ಬೆಂಗಳೂರು ಅಲರ್ಟ್... ದಿಢೀರ್ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Bengaluru Alert
ದೆಹಲಿ ಭೀಕರ ಸ್ಫೋಟದ ನಂತರ ದೊಡ್ಡ ಅವಾಂತರ ಸೃಷ್ಟಿಯಾಗಿದ್ದು, ಭಯದ ವಾತಾವರಣ ಕೂಡ ನಿರ್ಮಾಣ ಆಗಿದೆ. ಯಾವ ಕ್ಷಣದಲ್ಲಿ ಎಲ್ಲಿ ಏನಾಗುತ್ತೋ? ಅನ್ನೋ ಭಯ ಕೂಡ ಆವರಿಸಿದೆ. ಇದೇ ಸಮಯದಲ್ಲಿ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕೂಡ ಭಾರಿ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಿದ್ದಾಗಲೇ, ಬೆಂಗಳೂರು ಅಲರ್ಟ್... ದಿಢೀರ್ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಸ್ಫೋಟವು ಸಂಭವಿಸಿದ್ದು, ಈ ಸ್ಫೋಟದ ತೀವ್ರತೆ ಹಿನ್ನೆಲೆ ಭಾರಿ ದೊಡ್ಡ ಹಾನಿ ಉಂಟಾಗಿದೆ. ದಿಢೀರ್ ಕಾರಿನ ಒಳಗಡೆ ಸಂಭವಿಸಿದ ಈ ಸ್ಫೋಟದ ಪರಿಣಾಮ ಈವರೆಗೂ ಒಟ್ಟು 9 ಸಾವು, 24 ಮಂದಿಗೆ ಗಾಯವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಎಲ್ಲಾ ಕಡೆಯೂ ಹದ್ದಿನ ಕಣ್ಣು ಇಡಲಾಗಿದೆ. ಅದರಲ್ಲೂ ಕನ್ನಡ ನಾಡಿನ ಬೆಂಗಳೂರು ಮಹಾನಗರದಲ್ಲಿ ಕೂಡ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಎಲ್ಲೆಲ್ಲೂ ಬಿಗಿ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ. ಇಂತಹ ಸಮಯದಲ್ಲೇ, ಬೆಂಗಳೂರು ಅಲರ್ಟ್... ದಿಢೀರ್ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...??

ದಿಢೀರ್ ಶಾಲಾ & ಕಾಲೇಜುಗಳಿಗೆ...
ಅಂದಹಾಗೆ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಇದೀಗ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಇಂತಹ ಸಮಯದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿರುವ ಕಾರಣಕ್ಕೆ ಶಾಲೆಗಳಲ್ಲಿ ಕೂಡ ಮುನ್ನೆಚ್ಚರಿಕೆ ಕ್ರಮವನ್ನ ಕೂಡ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ಕಳೆದ ಕೆಲವು ತಿಂಗಳ ಹಿಂದೆ ಹುಸಿ ಬಾಂಬ್ ಕರೆಯ ಕಾಟ ಜಾಸ್ತಿ ಆಗಿತ್ತು. ಪೊಲೀಸರು ಹೀಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಗಳಿಗೆ ಕಾನೂನಿನ ಪಾಠ ಮಾಡಿದ್ದಾರೆ. ಇಂತಹ ಸಮಯದಲ್ಲೇ ದೆಹಲಿ ಬ್ಲಾಸ್ಟ್ ಸಂಚಲನ ಸೃಷ್ಟಿ ಮಾಡಿದೆ...
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ?
ಈಗಿರುವ ಪರಿಸ್ಥಿತಿ ನೋಡಿದರೆ ಸದ್ಯಕ್ಕೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಲಾಗಿದೆ. ಆದರೆ ಕೆಲವರು ಇದೇ ವಿಚಾರವನ್ನು ಹಿಡಿದು ಸೋಷಿಯಲ್ ಮೀಡಿಯಾಗಳಲ್ಲಿ, ಬೆಂಗಳೂರು ಅಲರ್ಟ್... ದಿಢೀರ್ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...?? ಎಂಬ ಸುದ್ದಿಯನ್ನ ಹಬ್ಬಿಸುತ್ತಿದ್ದಾರೆ. ಆದರೆ ಇದು ಗಾಳಿ ಸುದ್ದಿ. ಹೀಗಿದ್ದಾಗ ಮತ್ತೊಂದು ಕಡೆ ದೆಹಲಿಯಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣ ಕ್ಷಣ ಕ್ಷಣಕ್ಕೂ ಒಂದು ತಿರುವು ಪಡೆಯುತ್ತಾ ಇರುವುದು ಆತಂಕ ಹೆಚ್ಚು ಮಾಡಿದೆ. ದೆಹಲಿ ನಗರದಲ್ಲಿ ಕೂಡ ಹಿಂದೆ ಹಲವಾರು ಬಾರಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದರು ಕಿರಾತಕರು. ಹೀಗಿದ್ದಾಗಲೇ ಸದ್ಯ ದೆಹಲಿ ಶಾಲಾ & ಕಾಲೇಜುಗಳಲ್ಲೂ ಹೈಅಲರ್ಟ್ ಘೋಷಿಸಲಾಗಿದೆ.












Click it and Unblock the Notifications