62.50% ಮತದಾನ ದಾಖಲು, ಚಿಕ್ಕಬಳ್ಳಾಪುರದಲ್ಲಿ ಹೆಚ್ಚು, ಕೆ.ಆರ್.ಪುರದಲ್ಲಿ ಕಡಿಮೆ
ಬೆಂಗಳೂರು, ಡಿಸೆಂಬರ್ 5: ಬಹುನಿರೀಕ್ಷಿತ ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸದರಿ ಕ್ಷೇತ್ರಗಳಲ್ಲಿ ಮತದಾರರು ಉಮೇದುವಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಿದ್ದಾರೆ.
ಚಿತ್ರಗಳು: ಹದಿನೈದು ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಮತದಾನ
15 ಕ್ಷೇತ್ರಗಳ ಪೈಕಿ ರಾಣೆಬೆನ್ನೂರಿನ ಆರ್. ಶಂಕರ್ ಹಾಗೂ ಶಿವಾಜಿ ನಗರ ಕ್ಷೇತ್ರದ ರೋಷನ್ ಬೇಗ್ ಹೊರತುಪಡಿಸಿ ಉಳಿದ ಎಲ್ಲ 13 ಅನರ್ಹರು ಸ್ಪರ್ಧೆಯಲ್ಲಿದ್ದಾರೆ. ಈ ಕ್ಷೇತ್ರಗಳ ಅಂತಿಮ ಫಲಿತಾಂಶ ಹಾಲಿ ಬಿಜೆಪಿ ಸರಕಾರದ ಅಳಿವು ಉಳಿವಿನ ಮೇಲೆ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆ ರಾಷ್ಟ್ರದ ಗಮನ ಸೆಳೆದಿದೆ.
ಯಾವ ಕ್ಷೇತ್ರಗಳಲ್ಲಿ ಮತದಾನ?:
ಹಿರೇಕೆರೂರು, ಯಲ್ಲಾಪುರ, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು, ಮಹಾಲಕ್ಷ್ಮೀ ಲೇಔಟ್, ಗೋಕಾಕ್, ಕಾಗವಾಡ, ಅಥಣಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

'ಆಪರೇಷನ್ ಕಮಲ' ಎಂಬ ಕುಖ್ಯಾತ ರಾಜಕೀಯ ಅಸ್ತ್ರ ಪ್ರಯೋಗಿಸಿ ನಮ್ಮ ಸರ್ಕಾರ ಉರುಳಿಸಿದ್ದಾರೆ- ಅವರಿಗೆ ಒಂದು ಕ್ಷೇತ್ರವನ್ನೂ ಗೆಲ್ಲಲು ಬಿಡಬಾರದು- ಎನ್ನುವ ಆಕ್ರೋಶದಲ್ಲಿ ಕಾಂಗ್ರೆಸ್ ಇದ್ದರೆ, ಆಡಿಕೊಳ್ಳುವವರ ಮುಂದೆ ಎಡವಬಾರದು ಎನ್ನುವ ಪರಿಸ್ಥಿತಿ ಬಿಜೆಪಿಯದ್ದಾಗಿದೆ. ಇವೆರೆಡು ಪಕ್ಷಗಳ ನಡುವೆ ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ ಮುಂದೆ ನಿಂತಿದೆ.
ಬಿಜೆಪಿಯದ್ದು 15ಕ್ಕೆ 15 ಕ್ಷೇತ್ರಗಳ ಗೆಲ್ಲುವ ಭರವಸೆ, ಕಾಂಗ್ರೆಸ್‌ನದ್ದು ಈ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸುವ ನಂಬಿಕೆ. ಅಂತಿಮ ಫಲಿತಾಂಶಕ್ಕಾಗಿ ಡಿ. 9ರವರೆಗೆ ಕಾಯಲೇಬೇಕಿದೆ.

