ಸಿದ್ದ'ರಾಮ'ಗೆ ಮುಜುಗರ ತಂದ ಕರ್ನಾಟಕದ ಆಂಜನೇಯ
ಬೆಂಗಳೂರು, ನವೆಂಬರ್.07: ಸಚಿವ ಎಚ್ . ಆಂಜನೇಯ ಪ್ರಕರಣ ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ಮುಜುಗರ ತರುವಂಥ ಸ್ಥಿತಿ ನಿರ್ಮಾಣ ಮಾಡಿದೆ. ಆಂಜನೇಯ ರಾಜೀನಾಮೆಗೆ ನಾಗರಿಕರು, ಸಾಹಿತಿಗಳು ಮತ್ತು ವಿರೋಧ ಪಕ್ಷದವರು ಒತ್ತಾಯ ಮಾಡುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತೆ ತಮ್ಮ ಹಳೆ ವರಸೆ ತೋರಿಸಿದ್ದಾರೆ, ನನಗೇನು ಗೊತ್ತಿಲ್ಲ ಮಾಹಿತಿ ಕಲೆಹಾಕುತ್ತಿದ್ದೇನೆ ಎಂದು ಸಿದ್ಧ ಉತ್ತರ ನೀಡಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಆಂಜನೇಯ ಮತ್ತು ಸಿದ್ದರಾಮಯ್ಯ ಜತೆಯಾಗಿಯೇ ಇದ್ದಾರೆ. ಜತೆಗೆ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಕಾರಿನಲ್ಲಿ ಒಟ್ಟಿಗೆ ತೆರಳಿದ್ದ ಆದರೆ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿಲ್ಲವೇ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.[ಆಂಜನೇಯ ಭವಿಷ್ಯ- ಸಿಎಂ, ಹೈಕಮಾಂಡ್ ಕೈಲಿದೆ: ಪರಂ]
ಬಿಜೆಪಿ ನವೆಂಬರ್ 8 ರಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ರಾಜ್ಯಪಾಲರಿಗೂ ಬಿಜೆಪಿ ಮನವಿ ಮಾಡಿಕೊಳ್ಳಲಿದ್ದು ಸಚಿವ ಸಂಪುಟದಿಂದ ಅವರನ್ನು ಕೈ ಬಿಡಲು ಶಿಫಾರಸು ಮಾಡಲು ತಿಳಿಸಿದೆ.[ಸಚಿವ ಆಂಜನೇಯ ಪ್ರಕರಣ : ಯಾರು, ಏನು ಹೇಳಿದರು?]
ಸಾಹಿತಿ ದೇವನೂರು ಮಹದೇವ ಅವರು ಸಹ ಆಂಜನೇಯ ಪ್ರಕರಣದ ಬಗ್ಗೆ ಅಸಮಾಧಾನ ಹೊರಹಾಕಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಆಂಜನೇಯ ಪ್ರಕರಣದ ಒಂದು ರೌಂಡ್ ಅಪ್ ಇಲ್ಲಿದೆ.

ನನಗೇನು ಗೊತ್ತಿಲ್ಲ
ಸಿಎಂ ಸಿದ್ದರಾಮಯ್ಯ ಮತ್ತೆ ಸಿದ್ಧ ಉತ್ತರ ನೀಡಿದ್ದಾರೆ. ನನಗೇನು ಗೊತ್ತಿಲ್ಲ ಮಾಹಿತಿ ಕಲೆಹಾಕುತ್ತಿದ್ದೇನೆ ಎಂದು ಹೇಳಿ ನುಣುಚಿಕೊಂಡಿದ್ದಾರೆ. ಆದರೆ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಪ್ರಭಾಕರ್ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದು ಯಾಕೆ ಎಂಬುದಕ್ಕೆ ಉತ್ತರವಿಲ್ಲ.

ರಾಜ್ಯಾದ್ಯಂತ ಪ್ರತಿಭಟನೆ
ಆಂಜನೇಯ ಪ್ರಕರಣದ ವಿರುದ್ಧ ಅಂತಿಮವಾಗಿ ಮಾತನಾಡಿರುವ ಬಿಜೆಪಿ ನವೆಂಬರ್ 8 ರಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ರಾಜ್ಯಪಾಲರಿಗೂ ಬಿಜೆಪಿ ಮನವಿ ಮಾಡಿಕೊಳ್ಳಲಿದ್ದು ಸಚಿವ ಸಂಪುಟದಿಂದ ಅವರನ್ನು ಕೈ ಬಿಡಲು ಶಿಫಾರಸು ಮಾಡಲು ಒತ್ತಾಯ ಮಾಡುತ್ತೇವೆ ಎಂದು ಬಿಜೆಪಿ ನಾಯಕ ಆರ್. ಅಶೋಕ ತಿಳಿಸಿದ್ದಾರೆ.

ಆಮ್ ಆದ್ಮಿ ಪಾರ್ಟಿ ಟೀಕೆ
ಹಿಂದುಳಿದ ವರ್ಗಗಳ ಆಶಾಕಿರಣ, ಅಹಿಂದ ಪರ ಎನಿಸಿಕೊಳ್ಳುವ ಸಿದ್ದರಾಮಯ್ಯನವರ ಆಪ್ತರಾದ ಎಚ್ ಆಂಜನೇಯ, ಹಿಂದುಳಿದ ಬಡಮಕ್ಕಳ ಊಟದ ವಿಚಾರದಲ್ಲಿ ಹಗರಣ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಆಮ್ ಆದ್ಮಿ ಪಾರ್ಟಿ ಟೀಕೆ ಮಾಡಿದೆ.

ಹಗರಣವೇನು?
ಆಂಜನೇಯ ಪತ್ನಿ ವಿಜಯಾ ಹಿಂದುಳಿದ ಮಕ್ಕಳ ಆಹಾರಕ್ಕೆ ಸಂಬಂಧಿಸಿದ ಟೆಂಡರ್ ಗೆ ಸೇರಿದ ಕಮಿಷನ್ 7 ಲಕ್ಷ ರು. ಪಡೆದುಕೊಳ್ಳುತ್ತಿದ್ದಾರೆ ಎಂಬ ದೃಶ್ಯಗಳನ್ನು ಖಾಸಗಿ ವಾಹಿನಿಯೊಂದು ಕುಟುಕು ಕಾರ್ಯಾಚರಣೆಯಲ್ಲಿ ಸೆರೆಹಿಡಿದಿತ್ತು.












Click it and Unblock the Notifications