• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಡಿಎಸ್ ಶಾಸಕನ ಸೆಳೆಯಲು ಬಿಜೆಪಿ ಗಾಳ, ಯಾರದು?

|
   ಜೆಡಿಎಸ್ ನ ಶಾಸಕನನ್ನ ಸೆಳೆಯಲು ಬಲೆ ಬೀಸುತ್ತಿದೆ ಕರ್ನಾಟಕ ಬಿಜೆಪಿ

   ಬೆಂಗಳೂರು, ಮೇ 28: ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಪಡೆದಿರುವ ಕರ್ನಾಟಕ ಬಿಜೆಪಿ, ಭಾರಿ ಉತ್ಸಾಹದ ಅಲೆಯ ಮೇಲಿದೆ. ಇದೇ ಉತ್ಸಾಹದಲ್ಲಿ ಸರ್ಕಾರವನ್ನು ಬುಡಮೇಲು ಮಾಡಿ, ಕುರ್ಚಿಯಲ್ಲಿ ವಿರಮಿಸಲು ತೆರೆ-ಮರೆ ಪ್ರಯತ್ನಗಳು ಆರಂಭವಾಗಿವೆ.

   ಒಂದೆಡೆ ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿ ಬಿಜೆಪಿಯ ಪರವಾಗಿ ಕಾಂಗ್ರೆಸ್‌ನ 'ಸಮಾನ ಮನಸ್ಕ' ಶಾಸಕರನ್ನು ಕಲೆ ಹಾಕಿ ಬಿಜೆಪಿ ಗಡಿಗೆ ತಂದು ಬಿಡುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಯ ಇತರೆ ಶಾಸಕರು ಸಂಸದರು ತಮ್ಮ ಕೈಲಾದ ಯೋಗಧಾನವನ್ನು ನೀಡಲು ಸ್ವತಂತ್ರ್ಯವಾಗಿಯೇ ಆಪರೇಷನ್ ಕಮಲಕ್ಕೆ ಇಳಿದಿದ್ದಾರೆ.

   ಬಿಜೆಪಿ ಮುಖಂಡರ ಜೊತೆ ರಮೇಶ್ ಜಾರಕಿಹೊಳಿ ತಡರಾತ್ರಿ ಚರ್ಚೆ

   ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕರನ್ನು ಎಳೆಯುತ್ತಿದ್ದರೆ, ಇತ್ತ ಬಿಜೆಪಿಯ ಶಾಸಕರು, ಸಂಸದರು ಜೆಡಿಎಸ್ ಶಾಸಕರ ಮೇಲೆ ಕಣ್ಣು ಹಾಕಿದ್ದಾರೆ. ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ಅವರನ್ನು ಸೆಳೆಯಲು ಯತ್ನ ನಡೆಸಲಾಗಿದೆ ಎನ್ನಲಾಗಿದೆ.

   ಬಿ.ಸತ್ಯನಾರಾಯಣ ಜೆಡಿಎಸ್ ಹಿರಿಯ ಶಾಸಕ

   ಬಿ.ಸತ್ಯನಾರಾಯಣ ಜೆಡಿಎಸ್ ಹಿರಿಯ ಶಾಸಕ

   ಬಿ.ಸತ್ಯನಾರಾಯಣ ಅವರು ಜೆಡಿಎಸ್‌ನ ಹಿರಿಯ ಶಾಸಕರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು, ಆದರೆ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ, ಆದರೆ ಕೆಎಸ್‌ಆರ್‌ಟಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಯಿತು. ಆದರೆ ಅದು ಸತ್ಯನಾರಾಯಣ ಅವರಿಗೆ ತೃಪ್ತಿ ತಂದಿರಲಿಲ್ಲ.

