ಮೇ 04, 05ರಂದು ಕರ್ನಾಟಕ ಸಿಇಟಿ ಪರೀಕ್ಷೆ 2016

Posted By:
Subscribe to Oneindia Kannada

ಬೆಂಗಳೂರು, ಮೇ 03: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೇ 4ರಿಂದ 6ರವರೆಗೆ ರಾಜ್ಯದೆಲ್ಲೆಡೆ ನಡೆಯಲಿದೆ. ಸುಮಾರು 1,78,346 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ರಾಜ್ಯಾದ್ಯಂತ 391 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿ 82 ಕೇಂದ್ರಗಳಲ್ಲಿ 42,963 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದಾರೆ.

ಗಡಿನಾಡು ಮತ್ತು ಹೊರನಾಡು ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ಮೇ 6ರಂದು ನಡೆಯಲಿದ್ದು, 2,560 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

Karnataka Common Entrance Test-2016 on May 04, 05

ಕೆಇಎ ಸಿದ್ಧತೆ: 391 ವೀಕ್ಷಕರು, 782 ವಿಶೇಷ ಜಾಗೃತ ದಳ ಸದಸ್ಯರು, 391 ಪ್ರಶ್ನೆಪತ್ರಿಕಾ ಪಾಲಕರು, ಸುಮಾರು 11,170 ಕೊಠಡಿ ಮೇಲ್ವಿಚಾರಕರು ಹಾಗೂ 19,000 ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಿದೆ.

ವಿದ್ಯಾರ್ಥಿಗಳ ಗಮನಕ್ಕೆ: ಅಭ್ಯರ್ಥಿಗಳು ಪರೀಕ್ಷಾ ದಿನಗಳಂದು ಪ್ರವೇಶ ಪತ್ರದ ಜೊತೆಯಲ್ಲಿ ಒಂದು ಮಾನ್ಯತೆಯುಳ್ಳ ಗುರುತಿನ ಚೀಟಿ(ಕಾಲೇಜಿನ ಗುರುತಿನ ಚೀಟಿ, 2ನೇಪಿಯು ಪ್ರವೇಶಪತ್ರ, ಬಸ್​ಪಾಸ್/ ಡ್ರೈವಿಂಗ್ ಲೈಸನ್ಸ್/ ಪಾಸ್ ಪೋರ್ಟ್/ ಆಧಾರ್ ಕಾರ್ಡ್/ ಪ್ಯಾನ್ ಕಾರ್ಡ್.. ಇತ್ಯಾದಿ) ಕಡ್ಡಾಯವಾಗಿ ಹೊಂದಿರಬೇಕು.

* ಅಭ್ಯರ್ಥಿಗಳು ಕೈಗಡಿಯಾರ ಕಟ್ಟುವಂತಿಲ್ಲ. ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಗೋಡೆ ಗಡಿಯಾರದ ವ್ಯವಸ್ಥೆ ಮಾಡಲಾಗಿದೆ.
* ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂತ್, ಸ್ಲೈಡ್ ರೂಲ್ಸ್, ಕ್ಯಾಲ್ ಕ್ಯುಲೇಟರ್, ವೈಟ್ ಫ್ಲೂಯಿಡ್, ವೈರ್​ಲೆಸ್ ಸೆಟ್ಸ್, ಟ್ಯಾಬ್ಲೆಟ್ ಗಳನ್ನು ಪರೀಕ್ಷಾ ಕೊಠಡಿಗೆ ತರುವಂತಿಲ್ಲ.
* ಪರೀಕ್ಷೆ ಆರಂಭಕ್ಕೆ ಅರ್ಧಗಂಟೆ ಮೊದಲೇ ಅಭ್ಯರ್ಥಿಗಳು ಹಾಜರಿರಬೇಕು.
* ಪ್ರವೇಶಪತ್ರ ಡೌನ್​ಲೋಡ್ ಮಾಡಿಕೊಳ್ಳದ ವಿದ್ಯಾರ್ಥಿಗಳು ಕೆಇಎ ವೆಬ್​ಸೈಟ್ http://kea.kar.nic.in/ ಗೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಿ.ಆಲ್ ದಿ ಬೆಸ್ಟ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
karnataka Common Entrance Test-2016 will be held on May 04, 05 across the state in 391 centers. A total of 1,78,346 candidates will take exam. Bengaluru has 82 centers and 42,963 candidates appearing for the test.
Please Wait while comments are loading...