Karnataka CM List: 1947 ರಿಂದ ಇದುವರೆಗೂ ಯಾವ ಸಮುದಾಯಕ್ಕೆ ಹೆಚ್ಚಿನ ಬಾರಿ ಸಿಎಂ ಸ್ಥಾನ: ಸಂಪೂರ್ಣ ಪಟ್ಟಿ ಇಲ್ಲಿದೆ
Karnataka CM List: ಕರ್ನಾಟಕ ರಾಜ್ಯಕ್ಕೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆ ಭಾರಿ ಜೋರಾಗಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಗಾಗಿ ಭಾರಿ ಕಸರತ್ತು ಮಾಡುತ್ತಿದ್ದಾರೆ. ಈ ನಡುವೆಯೇ ನಮ್ಮ ಜಾತಿಯವರನ್ನೇ ಸಿಎಂ ಮಾಡಿ ಎಂದು ಹಲವು ಮಠಾಧೀಶರು ಕೂಡ ಒತ್ತಾಯ ಮಾಡಿದ್ದಾರೆ.
ಭಾರತದ ರಾಜಕಾರಣದಲ್ಲಿ ಜಾತಿ ಮುಖ್ಯ ಪಾತ್ರ ವಹಿಸುತ್ತದೆ ಎನ್ನುವುದು ಪ್ರಶ್ನಾತೀತ ವಿಚಾರ. ಜಾತಿ ಸಮೀಕರಣಗಳ ಮೇಲೆಯೇ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯುತ್ತದೆ. ಸಮುದಾಯಗಳ ಓಲೈಕೆಗಾಗಿ ಕೂಡ ಜಾತಿ ಲೆಕ್ಕಾಚಾರದಲ್ಲಿ ಮಂತ್ರಿ ಸ್ಥಾನಗಳ ಹಂಚಿಕೆ ನಡೆಯುತ್ತದೆ.

ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಪ್ರಾಬಲ್ಯ
ಇದುವರೆಗೂ ಕರ್ನಾಟಕ ರಾಜ್ಯದಲ್ಲಿ 30 ಬಾರಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದು, 23 ಜನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಕಾಂಗ್ರೆಸ್, ಜನತಾ ಪಕ್ಷ, ಜಾತ್ಯಾತೀತ ಜನತಾ ದಳ, ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿವೆ. ಇದರಲ್ಲಿ ಹೆಚ್ಚಿನ ಬಾರಿ ರಾಜ್ಯವನ್ನಾಳಿರುವುದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಒಟ್ಟು 14 ಬಾರಿ ಲಿಂಗಾಯತ ಸಮುದಾಯದ ವ್ಯಕ್ತಿ ಸಿಎಂ ಆಗಿ ಆಯ್ಕೆಯಾಗಿದ್ದು, 8 ಬಾರಿ ಒಕ್ಕಲಿಗ ಸಮುದಾಯದ ವ್ಯಕ್ತಿಗಳಿಗೆ ಸಿಎಂ ಗದ್ದುಗೆ ಸಿಕ್ಕಿದೆ.
ಅಕ್ಟೋಬರ್ 25, 1947ರಲ್ಲಿ ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕ್ಯಾಸಂಬಳ್ಳಿ ಚೆಂಗಲ ರಾಯರೆಡ್ಡಿ (ಕೆಸಿ ರೆಡ್ಡಿ) ಅಧಿಕಾರ ವಹಿಸಿಕೊಂಡರು. 1947 ರಿಂದ 1956 ರವರೆಗೆ ಒಕ್ಕಲಿಗರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದರು. (ಕೆಸಿ ರೆಡ್ಡಿ ಜಾತಿಯ ಬಗ್ಗೆ ಸರಿಯಾದ ಮಾಹಿತಿಗಳು ಸಿಕ್ಕಿಲ್ಲ, ಕೆಲವು ಕಡೆ ಅವರನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಎಂದು ನಮೂದಿಸಲಾಗಿದೆ)
ಮೈಸೂರು ರಾಜ್ಯಕ್ಕೆ ಲಿಂಗಾಯತರೇ ಸಿಎಂ
ಕರ್ನಾಟಕ ವಿಶಾಲ ಮೈಸೂರು ರಾಜ್ಯವಾಗಿ ರೂಪುಗೊಂಡ ನಂತರ 1956 ರಿಂದ 1971 ರವರೆಗೆ ಸತತವಾಗಿ ರಾಜ್ಯವನ್ನು ಆಳಿದ್ದು ಲಿಂಗಾಯತ ಮುಖ್ಯಮಂತ್ರಿಗಳು. ಎಸ್. ನಿಜಲಿಂಗಪ್ಪ, ಬಿಡಿ ಜತ್ತಿ, ಎಸ್‌ಆರ್ ಕಂಠಿ, ವೀರೇಂದ್ರ ಪಾಟೀಲ್ ಈ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿ ನಡೆಸಿದ್ದರು.
1973ರ ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಅರಸು (ಒಬಿಸಿ) ಸಮುದಾಯದ ಡಿ. ದೇವರಾಜ ಅರಸ್. 1972 ರಿಂದ 1980 ರವರೆಗೆ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು.
ರಾಮಕೃಷ್ಣ ಹೆಗಡೆ ಮತ್ತು ಆರ್ ಗುಂಡೂರಾವ್ ಕರ್ನಾಟಕವನ್ನು ಆಳಿದ ಬ್ರಾಹ್ಮಣ ಮುಖ್ಯಮಂತ್ರಿಗಳಾಗಿದ್ದಾರೆ. ಇನ್ನುಳಿದಂತೆ ದೇವಾಡಿಗ, ರಜಪೂತ, ಈಡಿಗ ಸಮುದಾಯದವರು ಒಂದು ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಕುರುಬ ಸಮುದಾಯದ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಇದುವರೆಗೂ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ, ಮುಸ್ಲಿಂ ಮತ್ತು ಮಹಿಳಾ ಮುಖ್ಯಮಂತ್ರಿಯನ್ನು ಕಂಡಿಲ್ಲ.
ಇದುವರೆಗೂ ಕರ್ನಾಟಕವನ್ನು ಆಳಿದ ಮುಖ್ಯಮಂತ್ರಿಗಳು ಮತ್ತು ಜಾತಿಯ ವಿವರ
Caste Wise Chief Ministers Of Karnataka. pic.twitter.com/dMeZWT19US
— Naveen Navi (@IamNavinaveen) May 17, 2023












Click it and Unblock the Notifications