‘ಬಿಜೆಪಿ ಜೆಡಿಎಸ್ ಮೈತ್ರಿ ಎನ್ನುವುದು ಒಲ್ಲದ ಸಂಸಾರದಲ್ಲಿ ಸಾಮರಸ್ಯದ ನಾಟಕದಂತಿದೆ!’ ಹಿಂಗೆ ಹೇಳಿದ್ದು ಯಾರು?
ಜೆಡಿಎಸ್ & ಬಿಜೆಪಿ ನಡುವೆ ಮೈತ್ರಿ ಯಾಕೋ ಸರಿ ಬರುತ್ತಿಲ್ಲ ಎಂಬ ಆರೋಪಗಳ ಬೆನ್ನಲ್ಲೇ ಈಗ ಸೀಟು ಹಂಚಿಕೆ ವಿಚಾರದಲ್ಲಿ ಭಾರಿ ಗೊಂದಲ ಏರ್ಪಟ್ಟಿದೆ. ಒಂದು ಕಡೆ ಬಿಜೆಪಿಯ ಹೈಕಮಾಂಡ್ ನಾಯಕರು ತಾವು ನಡೆದಿದ್ದೇ ದಾರಿ ಅಂತಾ ಅನ್ನುವಾಗಲೇ, ದಳಪತಿಗಳು ಕೂಡ ಬಿಜೆಪಿಗೆ ಮೊದಲ ಆಘಾತ ನೀಡಿದ್ದಾರೆ. ಸೀಟು ಹಂಚಿಕೆ ವಿಚಾರವಾಗಿ ಜೆಡಿಎಸ್ & ಬಿಜೆಪಿ ನಡುವೆ ಕಿರಿಕ್ ಜೋರಾದ ಸಮಯದಲ್ಲೇ ಕಾಂಗ್ರೆಸ್, ಹೊಸ ಆರೋಪದ ಬಾಂಬ್ ಸಿಡಿಸಿದೆ!
ಬಿಜೆಪಿ & ಕಾಂಗ್ರೆಸ್ ನಡುವೆ ಸೋಷಿಯಲ್ ಮೀಡಿಯಾ ಮಹಾಯುದ್ಧ ಇಂದು, ನಿನ್ನೆಯ ವಿಚಾರ ಅಲ್ಲ. ಕಳೆದ ಹಲವು ವರ್ಷಗಳಿಂದ ಕೂಡ ಈ ರೀತಿ ಕಿರಿಕ್ ನಡೆಯುತ್ತಿದೆ. ಇನ್ನು ಲೋಕಸಭೆ ಚುನಾವಣೆ 2024 ಹತ್ತಿರ ಬರುತ್ತಿದ್ದಂತೆ, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಈಗ ಸೋಷಿಯಲ್ ಮೀಡಿಯಾ ತಿಕ್ಕಾಟ ಜೋರಾಗಿದೆ. ಹೀಗಿದ್ದಾಗಲೇ ಜೆಡಿಎಸ್ & ಬಿಜೆಪಿ ಮಧ್ಯೆ ನಡೆಯುತ್ತಿರುವ ಮೈತ್ರಿ ತಿಕ್ಕಾಟದ ಬಗ್ಗೆ ಕಾಂಗ್ರೆಸ್ ಕುಹಕವಾಡಿದೆ. ಅಲ್ಲದೆ, ಈ ಮೈತ್ರಿಯ ಹೊಂದಾಣಿಕೆ ಜಾಸ್ತಿ ದಿನ ಇರಲ್ಲ ಎಂಬ ಅರ್ಥದಲ್ಲಿ ಮಾತನಾಡಿದೆ.

ಜೆಡಿಎಸ್ & ಬಿಜೆಪಿ ದೋಸ್ತಿ ಬಗ್ಗೆ...
