ಸಿದ್ದರಾಮಯ್ಯ ಬಜೆಟ್ : ಯಾವ ಕನ್ನಡ ದಿನಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 19 : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ 4ನೇ ಬಾರಿ ಮತ್ತು ಒಟ್ಟಾರೆಯಾಗಿ 11ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ ಅವರು ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಮಾರ್ಚ್ 18ರ ಶುಕ್ರವಾರ 11.30ಕ್ಕೆ ಸಿದ್ದರಾಮಯ್ಯ ಅವರು ಬಜೆಟ್ ಭಾಷಣ ಆರಂಭಿಸಿದರು. ಭಾಷಣ ಓದುವಾಗ ಎರಡು ಬಾರಿ ಕರೆಂಟ್ ಕೈ ಕೊಟ್ಟು ಅವರಿಗೆ ಮುಜುಗರವನ್ನು ಉಂಟು ಮಾಡಿತು. ಇದರಿಂದಾಗಿ ವಿಧಾನಸೌಧದ ವಿದ್ಯುತ್ ವ್ಯವಸ್ಥೆ ಉಸ್ತುವಾರಿ ಹೊತ್ತಿದ್ದ ಇಬ್ಬರು ಇಂಜಿನಿಯರ್‌ಗಳ ಅಮಾನತಿಗೆ ಸೂಚನೆ ನೀಡಲಾಗಿದೆ. [ರೈತರ ನೆರವಿಗೆ ನಾವಿದ್ದೇವೆ ಎಂದ ಸಿದ್ದರಾಮಯ್ಯ]

ತಮ್ಮ ಬಜೆಟ್ ಭಾಷಣದಲ್ಲಿ ಬರಗಾಲ, ಸಾಲಭಾದೆಯಿಂದ ಕಂಗೆಟ್ಟಿರುವ ರೈತನಿಗೆ ಬಲ ತುಂಬಿದ ಸಿದ್ದರಾಮಯ್ಯ ಅವರು ರೈತರ ಸಂಕಷ್ಟ ನಿವಾರಣೆ ಮಾಡಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯ 'ಕರ್ನಾಟಕ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚನೆ' ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. [ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]

ಕನ್ನಡದ ದಿನಪತ್ರಿಕೆಗಳು ಬಜೆಟ್ ಸುದ್ದಿಯನ್ನು ಸವಿಸ್ತಾರವಾಗಿ ಪ್ರಕಟಿಸಿವೆ. ಕೆಲವು ಪತ್ರಿಕೆಗಳ ಮುಖಪುಟದಲ್ಲಿನ ಚಿತ್ರಗಳು ಆಕರ್ಷಕವಾಗಿವೆ. ಕನ್ನಡ ದಿನ ಪತ್ರಿಕೆಗಳ ಶೀರ್ಷಿಕೆ ಹೇಗಿದೆ? ಚಿತ್ರಗಳಲ್ಲಿ ನೋಡಿ..... [ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]

ಗಮನ ಸೆಳೆಯುವ ಮುಖಪುಟದ ಚಿತ್ರ

ಗಮನ ಸೆಳೆಯುವ ಮುಖಪುಟದ ಚಿತ್ರ

ಉದಯವಾಣಿ 'ಸಾಲದ ಹೊರೆ, ತೆರಿಗೆ ಬರೆ' ಎಂಬ ಶೀರ್ಷಿಕೆಯಡಿ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ. ಬಜೆಟ್ ಮಂಡನೆ ಮಾಡುವಾಗ ಕರೆಂಟ್ ಕೈ ಕೊಟ್ಟಿತ್ತು. ಅದನ್ನೇ ಪ್ರಧಾನವಾಗಿ ಮುಖಪುಟದಲ್ಲಿ ಬಳಸಲಾಗಿದ್ದು, ಚಿತ್ರ ಗಮನ ಸೆಳೆಯುತ್ತಿದೆ. [ಪೇಪರ್ ಓದಲು ಲಿಂಕ್]

ಸಂಪತ್ತು ತುಂಬುವ ಹೊತ್ತು

ಸಂಪತ್ತು ತುಂಬುವ ಹೊತ್ತು

'ಸಂಪತ್ತು ತುಂಬುವ ಹೊತ್ತು' ಎಂಬ ಶೀರ್ಷಿಕೆಯಡಿ ವಿಜಯ ಕರ್ನಾಟಕ ಬಜೆಟ್ ಸುದ್ದಿಗಳನ್ನು ನೀಡಿದೆ. ಮುಖಪುಟದಲ್ಲಿ ಮೊಬೈಲ್ ಫ್ಲಾಷ್ ಸಹಾಯದಿಂದ ಬಜೆಟ್ ಭಾಷಣ ಓದಲು ಪ್ರಯತ್ನ ಪಡುತ್ತಿರುವ ಸಿದ್ದರಾಮಯ್ಯ ಅವರ ಚಿತ್ರವಿದೆ. [ಪೇಪರ್ ಓದಲು ಲಿಂಕ್]

