ಮತ್ತೆ ಶುರುವಾಯ್ತು ರಾಜ್ಯ ಸಂಪುಟ ವಿಸ್ತರಣೆ ಸರ್ಕಸ್
ಬೆಂಗಳೂರು, ಅಕ್ಟೋಬರ್. 24: ಮತ್ತೆ ಸಂಪುಟ ಪುನಾರಚನೆ ಮತ್ತು ವಿಸ್ತರಣೆ ಸರ್ಕಸ್ ಆರಂಭವಾಗಿದೆ. ಹೈಕಮಾಂಡ್ ಬಳಿಗೆ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ತೆರಳಲಿದ್ದರೆ. ಭಾನುವಾರ ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಲಿದ್ದಾರೆ.
ಬಿಬಿಎಂಪಿ ಚುನಾವಣೆ ನಂತರ ಸಂಪುಟ ಪುನಾರಚನೆ ಆಗುತ್ತದೆ ಎಂಬ ನಿರೀಕ್ಷೆ ಇದ್ದರೂ ತಿಂಗಳು ಕಾಲ ತಡವಾಗಿದೆ. ಆದರೆ ಈ ಬಾರಿ ಬದಲಾವಣೆ ಖಚಿತ ಎಂದು ಹೇಳಲಾಗುತ್ತಿದೆ.[ಇದು ಮೊದಲನೇ ಸಾರಿ ಏನೂ ಅಲ್ಲ]

ಸಚಿವರ ಪ್ರಗತಿಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಕೆಲ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದ್ದು ಹೊಸ ಮುಖಗಳಿಗೆ ಅವಕಾಶ ಒದಗಿಬರಬಹುದು.
ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಗಮನಾರ್ಹ ಬದಲಾವಣೆ ನೀರಿಕ್ಷೆ ಮಾಡಲಾಗಿದ್ದು, ಪರಮೇಶ್ವರ ಮತ್ತು ಸಿದ್ದರಾಮಯ್ಯ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್ ಅವರನ್ನು ಭೆಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ನ ಪ್ರಭಾವಿ ಶಾಸಕರು ಹೆಹಲಿಗೆ ಭೇಟಿ ನೀಡಿ ಬಂದಿದ್ದರು.












Click it and Unblock the Notifications