ಬಾಯಿಗೆ ಬಂದ ಹೇಳಿಕೆ ನೀಡುವ ರೇವಣ್ಣ ಮಾತಿಗೆ ಮಹತ್ವ ಕೊಡಲಾಗದು
ಫಲಿತಾಂಶಕ್ಕೂ ಮುನ್ನ ಧರ್ಮಸ್ಥಳಕ್ಕೆ ತೆರಳಲಿರುವ ಯಡಿಯೂರಪ್ಪ
ಗೋಕಾಕ್‌ನಲ್ಲಿ ಗೆದ್ದು ಕಾಂಗ್ರೆಸ್‌ಗೆ ಉಡುಗೊರೆ ಕೊಡುತ್ತೇವೆ
ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ
ಗೋಕಾಕ್ ಜನ ರಮೇಶ್ ಪರವಿದ್ದಾರೆ
ಗಿರಿಜನ ನಾಗಾಪುರ ಹಾಡಿಯಲ್ಲಿ ನೀರಸ ಮತದಾನ
ಮತ ಎಣಿಕೆ ಕೇಂದ್ರಗಳ ನಿಷೇಧಾಜ್ಞೆ
ಮಧ್ಯಾಹ್ನ 3 ಗಂಟೆವರೆಗೆ ಕರ್ನಾಟಕದಲ್ಲಿ ಶೇ.40.34ರಷ್ಟು ಮತದಾನ
ಕೆಆರ್ ಪೇಟೆ: 106 ವರ್ಷದ ವೃದ್ಧೆಯಿಂದ ಮತದಾನ
ರಾಜ್ಯದಲ್ಲಿ ಸಿಎಂ ಹದ್ದೆ ಖಾಲಿ ಇಲ್ಲ
ನಿರೀಕ್ಷೆಗಿಂತ ದೊಡ್ಡ ಜಯ ಸಿಗಲಿದೆ-ಶಿವರಾಮ್ ಹೆಬ್ಬಾರ್

ಹುಣಸೂರು: ಶಾಸಕರ ಧರಣಿ ಅಂತ್ಯ
ನಮಗೊಂದು ಹೈಕಮಾಂಡ್ ಇದೆ
ರಮೇಶ್ ಜಾರಕಿಹೊಳಿ ಗಂಭೀರವಾಗಿ ಮಾತನಾಡುವುದು ಕಲಿಯಲಿ
ಟೂ ವ್ಹೀಲರ್‌ನಲ್ಲಿ ಬಂದು ಅಜ್ಜಿ ಮತದಾನ
ಟೂ ವ್ಹೀಲರ್ ನಲ್ಲಿ ಮಗನ ಜೊತೆ ಬಂದು ಮತದಾನ ಮಾಡಿದ 97 ವಯಸ್ಸಿನ ಅಜ್ಜಿ
— Oneindia Kannada (@OneindiaKannada) December 5, 2019
ಎಲ್ಲ ಬರ್ರವ್ವ ಮತದಾನ ಮಾಡ್ರಿ ಮನೆಯಲ್ಲಿ ಮಲಗಬೇಡಿ..ಅಂತಾ ಸಂದೇಶ ಕೊಟ್ಟ ಅಜ್ಜಿ
ಮಹಾಲಕ್ಷ್ಮಿ ಲೇಔಟ್ ನಲ್ಲಿ ಮತದಾನ ಮಾಡಿದ ಅಜ್ಜಿ#Karnatakabypolls | #KarnatakaElection | #KarnatakaByelection | #byelections2019 pic.twitter.com/TtWCLzgV1Y
ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಮತದಾನ

ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಮತದಾನ
ಮತಗಟ್ಟೆಯಲ್ಲೇ ಸಾವು
ಇಲ್ಲಿಯವರೆಗೆ ಕ್ಷೇತ್ರವಾರು ಮತದಾನ
ನಟ ಶ್ರೀಮರಳಿ ಮತದಾನ













Click it and Unblock the Notifications