ಕನ್ನಡ ಚಲನಚಿತ್ರ ನೋಡಬಯಸುವವರ ಬಾಯಿಗೆ ಶ್ಯಾವಿಗೆ ಪಾಯಸ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15 : ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳ ಆನಂದ ನೋಡಬಯಸುವವರಿಗೆ ಬಜೆಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂತಸದ ಸುದ್ದಿಯನ್ನು ನೀಡಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ಹಲವಾರು ಘೋಷಣೆಗಳನ್ನು ಕೂಡ ಮಾಡಿದ್ದಾರೆ.

ರಾಜ್ಯದಲ್ಲಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರದ ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ 7.30ರವರೆಗಿನ ಪ್ರಮುಖ ಅವಧಿಯಲ್ಲಿ ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳ ಚಲನಚಿತ್ರ ಪ್ರದರ್ಶನ ಕಡ್ಡಾಯ ಮಾಡಲಾಗಿದೆ.[ಬಜೆಟ್ 2017: ಅಲ್ಪಸಂಖ್ಯಾತ, ಹಿಂದುಳಿದವರಿಗೆ ಭರ್ಜರಿ ಕೊಡುಗೆ]

Karnataka Budget 2017 : Good news for Kannada movie lovers

ಮಲ್ಟಿಪ್ಲೆಕ್ಸ್ ಗಳಿಗೆ ಹೋದವರು ಕನ್ನಡ ಚಿತ್ರಪ್ರದರ್ಶನ ಕಾಣದೆ ವಾಪಸ್ ಬರುತ್ತಿದ್ದವರಿಗೆ, ಮಧ್ಯಾಹ್ನ 1.30ರಿಂದ ಸಂಜೆ 7.30ರವರೆಗೆ ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ ಮಾಡಿರುವುದು ಸಕ್ಕರೆ ಭರಿತ ಸ್ಯಾವಿಗೆ ಪಾಯಸ ಸವಿದಂತಾಗಿದೆ. ಆದರೆ, ಇದನ್ನು ಕಡ್ಡಾಯ ತರಲು ಸಿದ್ದರಾಮಯ್ಯ ಏನೇನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಪ್ರಶ್ನೆ.[21 ಜಿಲ್ಲೆಗಳಲ್ಲಿ 43 ಹೊಸ ತಾಲೂಕುಗಳ ರಚನೆ]

ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ ನೀತಿ ಜಾರಿಗೆ ಕ್ರಮಕ್ಕೆ ಸಿದ್ದರಾಮಯ್ಯ ಸರಕಾರ ತೆಗೆದುಕೊಂಡಿದೆ. ಅಂದರೆ, 200 ರು.ಗಳ ಗರಿಷ್ಠ ಪ್ರವೇಶದರ ನಿಗದಿ ಮಾಡಲಾಗಿದೆ. ಮಲ್ಪಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಹೆಚ್ಚು ಬೆಲೆ ತೆರುತ್ತಿದ್ದವರು ಸ್ವಲ್ಪ ನಿರಾಳರಾಗಬಹುದು.[ಶಿಕ್ಷಕರಿಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ]

ಚಲನಚಿತ್ರೋದ್ಯಮದ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಆರೋಗ್ಯ ಸೇವೆಗಾಗಿ ಸ್ಥಾಪಿಸಿರುವ ದತ್ತಿ ನಿಧಿಯ ಮೊತ್ತ 1 ಕೋಟಿ ರು.ಗಳಿಂದ 10 ಕೋಟಿ ರು.ಗಳಿಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಮೈಸೂರು ಬಳಿಯ ಹಿಮ್ಮಾವಿನಲ್ಲಿ ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗಾಗಿ ಫಿಲ್ಮ್ ಸಿಟಿ ನಿರ್ಮಿಸುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Chief minister Siddaramaiah in his budget speech has given some good news to Kannada movie lovers. He has fixed entry fee to Rs 200 in any film theatre in Karnataka. Also, he has made Kannada movie show compulsory betweetn 1.30 to 7.30 in evening.
Please Wait while comments are loading...