ಈಗ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿ ಜೆಡಿಎಸ್ ಮೈತ್ರಿ ಎನ್ನುವುದು ಒಲ್ಲದ ಸಂಸಾರದಲ್ಲಿ ಸಾಮರಸ್ಯದ ನಾಟಕದಂತಿದೆ! ಬಿಜೆಪಿ ಮೊದಲ ಪಟ್ಟಿಯ ಟಿಕೆಟ್ ಘೋಷಣೆಯಲ್ಲಿ ಜೆಡಿಎಸ್ ನಾಯಕರಲ್ಲಿ ಕನಿಷ್ಠ ಸಲಹೆಯನ್ನೂ ಪಡೆಯಲಿಲ್ಲ, ಕೇವಲ 2,3 ಕ್ಷೇತ್ರಕ್ಕಾಗಿ ಬಿಜೆಪಿ ಎದುರು ಗೋಗರೆದು ನಿಲ್ಲುವ ಸ್ಥಿತಿ @hd_kumaraswamy ಅವರಿಗೆ ಬರಬಾರದಿತ್ತು! ಇಂತಹ ಗುಲಾಮಗಿರಿಯ ಮೈತ್ರಿಯ ಬದಲು ರಾಜಕೀಯ ನಿವೃತ್ತಿಯೇ ಹೆಚ್ಚು ಗೌರವಯುತವಾದುದು ಎಂದು ಕುಮಾರಸ್ವಾಮಿಯವರಿಗೆ ಸದ್ಯದಲ್ಲೇ ಜ್ಞಾನೋದಯವಾಗಲಿದೆ!' ಎಂದು ಜೆಡಿಎಸ್ & ಬಿಜೆಪಿ ನಾಯಕರನ್ನು ಕೆಣಕಿದೆ ಕಾಂಗ್ರೆಸ್.
ಬಿಜೆಪಿ ಜೆಡಿಎಸ್ ಮೈತ್ರಿ ಎನ್ನುವುದು ಒಲ್ಲದ ಸಂಸಾರದಲ್ಲಿ ಸಾಮರಸ್ಯದ ನಾಟಕದಂತಿದೆ!
— Karnataka Congress (@INCKarnataka) March 20, 2024
ಬಿಜೆಪಿ ಮೊದಲ ಪಟ್ಟಿಯ ಟಿಕೆಟ್ ಘೋಷಣೆಯಲ್ಲಿ ಜೆಡಿಎಸ್ ನಾಯಕರಲ್ಲಿ ಕನಿಷ್ಠ ಸಲಹೆಯನ್ನೂ ಪಡೆಯಲಿಲ್ಲ,
ಕೇವಲ 2,3 ಕ್ಷೇತ್ರಕ್ಕಾಗಿ ಬಿಜೆಪಿ ಎದುರು ಗೋಗರೆದು ನಿಲ್ಲುವ ಸ್ಥಿತಿ @hd_kumaraswamy ಅವರಿಗೆ ಬರಬಾರದಿತ್ತು!
