Karnataka Budget 2023: ಡಿಎಂಕೆ ಜಾರಿಗೆ ತಂದ ಯೋಜನೆ, ಕರ್ನಾಟಕದಲ್ಲೂ

ಹಲವು ಜನಪ್ರಿಯ ಘೋಷಣೆಗಳ ಜೊತೆಗೆ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಮುಖ್ಯಮಂತ್ರಿಗಳು ಘೋಷಣೆಯನ್ನು ಮಾಡಿದ್ದಾರೆ.

ಬೆಂಗಳೂರು, ಫೆ 17: ಚುನಾವಣಾ ವರ್ಷವಾಗಿರುವುದರಿಂದ ನಿರೀಕ್ಷೆಯಂತೆ ಭರಪೂರ ಘೋಷಣೆಯನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಮಂಡಿಸಿದ್ದಾರೆ.

ಹಲವು ಜನಪ್ರಿಯ ಘೋಷಣೆಗಳ ಜೊತೆಗೆ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಮುಖ್ಯಮಂತ್ರಿಗಳು ಘೋಷಣೆಯನ್ನು ಮಾಡಿದ್ದಾರೆ.

ಒಟ್ಟು 30 ಲಕ್ಷ ಮಹಿಳೆಯರಿಗೆ ಅನುಕೂಲವಾಗುವ ಈ ಯೋಜನೆಗೆ 1,000 ಕೋಟಿ ರೂಪಾಯಿಯನ್ನು ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Karnataka Budget 2023: Free Bus Pass For Working Class Women, Similar To DKM Manifesto

ಇಂತದ್ದೇ ಯೋಜನೆಯನ್ನು ತಮಿಳುನಾಡಿನ ಡಿಎಂಕೆ ಸರಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿ ಅದನ್ನು ಜಾರಿಗೆ ತಂದಿದ್ದು. ಆದರೆ, ಅಲ್ಲಿನ ಯೋಜನೆಗೂ ಇಲ್ಲಿನ ಯೋಜನೆಗೂ ಇರುವ ವ್ಯತ್ಯಾಸ ಏನಂದರೆ, ತಮಿಳುನಾಡು ಸರಕಾರ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿತ್ತು.

ಆದರೆ, ಕರ್ನಾಟಕದಲ್ಲಿ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾತ್ರ ಈ ಯೋಜನೆಯನ್ನು ಜಾರಿಗೆ ತರಲು ಬೊಮ್ಮಾಯಿ ಸರಕಾರ ನಿರ್ಧರಿಸಿದೆ.

ಝೀರೋ ಟಿಕೆಟ್ ಬಸ್ ಟ್ರಾವೆಲ್ (ZTBT) ಸ್ಕೀಂ ಅನ್ನು ಸ್ಟಾಲಿನ್ ಸರಕಾರ ತಮಿಳುನಾಡಿನಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಜಾರಿಗೆ ತಂದಿತ್ತು. ಈ ಯೋಜನೆಯಿಂದ ಮಹಿಳೆಯರು ಬಸ್ ಶುಲ್ಕಕ್ಕಾಗಿ ಇನ್ನೊಬ್ಬರಿಗೆ ಅವಲಂಬಿತವಾಗುವುದು ತಪ್ಪುತ್ತದೆ ಎಂದು ತಮಿಳುನಾಡು ಯೋಜನಾ ಆಯೋಗ ವರದಿಯನ್ನು ಸರಕಾರಕ್ಕೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+