12 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ: ನಾಲ್ವರು ಮೃತಪಟ್ಟ ಕುಟಂಬಕ್ಕೆ ಸಿದ್ದರಾಮಯ್ಯ ನೆರವು!

ಮೈಸೂರು: ರಾಜ್ಯದಲ್ಲಿ ಸದ್ದು ಮಾಡಿದ್ದ ಸಾಂಸ್ಕೃತಿಕ ನಗರಿ ಮೈಸೂರಿನ ಅನಿಲ ಸೋರಿಕೆ ದುರಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ಖುದ್ದು ಪರಿಶೀಲನೆ ನಡೆಸಿದ್ದಾರೆ. ಹಾಗೇ ಈ ಅನಿಲ ಸೋರಿಕೆಯ ಹಿನ್ನೆಲೆ, ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ‌ ಹೇಳಿದರು. ಇದರ ಜೊತೆ ತಲಾ 3 ಲಕ್ಷದಂತೆ ಒಟ್ಟು 12 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

ಗುರುವಾರ ಸಂಜೆ ಮೈಸೂರು ನಗರದ ಯರಗನಹಳ್ಳಿ ಮನೆಗೆ ಭೇಟಿ ನೀಡಿದ ಸಿಎಂ, ಮೈಸೂರು ನಗರ ಡಿಸಿಪಿ ಎಂ. ಮುತ್ತುರಾಜು ಅವರಿಂದ ಘಟನೆ ಬಗ್ಗೆ ಮಾಹಿತಿ ಕೂಡ ಪಡೆದುಕೊಂಡರು. ಅನಿಲ ದುರಂತ ನಡೆದ ಮನೆಯೊಳಗೆ ತೆರಳಿ ಮನೆಯ ವಾತಾವರಣ ಪರಿಶೀಲನೆ ನಡೆಸಿದರು. ಇಡೀ ಮನೆಗೆ ಒಂದೇ ಕಿಟಕಿ ಇದ್ದು, ರಾತ್ರಿ ವೇಳೆ ಮನೆ ಬಾಗಿಲಿನೊಂದಿಗೆ ಕಿಟಕಿ ಬಂದ್ ಆಗಿದ್ದಕ್ಕೆ ತಡರಾತ್ರಿ ಅನಿಲ ಸೋರಿಕೆಯಿಂದಾಗಿ ಗಾಢ ನಿದ್ದೆಯಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ, ಎಂಬ ಮಾಹಿತಿಯನ್ನು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ನೀಡಿದರು.

Karnataka CM Siddaramaiah Gave Compensation To Gas Leak Victims Family

ಪರಿಹಾರದ ಹಣ ಎಲ್ಲರೂ ಹಂಚಿಕೊಳ್ಳಿ

ಮನೆಯಿಂದ ಹೊರ ಬಂದ ಬಳಿಕ ಹೊರ ಆವರಣದಲ್ಲಿದ್ದ ಕುಮಾರಸ್ವಾಮಿ ಅವರ ಪೋಷಕರಿಗೆ ಸಾಂತ್ವನ ಹೇಳಿದರು ಸಿಎಂ ಸಿದ್ದರಾಮಯ್ಯ. ಹಾಗೇ ಕುಮಾರಸ್ವಾಮಿ ಮತ್ತು ಮಂಜುಳಾ ಅವರ ಎರಡು ಕುಟುಂಬದವರು, ಸರ್ಕಾರ ಮಾನವೀಯತೆ ದೃಷ್ಟಿಯಿಂದ ನೀಡಿರುವ ಪರಿಹಾರವನ್ನು ಹಂಚಿಕೊಳ್ಳುವ ಮೂಲಕ ಮುಂದಿನ ಜೀವನಕ್ಕೆ ದಾರಿ ಮಾಡಿಕೊಳ್ಳಬೇಕು, ಎಂದು ಕಿವಿಮಾತು ಹೇಳಿದರು. ಇದೇ ವೇಳೆ ನಮಗ್ಯಾರು ದಿಕ್ಕು ಎಂದು ಕುಮಾರ ಸ್ವಾಮಿ ಅವರ ಪೋಷಕರು ಸಿಎಂ ಎದುರು ಹೇಳುತ್ತಾ ಕಣ್ಣೀರಿಟ್ಟರು. ಸಿಎಂ ಸಿದ್ದರಾಮುಯ್ಯ ಕುಟುಂಬಸ್ಥರನ್ನು ಸಂತೈಸಿದರು.

ನಿದ್ರೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ...

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಅನಿಲ ಸೋರಿಕೆಯಿಂದಾಗಿ ಕುಮಾರಸ್ವಾಮಿ ಅವರ ಇಡೀ ಕುಟುಂಬ ಸದಸ್ಯರು ಸಾವನ್ನಪ್ಪಿದ್ದು. ಗಂಡ & ಹೆಂಡತಿ ಸೇರಿದಂತೆ ಇಬ್ಬರು ಒಳಗೆ ಮಲಗಿದ್ದರು. ಇಬ್ಬರು ಮಕ್ಕಳು ಹೊರಗಡೆ ಹಾಲ್‌ನಲ್ಲಿ ಮಲಗಿದ್ದರು ಎಲ್ಲರೂ ನಿದ್ರೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

Karnataka CM Siddaramaiah Gave Compensation To Gas Leak Victims Family

12 ಲಕ್ಷ ರೂ. ಪರಿಹಾರ

ರಾಜ್ಯ ಸರ್ಕಾರ ಮಾನವೀಯತೆ ದೃಷ್ಟಿಯಿಂದ, ತಲಾ ಮೂರು ಲಕ್ಷ ರೂ. ಪರಿಹಾರದಂತೆ 12 ಲಕ್ಷ ರೂ. ಪರಿಹಾರ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಘೋಷಣೆ ಮಾಡಿದ್ದಾರೆ. ಸಚಿವರ ಮನವಿ ಹಿನ್ನೆಲೆ, ರಾಜ್ಯ ಸರ್ಕಾರ ಪರಿಹಾರ ಕೊಡಲು ಅನುಮೋದನೆ ನೀಡಿದೆ ಎಂದು ತಿಳಿಸಿದರು. ಹಾಗೇ ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ದೊರಕಲಿ. ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆ. ವೆಂಕಟೇಶ್, ಶಾಸಕ ತನ್ವೀರ್ ಸೇಠ್ & ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+