Karnataka Budget 2023; ಕಿವಿಯಲ್ಲಿ ಹೂವಿಟ್ಟುಕೊಂಡು ಬಂದ ಸಿದ್ದರಾಮಯ್ಯ; ಕಿವಿಯ ಮೇಲೆ ಹೂವು ಇಟ್ಟವರು ಯಾರು.?
ಬಿಜೆಪಿ ಸರ್ಕಾರದವರು ಇಡೀ ರಾಜ್ಯದ ಏಳು ಕೋಟಿ ಜನರ ಕಿವಿಗಳ ಮೇಲೆ ಹೂವು ಇರಿಸಿದ್ದಾರೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ಸಿದ್ದರಮಯ್ಯ ಕಿಡಿಕಾರಿದರು
ಬೆಂಗಳೂರು,ಫೆಬ್ರವರಿ17: 2023-2024 ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನ ಬಸವರಾಜ ಬೊಮ್ಮಾಯಿ ಅವರು ಆರಂಭಿಸುತ್ತಿದ್ದಂತೆಯೇ ಸದನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಗದ್ದಲ ಏರ್ಪಟಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿವಿಯಲ್ಲಿ ಹೂವಿಟ್ಟು ಕೊಂಡು ಬಂದಿದ್ದು, ಮುಖ್ಯಮಂತ್ರಿ ಬಸವರಾಜ ಸ್ವಾರಸ್ಯಕರ ಚರ್ಚೆ ನಡೆಯಿತು.
ಕಿವಿ ಮೇಲೆ ಹಾಕಿ ಹೂವು ಇರಿಸಿಕೊಂಡು ಬಂದಿರುವುದು ಸರಿ ಆಗುವುದಿಲ್ಲ ಎಂಬುದು ನನ್ನ ಭಾವನೆ ಇಷ್ಟು ದಿನ ಜನರು ಕಿವಿಯ ಮೇಲೆ ಹೂವು ಇಟ್ಟಿದ್ರು, ಈಗ ಜನರು ಅವರ ಕಿವಿಯಲ್ಲಿ ಹೂವು ಇಟ್ಟಿದ್ದಾರೆ, ಮುಂದಿನ ಬಾರಿಯೂ ಕಿವಿಯ ಮೇಲೆ ಹೂವು ಇಡುತ್ತಾರೆ ಪರಿಸ್ಥಿತಿ ಬರುತ್ತದೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಇದರಿಂದ ಆಕ್ರೋಶಗೊಂಡು ಎದ್ದು ನಿಂತ ಸಿದ್ದರಾಮಯ್ಯ, ನಾವು ನಮ್ಮ ಕಿವಿ ಮೇಲೆ ಮಾತ್ರ ಹೂವು ಇರಿಸಿಕೊಂಡಿದ್ದೇವೆ. ಬಿಜೆಪಿ ಸರ್ಕಾರದವರು ಇಡೀ ರಾಜ್ಯದ ಏಳು ಕೋಟಿ ಜನರ ಕಿವಿಗಳ ಮೇಲೆ ಹೂವು ಇರಿಸಿದ್ದಾರೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ಸಿದ್ದರಮಯ್ಯ ಕಿಡಿಕಾರಿದರು.

ಈ ವೇಳೆ ಸದನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬಜೆಟ್ ಮಂಡನೆಗೆ ಅವಕಾಶ ನೀಡಿ ಮೊದಲು ಎಂದು ಸ್ಪೀಕರ್ ಕಾಗೇರಿ ಮನವಿ ಮಾಡಿದರು. ಕೇಸರಿ ನಮ್ಮದು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಅವರು ಕೇಸರಿ ಹೂವು ಇಟ್ಟುಕೊಂಡು ಬಂದಿದ್ದಾರೆ ಎಂದು ಕಾಗೇರಿ ಚಟಾಕಿ ಹಾರಿಸಿದರು.












Click it and Unblock the Notifications