ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Karnataka Budget 2020 Live Updates: ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾರಣ ತಿಳಿಸಿದ ಸಿಎಂ

|
Google Oneindia Kannada News

ಬೆಂಗಳೂರು, ಮಾರ್ಚ್.05: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಮಾರ್ಚ್.05ರ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಿದರು. ರಾಜ್ಯ ಬಜೆಟ್-2020ರ ಕ್ಷಣಕ್ಷಣದ ಮಾಹಿತಿಯನ್ನು 'ಒನ್ ಇಂಡಿಯಾ' ನಿಮ್ಮ ಮುಂದೆ ಇಟ್ಟಿದೆ.

Recommended Video

      Karnataka Budget 2020 LIVE | 05-03-2020 | BS Yediyurappa

      ಈ ಹಿಂದೆ ಆರು ಬಾರಿ ಬಜೆಟ್ ಮಂಡಿಸಿದ್ದ ಬಿ.ಎಸ್.ಯಡಿಯೂರಪ್ಪ ಇದೀಗ ಏಳನೇ ಬಾರಿಗೆ ಗುರುವಾರ ಬಜೆಟ್ ಮಂಡಿಸಿದರು. ಈ ಬಾರಿ 2 ಲಕ್ಷ 37 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಾಯಿತು. ಈ ಮೊದಲು 2 ಲಕ್ಷ 34 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿತ್ತು.

      Karnataka Budget 2020 Live Updates

      2020-21ನೇ ಸಾಲಿನ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮಹದಾಯಿ ಯೋಜನೆಗೆ 500 ಕೋಟಿ, ಎತ್ತಿನಹೊಳೆ ಯೋಜನೆಗೆ 1500 ಕೋಟಿ ಅನುದಾನ ಘೋಷಿಸಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಮದ್ಯದ ದರದಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಬೆಂಗಳೂರಿಗೂ ಬಜೆಟ್ ನಲ್ಲಿ ಸಿಎಂ ಬಿಎಸ್ ವೈ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ಅವುಗಳ ಸಂಪೂರ್ಣ ವಿವರ ಇಲ್ಲಿದೆ.

      Newest FirstOldest First
      4:01 PM, 5 Mar

      ರಾಜ್ಯಕ್ಕೆ ಸಂಪನ್ಮೂಲಗಳ ಕ್ರೂಢೀಕರಣ ಅಗತ್ಯವಿದೆ. ಈ ಹಿನ್ನೆಲೆ ಕೆಲವು ತೆರಿಗೆ ಹಾಕೋದು ಅನಿವಾರ್ಯವಾಗಿದೆ. ಇದರಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಿಸಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
      1:43 PM, 5 Mar

      ರಾಜ್ಯ ಬಜೆಟ್ ನಲ್ಲಿ ಸಂಪನ್ಮೂಲ ಕೊರತೆ ಎದ್ದು ಕಾಣುತ್ತಿದ್ದು, ಕೇಂದ್ರ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ. ಇದನ್ನು ಸ್ವತಃ ಬಿಎಸ್ ವೈ ಒಪ್ಪಿಕೊಂಡಿದ್ದಾರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ.
      12:50 PM, 5 Mar

      ಶುಕ್ರವಾರ ಬೆಳಗ್ಗೆ 10.30ಕ್ಕೆ ಅಧಿವೇಶನವನ್ನು ಮುಂದೂಡಿದ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.
      12:49 PM, 5 Mar

      2020-21ನೇ ಸಾಲಿನ ಬಜೆಟ್ ನ್ನು 1 ಗಂಟೆ 46 ನಿಮಿಷಗಳಲ್ಲಿ ಓದಿ ಮುಗಿಸಿದ ಮುಖ್ಯಮಂತ್ರಿ ಯಡಿಯೂರಪ್ಪ.
      12:34 PM, 5 Mar

      ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 1 ಲಕ್ಷ ರೂಪಾಯಿ ಪ್ರಶಸ್ತಿ. ಈ ಯೋಜನೆಗಾಗಿ 60 ಲಕ್ಷ ರೂಪಾಯಿ ಮೀಸಲು.
      12:27 PM, 5 Mar

      ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ ಬಿಎಸ್ ವೈ.
      12:25 PM, 5 Mar

      ಉಡುಪಿ ಜಿಲ್ಲೆ ಹೆಜಮಾಡಿಕೋಡಿಯಲ್ಲಿ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ. ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ.
      Advertisement
      12:23 PM, 5 Mar

      ಮುಲ್ಕಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ. ಮಂಗಳೂರು ತಾಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ.
      12:21 PM, 5 Mar

      ಮಹಿಳಾ ಮೀನುಗಾರರ ಸಬಲೀಕರಣ ಯೋಜನೆಯಡಿ 1,000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ.
      12:20 PM, 5 Mar

      ರಾಜ್ಯದಲ್ಲಿ 5000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನ.
      12:16 PM, 5 Mar

      ವಿಶ್ವಬ್ಯಾಂಕ್ ಪ್ರಾಯೋಜಿತ ಸುಜಲಾ-III ಯೋಜನೆಯನ್ನು ಜಾರಿಗೊಳಿಸಿರುವ 12 ಮಳೆ ಆಶ್ರಿತ ಜಿಲ್ಲೆಗಳ 2,500 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಭೂ ಸಂಪನ್ಮೂಲ ತರಬೇತಿ ನೀಡಿ, ಕಾರ್ಡ್ ವಿತರಿಸಲು 10 ಕೋಟಿ ರೂ. ಅನುದಾನ.
      12:14 PM, 5 Mar

      ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಪ್ರಾರಂಭ. ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ. ಅನುದಾನ.
      Advertisement
      12:05 PM, 5 Mar

      ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 5 ಕೋಟಿ ರೂಪಾಯಿ ಅನುದಾನ ಘೋಷಿಸಿದ ಸಿಎಂ.
      12:03 PM, 5 Mar

      60 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ದಾರರಿಗೆ ಜೀವನಚೈತ್ರ ಯೋಜನೆ. ಇಳಿವಯಸ್ಸಿನಲ್ಲಿ ತೀರ್ಥಯಾತ್ರೆಗೆ ತೆರಳಲು ಅನುಕೂಲವಾಗುವಂತಾ ಯೋಜನೆ ಜಾರಿ. ಸಾರಿಗೆ ನಿಗಮ ಮತ್ತು ರೈಲ್ವೆ ಇಲಾಖೆ ಸಹಭಾಗಿತ್ವದ ಯೋಜನೆಗೆ 20 ಕೋಟಿ ರೂಪಾಯಿ ಅನುದಾನ.
      11:58 AM, 5 Mar

      ಎತ್ತಿನಹೊಳೆ ಯೋಜನೆಗೆ ಈ ಆರ್ಥಿಕ ಸಾಲಿನಲ್ಲಿ 1,500 ಕೋಟಿ ರೂಪಾಯಿ ಅನುದಾನ ಘೋಷಣೆ.
      11:54 AM, 5 Mar

      2020-21ನೇ ಸಾಲಿನಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆಗೆ 500 ಕೋಟಿ ಅನುದಾನ ಘೋಷಿಸಿದ ಸಿಎಂ.
      11:53 AM, 5 Mar

      ರಾಮನಗರ ಜಿಲ್ಲೆಯ ರಣಹದ್ದು ಧಾಮದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆಗೆ 2 ಕೋಟಿ ರೂಪಾಯಿ.
      11:52 AM, 5 Mar

      ನಾಡಭ್ರಭು ಕೆಂಪೇಗೌಡ 100 ಅಡಿ ಉದ್ದದ ಪ್ರತಿಮೆ ನಿರ್ಮಾಣಕ್ಕೆ 66 ಕೋಟೆ ಅನುದಾನ.ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಕೆಂಪೇಗೌಡ ಪ್ರತಿಮೆ.
      11:50 AM, 5 Mar

      ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ನೆರವು.
      11:50 AM, 5 Mar

      ಬಸವ ಕಲ್ಯಾಣದಲ್ಲಿ 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ, ಬಜೆಟ್ ನಲ್ಲಿ 100 ಕೋಟಿ ಮೀಸಲು.
      11:49 AM, 5 Mar

      ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಾಗಿ ಕೆಎಸ್ಆರ್ ಟಿಸಿಗೆ 2,450 ಹೊಸ ಬಸ್ ಗಳ ಖರೀದಿ.
      11:48 AM, 5 Mar

      ಬೆಂಗಳೂರು ಪೊಲೀಸ್ ಇಲಾಖೆಗೆ ಹೊಸ ವಾಹನಗಳು. ಹೊಯ್ಸಳ ಪೊಲೀಸರಿಗೆ 75 ಹೊಸ ವಾಹನ.
      11:47 AM, 5 Mar

      ಪೊಲೀಸ್ ಸಿಬ್ಬಂದಿಗಾಗಿ ಜಾರಿಗೊಳಿಸಿದ ಗೃಹಭಾಗ್ಯ ಯೋಜನೆ 200 ಕೋಟಿ ರೂಪಾಯಿ ಮೀಸಲು.
      11:43 AM, 5 Mar

      ಡೀಸೆಲ್ ಮೇಲಿನ ತೆರಿಗೆ ಶೇ.21ರಿಂದ ಶೇ.24ಕ್ಕೆ ಏರಿಕೆ ಮಾಡಿದ್ದು, ಇದರಿಂದ ಪ್ರತಿ ಲೀಟರ್ ಡೀಸೆಲ್ ಗೆ 1.59 ರೂಪಾಯಿ ಹೆಚ್ಚಳವಾಗಲಿದೆ.
      11:41 AM, 5 Mar

      ಪೆಟ್ರೋಲ್ ಮೇಲಿನ ತೆರಿಗೆ ಶೇ.32ರಿಂದ ಶೇ.35ಕ್ಕೆ ಏರಿಕೆ ಮಾಡಿದ್ದು, ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಗೆ 1.60 ರೂಪಾಯಿ ಹೆಚ್ಚಳವಾಗಲಿದೆ.
      11:40 AM, 5 Mar

      ಮದ್ಯದ ದರಯಲ್ಲಿ ಶೇ.6ರಷ್ಟು ಏರಿಕೆ. ಅಬಕಾರಿ ಇಲಾಖೆಗೆ 22,700 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆಯ ಗುರಿ.
      11:38 AM, 5 Mar

      ವಾಣಿಜ್ಯ ತೆರಿಗೆ ಇಲಾಖೆಗೆ 82,443 ಕೋಟಿ ರೂಪಾಯಿ ಸಂಗ್ರಹಣೆಯ ಗುರಿ.
      11:37 AM, 5 Mar

      ಹಾವೇರಿ ಜಿಲ್ಲೆಯಲ್ಲಿ 20 ಬೆಡ್ ಗಳ ಆಯುಷ್ ಆಸ್ಪತ್ರೆ ಸ್ಥಾಪನೆ.
      11:33 AM, 5 Mar

      ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8772 ಕೋಟಿ ರೂಪಾಯಿ ಅನುದಾನ. ಬೆಂಗಳೂರಿನ ಸುತ್ತಲಿನ 110 ಹಳ್ಳಿಗಳ ಅಭಿವೃದ್ಧಿಗೆ ಎರಡು ವರ್ಷಕ್ಕೆ 1 ಸಾವಿರ ಕೋಟಿ ರೂಪಾಯಿ ಅನುದಾನ.
      11:31 AM, 5 Mar

      ಬೆಂಗಳೂರಿಗೆ ಭರ್ಜರಿ ಕೊಡುಗೆ ಕೊಟ್ಟ ಸಿಎಂ ಬಿ.ಎಸ್.ಯಡಿಯೂರಪ್ಪ. ನವ ನಗರೋತ್ಥಾನ ಯೋಜನೆಗೆ 8344 ಕೋಟಿ ರೂಪಾಯಿ ಅನುದಾನ.
      READ MORE

      English summary
      Catch Karnataka Budget 2020 Live Updates on Oneindia Kannada. Check out the latest news, updates, budget expectations, opinions and reactions.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X