   ವಿಜಯಪುರ : ಕಾಂಗ್ರೆಸ್ ಸೇರ್ತಾರಾ ಬಿಜೆಪಿ ಶಾಸಕ?, ಆಡಿಯೋ ವೈರಲ್

   ಅಸಮಾಧಾನವನ್ನು ತಮ್ಮ ಪರವಾಗಿಸಿಕೊಳ್ಳುವ ಯತ್ನ

   ಅಸಮಾಧಾನವನ್ನು ತಮ್ಮ ಪರವಾಗಿಸಿಕೊಳ್ಳುವ ಯತ್ನ

   ಸತ್ಯನಾರಾಯಣ ಅವರ ಅಸಮಾಧಾನವನ್ನು ತಮ್ಮ ಪರವಾಗಿ ಬಳಸಿಕೊಳ್ಳುವ ಯತ್ನಕ್ಕೆ ಬಿಜೆಪಿ ಕೈಹಾಕಿದ್ದು, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಹಾಗೂ ಮತ್ತೊಬ್ಬರು ರಾಜ್ಯದ ಪ್ರಮುಖ ಬಿಜೆಪಿ ಮುಖಂಡರು ಸತ್ಯನಾರಾಯಣ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

   ರಮೇಶ್ ಜಾರಕಿಹೊಳಿ ದೆಹಲಿಗೆ, ಸರ್ಕಾರಕ್ಕೆ ಮತ್ತೆ ಆತಂಕ

   ಸಚಿವ ಸ್ಥಾನ ಕೇಳಿದ್ದ ಸತ್ಯನಾರಾಯಣ

   ಸಚಿವ ಸ್ಥಾನ ಕೇಳಿದ್ದ ಸತ್ಯನಾರಾಯಣ

   ಈ ಹಿಂದೆ ಸತ್ಯನಾರಾಯಣ ಅವರು, ಕುಂಚಿಟಿಗ ಕೋಟಾದ ಅಡಿ ತಮಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಕೆಎಸ್‌ಆರ್‌ಟಿಸಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ ಅಲ್ಲಿಯೂ ದೇವೇಗೌಡ ಅವರ ಸಂಬಂಧಿ ತಮ್ಮಣ್ಣ ಅವರದ್ದೇ ಆಡಳಿತವಿದ್ದು, ಇವರು ಕೇವಲ ನಾಮಕಾವಸ್ತೆ ಎಂಬಂತಾಗಿದೆ ಹಾಗಾಗಿ ಸತ್ಯನಾರಾಯಣ ಅವರು ಅಸಮಾಧಾನಗೊಂಡಿದ್ದಾರೆ.

   ಸಂಖ್ಯೆ ಹೆಚ್ಚಿಸಿಕೊಂಡ ಬಿಜೆಪಿ ಬಹುಮತಕ್ಕೆ ಹತ್ತಿರ?

   ಸಂಖ್ಯೆ ಹೆಚ್ಚಿಸಿಕೊಂಡ ಬಿಜೆಪಿ ಬಹುಮತಕ್ಕೆ ಹತ್ತಿರ?

   ವಿಧಾನಸಭೆ ಉಪಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದು 105 ಸ್ಥಾನಕ್ಕೆ ಹೆಚ್ಚಳಗೊಂಡಿರುವ ಬಿಜೆಪಿಗೆ ಸರ್ಕಾರ ರಚಿಸುವ ಹೆಚ್ಚಿನ ವಿಶ್ವಾಸ ಬಂದಿದೆ. ರಮೇಶ್ ಜಾರಕಿಹೊಳಿ ಈಗಾಗಲೇ ಬಿಜೆಪಿ ಜೊತೆಯೇ ಇದ್ದಾರೆ. ಪಕ್ಷೇತರ ಶಾಸಕ ಆರ್.ಶಂಕರ್ ಸಹ ಈ ಹಿಂದೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಮಾಲೂರಿನ ಮತ್ತೊಬ್ಬ ಪಕ್ಷೇತರ ಶಾಸಕ ಸಹ ಹಿಂದೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಕಂಪ್ಲಿ ಶಾಸಕ ಕಾಂಗ್ರೆಸ್‌ನಿಂದ ಅಮಾನತ್ತಾಗಿದ್ದಾರೆ. ಸುಧಾಕರ್, ಮಹೇಶ್ ಕುಮಟಳ್ಳಿ ಬಿಜೆಪಿ ಪರ ಒಲವು ತೋರಿಸಿದಂತಿದೆ. ಅಲ್ಲಿಗೆ ಬಿಜೆಪಿಯು ಬಹುಮತಕ್ಕೆ ಹತ್ತಿರ ಬಂದಂತಾಗುತ್ತಿದೆ.

   English summary
   Karnataka BJP trying to pull JDS MLA B Sathyanarayan to their side. Sources said that Sadananda Gowda and CP Yogeshwar contacted Sathyanarayan.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X