ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#KarnatakaBudget2018 ಬವಣೆಗಳನ್ನು ಹೆಚ್ಚಿಸಿದ ಜನವಿರೋಧಿ ಬಜೆಟ್

By Mahesh
|
Google Oneindia Kannada News

ಬೆಂಗಳೂರು, ಜುಲೈ 05: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಯಾರಿಗೆ ಏನು ಕೊಡುತ್ತಾರೆ ಎಂಬ ನಿರೀಕ್ಷೆ, ಏನು ಸಿಕ್ಕಿತು ಎಂಬುದರ ಬಗ್ಗೆ ಚರ್ಚೆ ಎಲ್ಲದ್ದಕ್ಕೂ ಸಾಮಾಜಿಕ ಜಾಲ ತಾಣಗಳಲ್ಲಿ ಇಂದಿನ ಚರ್ಚೆ ವಿಷಯವಾಗಿದೆ.

ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ, ಅದರಂತೆ, ಹಲವು ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಪ್ರಕಟಿಸುವ ಹಾಗೂ ಹಾಲಿ ಜನಪ್ರಿಯ ಯೋಜನೆಗಳನ್ನು ವಿಸ್ತರಿಸಲು ಮುಂದಾಗಿದ್ದಾರೆ.

ಒಂದೇ ಹಂತದಲ್ಲಿ 2 ಲಕ್ಷರು ತನಕದ ಸುಸ್ತಿ ಬೆಳೆ ಸಾಲ ಮನ್ನಾ, ಸಿದ್ದರಾಮಯ್ಯ ಅವರ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ಘೋಷಿಸಿದ್ದಾರೆ.

Karnataka Budget 2018 Twitter reaction to HD Kumaraswamy budget

ಎಲ್ಲ ನಾಗರಿಕರಿಗೂ ಸಮರ್ಪಕ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ನೂತನ ಆರೋಗ್ಯ ಸೇವಾ ವ್ಯವಸ್ಥೆಯ ಅಡಿಯಲ್ಲಿ ಎಲ್ಲ ವಲಯದ, ಅಂದರೆ ಸಾರ್ವಜನಿಕ ಹಾಗೂ ಖಾಸಗಿವಲಯಗಳೆರಡರ ನೋಂದಾಯಿತ ವೈದ್ಯರ ನೆಟ್‍ವರ್ಕ್-ಜಾಲ ಸ್ಥಾಪನೆ ನಿರೀಕ್ಷೆಯಿದೆ.

ರೈತರ ಸಾಲಮನ್ನಾ ಕುರಿತಂತೆ ಮತ್ತೆ ಗೊಂದಲ ಚರ್ಚೆ ಆರಂಭವಾಗಿದೆ. ಸಾಲಮನ್ನಾ ಮಾಡಿರೋವುದೇನೋ ಸರಿ ಆದರೆ, ಸಂಪನ್ಮೂಲ ಗಳಿಕೆ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕಲಾಗುತ್ತಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಜನಪ್ರಿಯ ಯೋಜನೆಗಳಲ್ಲದೆ, ಪ್ರದೇಶವಾರು ಅನುದಾನವನ್ನು ಮುಂದುವರೆಸಲಾಗುತ್ತಿದೆ. ಹಾಗಾದರೆ, ಬಜೆಟ್ ಗಾತ್ರ ಏಕೆ ಹೆಚ್ಚಾಯಿತು? ಕರಾವಳಿ ಭಾಗಕ್ಕೆ ಹೊಸ ಯೋಜನೆ ಏಕೆ ನೀಡಿಲ್ಲ ಎಂದು ಪ್ರಶ್ನಿಸಲಾಗಿದೆ.

English summary
Karnataka Budget 2018 Twitter reaction to HD Kumaraswamy budget.Chief Minister and Finance Minister HD Kumaraswamy presenting first budget of Congress-JDS coalition government in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X