• search

ಕರ್ನಾಟಕ ಬಜೆಟ್: ಸಿದ್ದರಾಮಯ್ಯ VS ಎಚ್ ಡಿ ಕುಮಾರಸ್ವಾಮಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜುಲೈ 05: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರೋಧದ ನಡುವೆಯೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ.

  ಬಜೆಟ್ ನಲ್ಲಿ ನಿರೀಕ್ಷೆಯಂತೆ ರೈತರ ಸಾಲಮನ್ನಾ ಆಗಿದೆಯಾದರೂ, ಪೂರ್ಣಪ್ರಮಾಣದ ಸಾಲಮನ್ನಾ ಆಗಿಲ್ಲ. 2,18,488 ಲಕ್ಷ ಕೋಟಿ ರೂ. ಯೋಜನಾ ಗಾತ್ರದ ಈ ಬಜೆಟ್ ನಲ್ಲಿ ಸಿದ್ದರಾಮಯ್ಯ ಸರ್ಕಾರದ ಭಾಗ್ಯ ಯೋಜನೆಗಳನ್ನು ಹಾಗೆಯೇ ಮುಂದುವರಿಸಲಾಗಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆಯಾದರೂ, ಕರಾವಳಿ ಜಿಲ್ಲೆಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ದೂರು ಕೇಳಿಬರುತ್ತಿದೆ.

  ಕಳೆದ ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ಮತ್ತು ಇದೀಗ ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ ಎಂದು ಹೋಲಿಕೆ ಮಾಡಿದರೆ ಹೆಚ್ಚು ವ್ಯತ್ಯಾಸವೇನೂ ಕಂಡುಬರುವುದಿಲ್ಲ.

  ಅಲ್ಪಸಂಖ್ಯಾತರ ಓಲೈಕೆ ಇಲ್ಲ!

  ಅಲ್ಪಸಂಖ್ಯಾತರ ಓಲೈಕೆ ಇಲ್ಲ!

  ಸಿದ್ದರಾಮಯ್ಯ ಬಜೆಟ್ ಮಂಡಿಸುವ ಸಮಯದಲ್ಲಿ ವಿಧಾನಸಭೆ ಚುನಾವಣೆಯ ಸಂದರ್ಭವಾಗಿದ್ದರಿಂದ ಸಿದ್ದರಾಮಯ್ಯ ಅದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದರು. ಎಂದಿನಂತೆ ಅಹಿಂದ ವರ್ಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಆದರೆ ಈ ಬಾರಿ ಎಚ್ ಡಿ ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಹೆಚ್ಚು ಕೊಡುಗೆ ನೀಡಿದಂತಿಲ್ಲ. ಸಿದ್ದರಾಮಯ್ಯನವರ ಬಜೆಟ್ ಜನರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದಕ್ಕೆ ಚುನಾವಣೆ ಫಲಿತಾಂಶ ಉತ್ತಮ ಉದಾಹರಣೆಯಾಗಿತ್ತು! ಅದನ್ನೆಲ್ಲ ಮನಗಂಡ ಕುಮಾರಸ್ವಾಮಿ ಅಲ್ಪಸಂಖ್ಯಾತ ಓಲೈಕೆಗೆ ಹೆಚ್ಚು ಒತ್ತು ನೀಡಿಲ್ಲ.

  ಯಾವ ಇಲಾಖೆಗೆ ಎಷ್ಟು?

  ಯಾವ ಇಲಾಖೆಗೆ ಎಷ್ಟು?

  ಫೆಬ್ರವರಿಯಲ್ಲಿ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ಬಜೆಟ್ ಮತ್ತು ಇದೀಗ ಮೈತ್ರಿ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
  ಶಿಕ್ಷಣ ಇಲಾಖೆ: ಕಾಂಗ್ರೆಸ್ ಸರ್ಕಾರ- 26864 ಕೋಟಿ ರೂ., ಮೈತ್ರಿ ಸರ್ಕಾರ 26581ಕೋ ಟಿ ರೂ.
  ಜಲಸಂಪನ್ಮೂಲ: ಕಾಂಗ್ರೆಸ್ ಸರ್ಕಾರ 18112 ಕೋಟಿ ರೂ., ಮೈತ್ರಿ ಸರ್ಕಾರ 18142 ಕೋಟಿ ರೂ.
  ನಗರಾಭಿವೃದ್ಧಿ: ಕಾಂಗ್ರೆಸ್ ಸರ್ಕಾರ 17196 ಕೋಟಿ ರೂ., ಮೈತ್ರಿ ಸರ್ಕಾರ 17727 ಕೋಟಿ ರೂ.