ಇದು ಹತ್ತರಲ್ಲಿ ಹನ್ನೊಂದು

ಇದು ಹತ್ತರಲ್ಲಿ ಹನ್ನೊಂದು

ಶುಕ್ರವಾರ ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು 11ನೇ ಬಾರಿಗೆ ಬಜೆಟ್ ಮಂಡನೆ ಮಾಡಿದರು. ವಿಶ್ವವಾಣಿ 'ಇದು ಹತ್ತರಲ್ಲಿ ಹನ್ನೊಂದು' ಎಂಬ ಶೀರ್ಷಿಕೆಯಡಿ ಬಜೆಟ್ ಸುದ್ದಿಯನ್ನು ಪ್ರಕಟಿಸಿದೆ. [ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ]

ಕಲ್ಯಾಣ ಕರ್ನಾಟಕಕ್ಕೆ ಕಾಸಿನ ಸಂಕಟ

ಕಲ್ಯಾಣ ಕರ್ನಾಟಕಕ್ಕೆ ಕಾಸಿನ ಸಂಕಟ

ವಿಜಯವಾಣಿ 'ಕಲ್ಯಾಣ ಕರ್ನಾಟಕಕ್ಕೆ ಕಾಸಿನ ಸಂಕಟ' ಎಂಬ ಶೀರ್ಷಿಕೆಯಡಿ ಬಜೆಟ್ ಸುದ್ದಿಗಳನ್ನು ನೀಡಿದೆ. ಸಿದ್ದರಾಮಯ್ಯ ಮೊಬೈಲ್ ಬೆಳಕಲ್ಲಿ ಬಜೆಟ್ ಓದುತ್ತಿರುವ ಚಿತ್ರ ಈ ಪತ್ರಿಕೆಯಲ್ಲೂ ಮುಖಪುಟದಲ್ಲಿ ಸ್ಥಾನ ಪಡೆದಿದೆ. [ಪೇಪರ್ ಓದಲು ಲಿಂಕ್ ಇಲ್ಲಿದೆ]

ಕನ್ನಡಪ್ರಭದಲ್ಲಿ ಗಮನಸೆಳೆವ ಉಬ್ಲೋ ವಾಚ್

ಕನ್ನಡಪ್ರಭದಲ್ಲಿ ಗಮನಸೆಳೆವ ಉಬ್ಲೋ ವಾಚ್

ಸಿದ್ದರಾಮಯ್ಯ ಅವರ ಉಬ್ಲೋ ವಾಚ್ ವಿವಾದ ರಾಜ್ಯದಲ್ಲಿ ಸದ್ದು ಮಾಡಿತ್ತು. ಕನ್ನಡ ಪ್ರಭ ಎರಡು ವಾಚ್‌ಗಳಲ್ಲಿ ಸಿದ್ದರಾಮಯ್ಯ ಬಜೆಟ್ ಅಂಕಿ ಸಂಖ್ಯೆಗಳ ವಿವರಣೆ ನೀಡಿದೆ. ಕನ್ನಡಪ್ರಭ ಪತ್ರಿಕೆ ಶೀರ್ಷಿಕೆ 'ಹತ್ತರಂತೆ ಹನ್ನೊಂದು'. [ಪೇಪರ್ ಓದಲು ಲಿಂಕ್]

ಸಾಮಾಜಿಕ ನ್ಯಾಯ ಪಾಲನೆ

ಸಾಮಾಜಿಕ ನ್ಯಾಯ ಪಾಲನೆ

ಸಿದ್ದರಾಮಯ್ಯ ಬಜೆಟ್‌ನಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡಲಾಗಿದೆ ಎಂದು ವಾರ್ತಾ ಭಾರತಿ 'ಸಾಮಾಜಿಕ ನ್ಯಾಯ-ಬಜೆಟ್ ಅಡಿಪಾಯ' ಎಂಬ ಶೀರ್ಷಿಕೆ ನೀಡಿದೆ. [ಪೇಪರ್ ಓದಲು ಲಿಂಕ್]

ಕೃಷಿ ಪರ ಬಜೆಟ್

ಕೃಷಿ ಪರ ಬಜೆಟ್

ಸಿದ್ದರಾಮಯ್ಯ ಅವರ ಬಜೆಟ್ ಕೃಷಿ ಪರವಾಗಿದೆ ಎಂದು ಸಂಯುಕ್ತ ಕರ್ನಾಟಕ 'ಕೃಷಿಕರ ಪರ' ಎಂಬ ಶೀರ್ಷಿಕೆಯಡಿ ಬಜೆಟ್ ಸುದ್ದಿಗಳನ್ನು ನೀಡಿದೆ. [ಪೇಪರ್ ಓದಿ]

ತೆರಿಗೆ ಹೊರೆ ಭಾಗ್ಯ

ತೆರಿಗೆ ಹೊರೆ ಭಾಗ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಭಾಗ್ಯಗಳನ್ನು ಕೊಟ್ಟಿದ್ದಾರೆ. ಬಜೆಟ್‌ನಲ್ಲಿ ತೆರಿಗೆ ಹೊರೆ ಹೊರೆಸಿದ್ದಾರೆ. ಪ್ರಜಾವಾಣಿ 'ಈ ಬಾರಿ ತೆರಿಗೆ ಹೊರೆ ಭಾಗ್ಯ' ಎಂದು ಶೀರ್ಷಿಕೆ ನೀಡಿದೆ. [ಪೇಪರ್ ಓದಿ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister and Finance Minister Siddaramaiah has tabled Karnataka Budget 2016-17 on Friday, March 18, 2016. Kannada news papers carried the news as their banner headlines. See Kannada titles of the news papers for edition 19st March.
Please Wait while comments are loading...