ಇಂತಹ ಗುಲಾಮಗಿರಿಯ ಮೈತ್ರಿಯ ಬದಲು…
ಹಾಗೇ ಮತ್ತೊಂದು ಟ್ವೀಟ್‌ನಲ್ಲಿ ಜೆಡಿಎಸ್ & ಬಿಜೆಪಿ ನಾಯಕರನ್ನು ಅಣಕಿಸಿರುವ ಕಾಂಗ್ರೆಸ್ '"ನಾವೇನು 5,6 ಸೀಟು ಕೇಳುತ್ತಿದ್ದೇವಾ, 3 ಕ್ಷೇತ್ರ ಕೇಳುತ್ತಿದ್ದೇವೆ ಅಷ್ಟೇ, 2 ಕ್ಷೇತ್ರ ಪಡೆಯುವುದಕ್ಕೆ ಬಿಜೆಪಿಯವರ ಹತ್ತಿರ ಬರಬೇಕಿತ್ತಾ" ಎಂದು ಕುಮಾರಸ್ವಾಮಿಯವರು ಗೋಳಾಡುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೆ ಮಾತ್ರ ಕ್ಷೇತ್ರ ಭದ್ರಪಡಿಸಿಕೊಳ್ಳಲು ಹೋರಾಡುತ್ತಿರುವ @hd_kumaraswamy ಅವರು ತಮ್ಮ ಪಕ್ಷದ ಇತರ ನಾಯಕರ ಕುರಿತು ಯೋಚಿಸುವುದುಂಟೇ! ಇವರು ಕೇಳುತ್ತಿರುವ 3 ಕ್ಷೇತ್ರ ತಮ್ಮ ಫ್ಯಾಮಿಲಿಗೆ ಮಾತ್ರ, ಕಾರ್ಯಕರ್ತರು, ಇತರ ನಾಯಕರು ರಾಜಕೀಯ ಸನ್ಯಾಸ ಸ್ವೀಕರಿಸುವುದೇ ಉತ್ತಮ. ಜೆಡಿಎಸ್ ನಂಬಿಕೊಂಡಿರುವ ಕಾರ್ಯಕರ್ತರಿಗೆ ಯಾವುದೇ ರಾಜಕೀಯ ಭವಿಷ್ಯವಿಲ್ಲ ಎನ್ನುವುದು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಷ್ಟೇ ಸತ್ಯ.' ಎಂದು ಟ್ವೀಟ್ ಮಾಡಿದೆ ಕಾಂಗ್ರೆಸ್.
“ನಾವೇನು 5,6 ಸೀಟು ಕೇಳುತ್ತಿದ್ದೇವಾ, 3 ಕ್ಷೇತ್ರ ಕೇಳುತ್ತಿದ್ದೇವೆ ಅಷ್ಟೇ, 2 ಕ್ಷೇತ್ರ ಪಡೆಯುವುದಕ್ಕೆ ಬಿಜೆಪಿಯವರ ಹತ್ತಿರ ಬರಬೇಕಿತ್ತಾ“ ಎಂದು ಕುಮಾರಸ್ವಾಮಿಯವರು ಗೋಳಾಡುತ್ತಿದ್ದಾರೆ.
— Karnataka Congress (@INCKarnataka) March 20, 2024
ತಮ್ಮ ಕುಟುಂಬ ಸದಸ್ಯರಿಗೆ ಮಾತ್ರ ಕ್ಷೇತ್ರ ಭದ್ರಪಡಿಸಿಕೊಳ್ಳಲು ಹೋರಾಡುತ್ತಿರುವ @hd_kumaraswamy ಅವರು ತಮ್ಮ ಪಕ್ಷದ ಇತರ ನಾಯಕರ ಕುರಿತು…
ಒಟ್ನಲ್ಲಿ ಬಿಜೆಪಿ & ಕಾಂಗ್ರೆಸ್ ತಿಕ್ಕಾಟ ಜೋರಾಗಿದ್ದು, ಈ ನಡುವೆ ಜೆಡಿಎಸ್ ನಾಯಕರನ್ನು ಕೂಡ ಅಣಕಿಸುತ್ತಿದೆ ಕರ್ನಾಟಕ ಕಾಂಗ್ರೆಸ್. ಹೀಗಾಗಿ ಇದೆಲ್ಲಾ ಕಿರಿಕ್ ಎಲ್ಲಿಗೆ ಬಂದು ನಿಲ್ಲುತ್ತೋ ಎಂಬ ಚರ್ಚೆ ಕೂಡ ಜೋರಾಗಿದೆ. ಆದರೆ ಇದಕ್ಕೆಲ್ಲಾ ಉತ್ತರ ಸಿಗಲು 2024ರ ಲೋಕಸಭಾ ಎಲೆಕ್ಷನ್ ಫಲಿತಾಂಶ ಬರುವ ತನಕ ಕಾದು ನೋಡಬೇಕಿದೆ.












Click it and Unblock the Notifications