  ಗ್ರಾಮೀಣಾಭಿವೃದ್ಧಿಗೆ ಒತ್ತು

  ಗ್ರಾಮೀಣಾಭಿವೃದ್ಧಿಗೆ ಒತ್ತು

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: ಕಾಂಗ್ರೆಸ್ ಸರ್ಕಾರ 14268 ಕೋಟಿ ರೂ., ಮೈತ್ರಿ ಸರ್ಕಾರ 14449 ಕೋಟಿ ರೂ.
  ಇಂಧನ: ಕಾಂಗ್ರೆಸ್ ಸರ್ಕಾರ 14136 ಕೋಟಿ ರೂ., ಮೈತ್ರಿ ಸರ್ಕಾರ 14123 ಕೋಟಿ ರೂ.
  ಸಮಾಜ ಕಲ್ಯಾಣ: ಕಾಂಗ್ರೆಸ್ ಸರ್ಕಾರ 11821 ಕೋಟಿ ರೂ., ಮೈತ್ರಿ ಸರ್ಕಾರ 11788 ಕೋಟಿ ರೂ.
  ಲೋಕೋಪಯೋಗಿ: ಕಾಂಗ್ರೆಸ್ ಸರ್ಕಾರ 9271 ಕೋಟಿ ರೂ., ಮೈತ್ರಿ ಸರ್ಕಾರ 10200 ಕೋಟಿ ರೂ.

  ಆರೋಗ್ಯ ಭಾಗ್ಯ

  ಆರೋಗ್ಯ ಭಾಗ್ಯ

  ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ಕಾಂಗ್ರೆಸ್ ಸರ್ಕಾರ 8822 ಕೋಟಿ ರೂ., ಮೈತ್ರಿ ಸರ್ಕಾರ 9317 ಕೋಟಿ ರೂ.
  ಕೃಷಿ ಮತ್ತು ತೋಟಗಾರಿಕೆ: ಕಾಂಗ್ರೆಸ್ ಸರ್ಕಾರ 7301 ಕೋಟಿ ರೂ., ಮೈತ್ರಿ ಸರ್ಕಾರ 7642 ಕೋಟಿ ರೂ.
  ಕಂದಾಯ: ಕಾಂಗ್ರೆಸ್ ಸರ್ಕಾರ 6642 ಕೋಟಿ ರೂ., ಮೈತ್ರಿ ಸರ್ಕಾರ 7180 ಕೋಟಿ ರೂ.
  ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಕಾಂಗ್ರೆಸ್ ಸರ್ಕಾರ 5371 ಕೋಟಿ ರೂ., ಮೈತ್ರಿ ಸರ್ಕಾರ 5725 ಕೋಟಿ ರೂ.

  ವಸತಿ ಇಲಾಖೆ

  ವಸತಿ ಇಲಾಖೆ

  ವಸತಿ: ಕಾಂಗ್ರೆಸ್ ಸರ್ಕಾರ 3942 ಕೋಟಿ ರೂ., ಮೈತ್ರಿ ಸರ್ಕಾರ 3866 ಕೋಟಿ ರೂ.
  ಒಳಾಡಳಿತ ಮತ್ತು ಸಾರಿಗೆ: ಕಾಂಗ್ರೆಸ್ ಸರ್ಕಾರ 8855 ಕೋಟಿ ರೂ., ಮೈತ್ರಿ ಸರ್ಕಾರ 7993 ಕೋಟಿ ರೂ.
  ಆಹಾರ ಮತ್ತು ನಾಗರಿಕ ಸರಬರಾಜು: ಕಾಂಗ್ರೆಸ್ ಸರ್ಕಾರ 3882 ಕೋಟಿ ರೂ., ಮೈತ್ರಿ ಸರ್ಕಾರ 3866 ಕೋಟಿ ರೂ.
  ಇತರೆ: ಕಾಂಗ್ರೆಸ್ ಸರ್ಕಾರ 75081 ಕೋಟಿ ರೂ., ಮೈತ್ರಿ ಸರ್ಕಾರ 82196 ಕೋಟಿ ರೂ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Karnataka budget 2018: Here is the comparison betweel Siddaramaiah government's budget which was pronounced on February of this year, and CM HD Kumaraswamy's coalition government's budget.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more