ಟ್ವಿಟ್ಟರ್‌ನಲ್ಲಿ ಪರಸ್ಪರರ ಮೇಲೆ ಯುದ್ಧ ಸಾರಿದ ಕಾಂಗ್ರೆಸ್-ಬಿಜೆಪಿ

ಬೆಂಗಳೂರು, ಅಕ್ಟೋಬರ್ 03: ಕರ್ನಾಟಕ ಬಿಜೆಪಿ-ಕಾಂಗ್ರೆಸ್ ನಡುವೆ ಟ್ವಿಟ್ಟರ್‌ ನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭಾರಿ ಜಟಾಪಟಿ ನಡೆದಿದೆ. ಒಬ್ಬರ ಮೇಲೊಬ್ಬರು ಭರ್ಜರಿಯಾಗಿ ಕೆಸರೆರಿಚಿಕೊಂಡಿದ್ದಾರೆ.

ನಿನ್ನೆ ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಸಿಡಿಸಿದ್ದನ್ನು ರಾಹುಲ್ ಗಾಂಧಿ ಕಟು ಶಬ್ದಗಳಲ್ಲಿ ಟೀಕಿಸಿದ್ದರು. ಇದು ಯಡಿಯೂರಪ್ಪ ಅವರಿಗೆ ಸರಿ ಕಂಡಿಲ್ಲ ಹಾಗಾಗಿ ರಾಹುಲ್ ಮೇಲೆ ತಮ್ಮ ಸಿಟ್ಟು ತೀರಿಸಿಕೊಳ್ಳಲು ಅವರು ಟ್ವಿಟ್ಟರ್‌ ಮೂಲಕ ರಾಹುಲ್ ಅವರ ಕಾಲೆಳೆದರು.

ನಿನ್ನೆ ಸಂಜೆ ಟ್ವೀಟ್ ಮಾಡಿದ ಯಡಿಯೂರಪ್ಪ, 'ರಾಹುಲ್ ಅವರೇ ದೆಹಲಿಯ ರೈತರ ಬಗ್ಗೆ ಮಾತನಾಡುವ ನೀವು ನಿಮ್ಮದೇ ಪಕ್ಷ ಮೈತ್ರಿಯಲ್ಲಿರುವ ಕರ್ನಾಟಕದ ಕಡೆ ಕಣ್ಣಾಯಿಸಿ ಇಲ್ಲಿ ಕಳೆದ ಆರು ತಿಂಗಳಲ್ಲಿ 285 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದಿದ್ದರು.

ರೈತರ ಮೇಲೆ ಗೋಲಿಬಾರ್ ಮಾಡಿದ್ದನ್ನು ನೆನಪಿಸಿದ ಕಾಂಗ್ರೆಸ್

ಯಡಿಯೂರಪ್ಪ ಅವರು ರಾಹುಲ್ ಅವರನ್ನು ವಿರೋಧಿಸಿ ಟ್ವೀಟ್ ಮಾಡಿದ್ದು ಕರ್ನಾಟಕ ಕಾಂಗ್ರೆಸ್ ಅನ್ನು ಕೆರಳಿಸಿತು. ಯಡಿಯೂರಪ್ಪ ಅವರ ಟ್ವೀಟ್‌ಗೆ ಪ್ರತಿ ಟ್ವೀಟ್ ಮಾಡಿದ ಕರ್ನಾಟಕ ಕಾಂಗ್ರೆಸ್, 'ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸದಿರಿ. ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿದ್ದೀರಿ ನೀವು, ನಿಮ್ಮ ಅವಧಿಯಲ್ಲಿ 1125 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರೈತರ ಸಾಲಮನ್ನಾ ಮಾಡಲು ನೋಟು ಪ್ರಿಂಟ್ ಮಾಡುವ ಮಷೀನ್ ಇಟ್ಟುಕೊಂಡಿಲ್ಲ ಎಂದಿದ್ದವರು ನೀವು' ಎಂದು ಟ್ವೀಟ್ ಮಾಡಿದೆ.

Array

ಸಿದ್ದರಾಮಯ್ಯ ಕಾಲದ ರೈತರ ಆತ್ಮಹತ್ಯೆ ಲೆಕ್ಕ ಕೊಟ್ಟ ಬಿಜೆಪಿ

ತಮ್ಮ ನಾಯಕನಿಗೆ ಟ್ವಿಟ್ಟರ್‌ನಲ್ಲಿ ತೇಜೋವಧೆ ಆಗುತ್ತಿರುವುದನ್ನು ಸಹಿಸದ ಕರ್ನಾಟಕ ಬಿಜೆಪಿ ಯಡಿಯೂರಪ್ಪ ಅವರಿಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್‌ನ ಟ್ವೀಟ್‌ಗೆ ಪ್ರತಿ ಟ್ವೀಟ್ ಮಾಡಿ, ಸಿದ್ದರಾಮಯ್ಯ ಕಾಲದ ಲೆಕ್ಕಗಳನ್ನು ನೀಡಿದೆ. '3750 ರೈತರು ಸಿದ್ದರಾಮಯ್ಯ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಲ್ಲದೆ ಐಟಿ, ಇಡಿ ರೇಡ್ ಆದಾಗ ಯಾರು ಸಿಕ್ಕಿಹಾಕಿಕೊಂಡಿದ್ದಾರೆ ಎಂಬುದನ್ನು ರಾಜ್ಯ ನೋಡಿದೆ, ದರೋಡೆಕೋರರು ನೈತಿಕತೆಯನ್ನು ಉಪದೇಶಿಸಬಾರದು ಎಂದು ಬಿಜೆಪಿ ಕಾಂಗ್ರೆಸ್‌ನ ಕಾಲೆಳೆದಿದೆ.

