಮನ ಸೆಳೆದಿರುವ. ಭಾರತದ ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ತಲುಪುತ್ತಿದೆ. ಈ ಸಮಯದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫುಲ್ ಫೈಟ್ ಶುರುವಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಭಾರಿ ಪ್ರಮಾಣದಲ್ಲಿ ನಡೆಯುತ್ತಿವೆ. ಹೀಗಾಗಿ ಮುಂದೆ ಏನಾಗುತ್ತೆ? ಮತದಾರ ಪ್ರಭು ಯಾರ ಪರವಾಗಿ ನಿಲ್ಲುತ್ತಾನೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+