ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸಚಿವರಿಗೆ ಜವಾಬ್ದಾರಿ: ಯಾರಿಗೆ ಯಾವ ಖಾತೆ?

By Madhusoodhan
|
Google Oneindia Kannada News

ಬೆಂಗಳೂರು, ಜೂನ್, 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಸಂಪುಟಕ್ಕೆ ಸೇರಿಸಿಕೊಂಡ 13 ಸಚಿವರಿಗೆ ಖಾತೆ ಹಂಚಿಕೆಯಾಗಿದೆ.

ಇನ್ನೊಂದು ಕಡೆ ಸಚಿವ ಸ್ಥಾನ ಕಳೆದುಕೊಂಡವರು ಮತ್ತು ಸ್ಥಾನ ವಂಚಿತರಾದವರ ಅಸಮಾಧಾನದ ಹೊಗೆ ಹೆಚ್ಚಾಗುತ್ತಿದೆ. 13 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ಹಣಕಾಸು, ವಸತಿ, ವಾರ್ತಾ ಇಲಾಖೆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. [ಇಬ್ಬರು ಅತೃಪ್ತರನ್ನು ಸೆಳೆಯಲು ಬಿಜೆಪಿ, ಜೆಡಿಎಸ್ ನಾಮುಂದು ತಾಮುಂದು]

karnataka

ಯುಟಿ ಖಾದರ್ ಮತ್ತು ರೋಶನ್ ಬೇಗ್ ಖಾತೆ ಬದಲಾವಣೆ ಮಾಡಲಾಗಿದೆ. ಸಿಎಂ ಕಳಿಸಿದ್ದ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.[ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]

ಸಂಪುಟ ದರ್ಜೆ ಸಚಿವರು
1. ಸಿದ್ದರಾಮಯ್ಯ: ಹಣಕಾಸು, ವಾರ್ತಾ, ಗುಪ್ತದಳ, ಗಣಿ, ಮುಜರಾಯಿ, ಬೆಂಗಳೂರು ನಗರಾಭಿವೃದ್ಧಿ
2. ಡಾ. ಜಿ ಪರಮೇಶ್ವರ: ಗೃಹ ಖಾತೆ
3. ಕಾಗೋಡು ತಿಮ್ಮಪ್ಪ: ಕಂದಾಯ
4. ಆರ್ ವಿ ದೇಶಪಾಂಡೆ: ಬೃಹತ್ ಕೈಗಾರಿಕೆ ಮತ್ತು ಮೂಲ ಸೌಕರ್ಯ
5. ಟಿ ಬಿ ಜಯಚಂದ್ರ: ಕಾನೂನು, ಸಂಸದೀಯ ಮತ್ತು ಸಣ್ಣ ನೀರಾವರಿ
6. ರಮೇಶ್ ಕುಮಾರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
7. ಎಂ ಬಿ ಪಾಟೀಲ್: ಜಲಸಂಪನ್ಮೂಲ
8. ಡಿ. ಕೆ. ಶಿವಕುಮಾರ್: ಇಂಧನ
9. ಎಚ್ ಆಂಜನೇಯ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ
10. ಡಾ. ಎಚ್ ಸಿ ಮಹದೇವಪ್ಪ: ಲೋಕೋಪಯೋಗಿ
11. ಎಚ್ ಎಸ್ ಮಹದೇವಪ್ರಸಾದ್: ಸಹಕಾರ ಮತ್ತು ಸಕ್ಕರೆ
12. ಎಚ್ ಕೆ ಪಾಟೀಲ್: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
13. ಎಂ ಕೃಷ್ಣಪ್ಪ: ವಸತಿ
14. ರಮಾನಾಥ ರೈ: ಅರಣ್ಯ
15. ಡಾ. ಶರಣಪ್ರಕಾಶ್ ಪಾಟೀಲ್: ವೈದ್ಯಕೀಯ ಶಿಕ್ಷಣ
16. ಕೃಷ್ಣಭೈರೇಗೌಡ: ಕೃಷಿ
17. ರೋಶನ್ ಬೇಗ್: ನಗರಾಭಿವೃದ್ಧಿ ಮತ್ತು ಹಜ್
18. ರಾಮಲಿಂಗಾರೆಡ್ಡಿ: ಸಾರಿಗೆ
19. ಉಮಾಶ್ರೀ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
20. ಯು ಟಿ ಖಾದರ್: ಆಹಾರ ಮತ್ತು ನಾಗರಿಕ ಸರಬರಾಜು
21. ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ
22. ಸಂತೋಷ್ ಲಾಡ್: ಕಾರ್ಮಿಕ
23. ಎಚ್. ಎಸ್. ಮಲ್ಲಿಕಾರ್ಜುನ: ತೋಟಗಾರಿಕೆ ಮತ್ತು ಎಪಿಎಂಸಿ
24. ಎಂ ಆರ್ ಸೀತಾರಾಮ್: ಯೋಜನೆ, ಸಾಂಖಿಕ, ವಿಜ್ಞಾನ ಮತ್ತು ತಂತ್ರಜ್ಞಾನ
25. ಎಚ್ ವೈ ಮೇಠಿ: ಅಬಕಾರಿ
26. ರಮೇಶ್ ಜಾರಕಿಹೊಳಿ: ಸಣ್ಣ ಕೈಗಾರಿಕೆ
27. ತನ್ವೀರ್ ಸೇಠ್: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
28. ಎ ಮಂಜು: ರೇಷ್ಮೆ ಮತ್ತು ಪಶುಸಂಗೋಪನೆ
29. ವಿನಯ್ ಕುಲಕರ್ಣಿ: ಗಣಿ ಮತ್ತು ಭೂ ವಿಜ್ಞಾನ

ರಾಜ್ಯ ಸಚಿವರು
1. ಈಶ್ವರ್ ಖಂಡ್ರೆ: ಪೌರಾಡಳಿತ
2. ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಯುವಜನ ಮತ್ತು ಕ್ರೀಡೆ
3. ರುದ್ರಪ್ಪ ಲಮಾಣಿ: ಜವಳಿ ಮತ್ತು ಮುಜರಾಯಿ
4. ಪ್ರಿಯಾಂಕ ಖರ್ಗೆ: ಪ್ರವಾಸೋದ್ಯಮ ಮತ್ತು ಐಟಿ , ಬಿಟಿ

English summary
Bengaluru: Finally Karnataka Chief Minister Siddaramaiah gave the responsibility to 13 new ministers on June 21 evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X