ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2018: ಅಬಕಾರಿ ಸುಂಕ ಏರಿಕೆ, ತುಟಿ ಸುಡಲಿದೆ ಸಿಗರೇಟು

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 16: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಆರ್ಥಿಕ ಸುಸ್ಥಿರತೆಗೆ ಆದ್ಯತೆ ನೀಡುವ ಕೇಂದ್ರ ಸರ್ಕಾರದ ಬಜೆಟ್ ನ ಪ್ರತಿರೂಪವಾಗಿ ಕಾಂಗ್ರೆಸ್ ಸರ್ಕಾರದ ಕೊನೆ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರ ಮೇಲೆ ಹೆಚ್ಚು ಹೊರೆ ಹಾಕದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚು ಅನುಕೂಲ ಕಲ್ಪಿಸುವ, ವಿದ್ಯಾರ್ಥಿಗಳು, ನೀರಾವರಿ ಯೋಜನೆಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಘೋಷಿಸಿದ್ದಾರೆ. ಇಂದು 13ನೇ ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಅಬಕಾರಿ ಸುಂಕ ಹೆಚ್ಚಿಸಿದ್ದು ಬಿಟ್ಟರೆ, ಹಲವು ಯೋಜನೆಗಳಿಗೆ ಅನುದಾನ ಹೆಚ್ಚಿಸಿ ಜನಸ್ನೇಹಿ ಎನಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳುLive : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು

Karnataka Budget 2018-19: What is Cheaper What is Costlier

ಯಾವುದು ಏರಿಕೆ?:
* ಮದ್ಯದ ಮೇಲಿನ ಅಬಕಾರಿ ಸುಂಕ ಶೇ8ರಷ್ಟು ಹೆಚ್ಚಳ.
* ಅಬಕಾರಿ ಸುಂಕ 17 ಸ್ಲ್ಯಾಬ್ ಗಳಿಗೆ ಶೇ 16 ರಿಂದ ಶೇ 40ಕ್ಕೆ ಏರಿಕೆ
* ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟು, ಬೀಡಿ ಬೆಲೆ ಏರಿಕೆ

ಯಾವುದು ಇಳಿಕೆ?
* ಡೀಸೆಲ್ ಮೇಲಿನ ಸೆಸ್ 16.75 ರೂನಿಂದ 16.65ಕ್ಕೆ ಇಳಿಕೆ. ಇದರಿಂದ ಡೀಸೆಲ್ ತುಸು ಅಗ್ಗವಾಗಲಿದೆ.
* ಕಬ್ಬಿನ ಮೇಲಿನ ಸೆಸ್ ಗಳು ಇಳಿಕೆ
* ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ ಹಾಗೂ ಬರಗು ಮೇಲಿನ ಹಿಟ್ಟುಗಳಿಗೆ ತೆರಿಗೆ ವಿನಾಯ್ತಿ
* ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆಯ ಮೇಲಿನ ತೆರಿಗೆ ವಿನಾಯಿತಿ.

English summary
Karnataka Budget 2018-19 : Finance minister, Chief Minister Siddaramaiah has increased excise duty up to 8%. In a bid to mobilise revenue, Siddaramaiah took the traditional route of taxing the Excise section.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X