ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸಚಿವರು : ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗರಿಗೆ ಸಿಂಹಪಾಲು

By Mahesh
|
Google Oneindia Kannada News

ಬೆಂಗಳೂರು, ಜೂನ್ 06: ಜಾತ್ಯಾತೀತ ಜನತಾ ದಳ (ಜೆಡಿಎಸ್) ಪ್ಲಸ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್ ಸಿ) ಪಕ್ಷಗಳ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವಾರಗಳ ನಂತರ ಮೊದಲ ಬಾರಿಗೆ ಸಂಪುಟ ವಿಸ್ತರಣೆಯ ಶಾಸ್ತ್ರ ಮುಗಿದಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸಂಪುಟದಲ್ಲಿ ಒಕ್ಕಲಿಗರಿಗೆ ಸಿಂಹಪಾಲು ಸಿಕ್ಕಿದೆ.

ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಸಿಎಂ ಸೋದರ ಎಚ್ ಡಿ ರೇವಣ್ಣ ಅವರು ಕನ್ಯಾ ಲಗ್ನದಲ್ಲಿ ಪ್ರಮಾಣ ವಚನದಲ್ಲಿ ಸ್ವೀಕಾರ ಸಮಾರಂಭ ನಡೆಯುವಂತೆ ನೋಡಿಕೊಂಡು ಗೆದ್ದಿದ್ದಾರೆ. ಮೈತ್ರಿ ಸರ್ಕಾರ ಆರಂಭವಾದ ಬಳಿಕ ಕಾಂಗ್ರೆಸ್ಸಿನಿಂದ ಡಿಸಿಎಂ ಆಗಿರುವ ಜಿ ಪರಮೇಶ್ವರ ಅವರು ಕೂಡಾ ಜಿದ್ದಿಗೆ ಬಿದ್ದವರಂತೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಹೋಮ ಹವನ ಜೋರಾಗಿ ಮಾಡಿಬಿಟ್ಟರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರ ಪಟ್ಟಿಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರ ಪಟ್ಟಿ

ಆಚಾರ ವಿಚಾರ ವೈಯಕ್ತಿಕ ವಿಚಾರವಾದರೂ ಸಂಪುಟ ರಚನೆ ಹಾಗೂ ವಿಸ್ತರಣೆ ಸಂದರ್ಭದಲ್ಲಿ ಜಾತಿ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆದಿದೆ. ದಲಿತ, ದಮನಿತ, ಶೋಷಿತ, ಎಡಗೈ, ಬಲಗೈ, ಮೇಲ್ವರ್ಗ, ಕೆಳವರ್ಗ ಹೀಗೆ ಎಲ್ಲವೂ ಚರ್ಚಿತವಾಗಿದೆ.

Karnataka Cabinet expansion 2018 : Caste wise list of ministers Vokkaligas lionshare

ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆಯಲ್ಲಿ ಒಕ್ಕಲಿಗರಿಗೆ ಹೆಚ್ಚಿನ ಪ್ರಾತಿನಿಧ್ಯ, ತಮ್ಮ ಕುಟುಂಬ ವರ್ಗ, ತಮ್ಮ ಜಿಲ್ಲೆಗೆ ಹೆಚ್ಚಿನ ಬಲ ನೀಡುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಎರಡನೇ ಹಂತದ ಸಂಪುಟ ವಿಸ್ತರಣೆ ಮಾಡಲು ಮುಹೂರ್ತ ಇನ್ನೂ ನಿಗದಿಯಾಗಿಲ್ಲ. ಸದ್ಯ ಜೆಡಿಎಸ್ 1, ಕಾಂಗ್ರೆಸ್ 6 ಸ್ಥಾನಗಳನ್ನು ತುಂಬಬಹುದಾಗಿದೆ.