ಮೈನಿಂಗ್ ಮಾಫಿಯಾ, ನೀಲಿಚಿತ್ರ ವೀಕ್ಷಣೆ ನೆನಪು

ಬಿಜೆಪಿಯ ಟ್ವೀಟ್‌ಗೆ ಆಕ್ರೋಶಗೊಂಡ ಕಾಂಗ್ರೆಸ್ ಬಿಜೆಪಿ ಅವಧಿಯ ಕುಖ್ಯಾತಿಗಳ ಪಟ್ಟಿ ಮಾಡಿ ಪ್ರತಿಟ್ವೀಟ್ ಮಾಡಿದೆ. ಬಿಜೆಪಿ ಅವಧಿಯಲ್ಲಿ ರಾಜ್ಯವು ಭ್ರಷ್ಟಾಚಾರದಲ್ಲಿ ನಂ.1 ಆಗಿತ್ತು. ಮೈನಿಂಗ್ ಮಾಫಿಯಾ, ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ, ಮಂತ್ರಿಯಿಂದ ರೇಪ್, ಮಹಿಳೆಯೊಂದಿಗೆ ಅಸಭ್ಯ ವರ್ತನೆ ಎಲ್ಲವೂ ಬಿಜೆಪಿಯ ಸಾಧನೆ ಎಂದಿದೆ. ಇನ್ನು ಐಟಿ, ಇಡಿಯು ಬಿಜೆಪಿಯ ಕೈಗೊಂಬೆ ಎಂದು ದೇಶದ ಮಕ್ಕಳಿಗೂ ಗೊತ್ತಿದೆ' ಎಂದು ಬಿಜೆಪಿಗೆ ಮರ್ಮಕ್ಕೆ ತಾಗುವಂತೆ ಟ್ವೀಟಿಸಿದೆ.

ಕಾಂಗ್ರೆಸ್ಸಿಗರನ್ನು ರಾಹುಲ್‌ನ ನಾಯಿಗಳೆಂದ ಬಿಜೆಪಿ

ಇದರಿಂದ ರೊಚ್ಚಿಗೆದ್ದ ಬಿಜೆಪಿ ಪ್ರತಿ ಟ್ವೀಟ್ ಮಾಡಿ, ನಿಮ್ಮ ಮಿತ್ರ ಪಕ್ಷವೇ ನಿಮ್ಮನ್ನು ಅತಿ ಭ್ರಷ್ಟ ಎಂದಿದೆ ಎಂದು ಈ ಹಿಂದೆ ದೇವೇಗೌಡ ಅವರು, 'ಸಿದ್ದರಾಮಯ್ಯ ಸರ್ಕಾರ ಅತಿ ಭ್ರಷ್ಟ' ಎಂದಿದ್ದ ಸುದ್ದಿಯ ಲಿಂಕ್ ಅನ್ನು ಟ್ವೀಟ್‌ಗೆ ಲಗತ್ತಿಸಿದೆ. ಎನ್‌ಸಿಆರ್‌ಬಿ ವರದಿ ಪ್ರಕಾರ ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಅಪರಾಧ ನಡೆದಿತ್ತು ಎಂದು ಹೇಳಿಕೆ ಜೊತೆಗೆ, ಮೇಟಿ ಅವರ ಸೆಕ್ಸ್‌ ವಿಡಿಯೋ ಸಾಕು ನಿಮ್ಮ ಪಕ್ಷದ ಬಗ್ಗೆ ಹೇಳಲು ಎಂದು ಕಾಲೆಳೆದು, ಅಂಕಿ-ಅಂಶಗಳನ್ನು ಸರಿಯಿಟ್ಟುಕೊಳ್ಳಿ ಪಿಡಿಗಳೆ ಎಂದು ಕಾಂಗ್ರೆಸ್‌ನ ಕಾಲೆಳೆದಿದೆ. ('ಪಿಡಿ' ರಾಹುಲ್ ಗಾಂಧಿ ಅವರ ನಾಯಿಯ ಹೆಸರು).

'ಬಿಜೆಪಿಗರೇ ಯಡಿಯೂರಪ್ಪ ಅವರ ತೆಗಳಿದ ವಿಡಿಯೋ ಹಾಕ್ತೀವಿ'

ಇದಕ್ಕೆ ಮತ್ತೆ ಪ್ರತಿಟ್ವೀಟ್ ಮಾಡಿರುವ ಕಾಂಗ್ರೆಸ್, ಎನ್‌ಸಿಆರ್‌ಬಿ ವರದಿಯನ್ನು ಅರ್ಥಮಾಡಿಕೊಳ್ಳಲಾಗದಿರುವ ಬಿಜೆಪಿ ಬಗ್ಗೆ ಪಾಪ ಎನಿಸುತ್ತಿದೆ ಎಂದಿರುವ ಕಾಂಗ್ರೆಸ್‌ ಮುಂದುವರೆದು, ವಿಡಿಯೋಗಳ ಬಗ್ಗೆ ಮಾತನಾಡಬೇಡಿ, ನಾವೇನಾದರೂ 2013 ರಲ್ಲಿ ಬಿಜೆಪಿ ನಾಯಕರು ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿರುವ ವಿಡಿಯೋಗಳನ್ನು ಹಾಕಿದರೆ ನೀವು ನೋಡಲಾರಿರಿ ಎಂದು ಕಾಲೆಳೆದಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಹೋಗಿದ್ದಾಗ ಬಿಜೆಪಿ ನಾಯಕರು ಅವರನ್ನು ಬಹಿರಂಗವಾಗಿ ಜರಿದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+