ಶಾಸಕರಾಗುವ ತನಕ ಜನಪ್ರತಿನಿಧಿಗಳಿಗೆ ಮೀಸಲಾತಿ ಅನ್ವಯವಾಗುತ್ತದೆ. ಶಾಸಕರು ಸಚಿವರಾಗಿ ಸಂಪುಟ ಸೇರುವುದಕ್ಕೆ ಯಾವುದೇ ಮೀಸಲಾತಿ ಇರುವುದಿಲ್ಲ. ಅದರಲ್ಲೂ ಮೈತ್ರಿ ಸರ್ಕಾರ ರಚನೆಯಾದರೆ, ಜಾತಿ ಲೆಕ್ಕಾಚಾರದಲ್ಲಿ ಅನೇಕ ವ್ಯತ್ಯಯಗಳಾಗುವುದು ಸಾಮಾನ್ಯ.

ಜೆಡಿಎಸ್‌ನಲ್ಲಿ ಸಚಿವ ಸ್ಥಾನ ತಪ್ಪಿಸಿಕೊಂಡ ಪ್ರಮುಖ ನಾಯಕರು!ಜೆಡಿಎಸ್‌ನಲ್ಲಿ ಸಚಿವ ಸ್ಥಾನ ತಪ್ಪಿಸಿಕೊಂಡ ಪ್ರಮುಖ ನಾಯಕರು!

ಸಂಪುಟ ವಿಸ್ತರಣೆಯ ಅಚ್ಚರಿಗಳು

ಜೆಡಿಎಸ್ ನಿಂದ ಎಂಎಲ್ಸಿಗಳಿಗೆ ಸಚಿವರಾಗುವ ಭಾಗ್ಯ ಸಿಗಲಿಲ್ಲ. ಕಾಂಗ್ರೆಸ್ಸಿನಿಂದ ಎಂಎಲ್ಸಿ ಡಾ. ಜಯಮಾಲಾ ಅವರ ಸಚಿವ ಸ್ಥಾನಗಳಿಸಿದರು. ಮಿಕ್ಕಂತೆ ಜೆಡಿಎಸ್‌ ನಿಂದ ಡಿಸಿ ತಮ್ಮಣ್ಣ ಹಾಗೂ ಸಿಎಸ್‌ ಮನಗೂಳಿ ಹೆಸರು ಕೊನೆ ಕ್ಷಣದಲ್ಲಿ ಸೇರ್ಪಡೆಗೊಂಡು ಅಚ್ಚರಿ ಮೂಡಿಸಿತು.

Caste wise list of ministers Vokkaligas Lion share

ಲಿಂಗಾಯತರಿಗೆ ನಾಲ್ಕು, ಕುರುಬರಿಗೆ ಎರಡು, ಉಪ್ಪಾರ, ಈಡಿಗ, ಪರಿಶಿಷ್ಟ ಪಂಗಡ ತಲಾ ಒಂದು, ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತರಿಗೆ ತಲಾ ಮೂರು, ಬ್ರಾಹ್ಮಣ ಒಂದು, ಒಕ್ಕಲಿಗರಿಗೆ ಒಂಭತ್ತು ಸಚಿವ ಸ್ಥಾನ ನೀಡಲಾಗಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್ಸಿನಿಂದ ಜೂನ್ 06, 2018ರಂದು ನೂತನ ಪ್ರಮಾಣ ವಚನ ಸ್ವೀಕರಿಸಿದ ಸಚಿವರುಗಳು ಅವರ ಜಾತಿವಾರು ಪಟ್ಟಿ ಇಲ್ಲಿದೆ: ಜೆಡಿಎಸ್-ಒಕ್ಕಲಿಗ: 06, ಕುರುಬ: 1, ಲಿಂಗಾಯತ: 02, ದಲಿತ: 01.

ಕ್ರಮಸಂಖ್ಯೆ ಸಚಿವರು ಜಾತಿ
01 ಎಚ್ ಡಿ ರೇವಣ್ಣ ಒಕ್ಕಲಿಗ
02 ಬಂಡೆಪ್ಪ ಕಾಶೆಂಪೂರ ಕುರುಬ
03 ಜಿ.ಟಿ ದೇವೇಗೌಡ ಒಕ್ಕಲಿಗ
04 ಡಿ.ಸಿ ತಮ್ಮಣ್ಣ ಒಕ್ಕಲಿಗ
05 ಎಂ. ಸಿ ಮನಗೂಳಿ ಲಿಂಗಾಯತ
06 ಎಸ್ ಆರ್ ಶ್ರೀನಿವಾಸ್ ಒಕ್ಕಲಿಗ
07 ವೆಂಕಟರಾವ್ ನಾಡಗೌಡ ಲಿಂಗಾಯತ
08 ಸಿಎಸ್ ಪುಟ್ಟರಾಜು ಒಕ್ಕಲಿಗ
09 ಸಾ.ರ ಮಹೇಶ್ ಒಕ್ಕಲಿಗ
10 ಎನ್ ಮಹೇಶ್ ದಲಿತ

ಕಾಂಗ್ರೆಸ್ಸಿನಲ್ಲಿ- ಒಕ್ಕಲಿಗ: 02, ರೆಡ್ಡಿ ಒಕ್ಕಲಿಗ 01, ಕುರುಬ : 01, ಲಿಂಗಾಯತ : 02, ಎಸ್ ಸಿ 02, ಮುಸ್ಲಿಂ 02, ಕ್ರೈಸ್ತ 01, ಎಸ್ ಟಿ 01, ಬ್ರಾಹ್ಮಣ 01, ಉಪ್ಪಾರ 01, ಈಡಿಗ 01

ಕ್ರಮಸಂಖ್ಯೆ ಸಚಿವರು ಜಾತಿ
01 ಅರ್ ವಿ ದೇಶಪಾಂಡೆ ಬ್ರಾಹ್ಮಣ
02 ಡಿ.ಕೆ ಶಿವಕುಮಾರ್ ಒಕ್ಕಲಿಗ
03 ಕೆ. ಜೆ ಜಾರ್ಜ್ ಕ್ರೈಸ್ತ
04 ಕೃಷ್ಣಬೈರೇಗೌಡ ಒಕ್ಕಲಿಗ
05 ಶಿವಶಂಕರ ರೆಡ್ಡಿ ರೆಡ್ಡಿ ಒಕ್ಕಲಿಗ
06 ರಮೇಶ್ ಜಾರಕಿಹೊಳಿ ಎಸ್ ಟಿ
07 ಪ್ರಿಯಾಂಕ್ ಖರ್ಗೆ ಎಸ್ ಸಿ
08 ಯು.ಟಿ ಅಬ್ದುಲ್ ಖಾದರ್ ಮುಸ್ಲಿಂ
09 ಜಮೀರ್ ಅಹ್ಮದ್ ಖಾನ್ ಮುಸ್ಲಿಂ
10 ಶಿವಾನಂದ ಪಾಟೀಲ್ ಲಿಂಗಾಯತ
11 ವೆಂಕಟರಮಣಪ್ಪ ಎಸ್ ಸಿ (ಭೋವಿ)
12 ರಾಜಶೇಖರ ಪಾಟೀಲ ಲಿಂಗಾಯತ
13 ಸಿ ಪುಟ್ಟರಂಗಶೆಟ್ಟಿ ಉಪ್ಪಾರ
14 ಆರ್ ಶಂಕರ್ ಕುರುಬ
15 ಡಾ. ಜಯಮಾಲಾ ರಾಮಚಂದ್ರ ಈಡಿಗ
English summary
Karnataka Cabinet expansion 2018 Caste wise list : Chief minister HD Kumaraswamy today(June 6) expanded Congress-JDS coalition government cabinet. Vokkaligas got Lion share in the list of ministers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X