BJP Manifesto 2023: ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಬಿಜೆಪಿ ಭರವಸೆ

ಬೆಂಗಳೂರು,ಮೇ1: 2023 ರ ವಿಧಾನಸಭಾ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷೆ ಜೆ ಪಿ ನಡ್ಡಾ ಬಿಡುಗಡೆಯಾಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಸಮಾರಂಭದಲ್ಲಿ ಪ್ರಜಾ ಪ್ರಣಾಳಿಕೆ ಹೆಸರಿನಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಕಾಂಗ್ರೆಸ್‌ ಪಕ್ಷ ಮಹಿಳೆಯರಿಗಾಗಾಇ ಕೊಟ್ಟ ಗ್ಯಾರಂಟಿ ಹೆಸರಿನಲ್ಲಿ ನೀಡಿರುವ ಭರವಸೆಗಳ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿರುವ ಬಿಜೆಪಿಯು ಇದೀಗ ಮಹಿಳಾ ಮತಾರರ ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ.

Karnataka BJP Manifesto 2023: Analysis of Benefits for Women and Child Welfare

ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಬಿಜೆಪಿ ಕೊಟ್ಟ ಭರವಸೆಗಳೇನು?

1. ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸುತ್ತೇವೆ. ಆ ಕ್ಲಸ್ಟರ್‌ಗಳಲ್ಲಿ ಮಹಿಳಾ ನೇತೃತ್ವದ ಉದ್ಯಮಗಳಿಗೆ ವಿಜಿಎಫ್‌ನಂತೆ 500 ಕೋಟಿ ಆವರ್ತ ನಿಧಿ ಸ್ಥಾಪಿಸುತ್ತೇವೆ.

2. ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಮೈಸೂರು, ಮಂಗಳೂರು, ತುಮಕೂರು ಮತ್ತು ದಾವಣಗೆರೆಯಲ್ಲಿ ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಪಿಪಿಪಿ ಮಾದರಿಯಲ್ಲಿ ಹಾಸ್ಟೆಲ್‌ಗಳನ್ನು ಸ್ಥಾಪಿಸುತ್ತೇವೆ

3. ಗರ್ಭಿಣಿಯರಿಗೆ 'ಸುರಕ್ಷಾ ಜನನಿ ಭರವಸೆ ಕಿಟ್' ವಿತರಿಸುತ್ತೇವೆ. 6 ಪೌಷ್ಠಿಕಾಂಶಗಳ ಕಿಟ್ 21,000 ಮೌಲ್ಯದ್ದಾಗಿದ್ದು, ಆರ್ಥಿಕ ನೆರವನ್ನೂ ಒಳಗೊಂಡಿರಲಿದೆ.

4. ವಿಧವೆಯರ ಮಾಸಿಕ ಪಿಂಚಣಿ'ಯನ್ನು 800ರಿಂದ 2,000ಕ್ಕೆ ಹೆಚ್ಚಿಸುತ್ತೇವೆ.

5. ಸಾರ್ವಜನಿಕ ಸಹಭಾಗಿತ್ವದ ಎಲ್ಲಾ ಕೈಗಾರಿಕಾ ಕ್ಲಸ್ಟರ್‌ಗಳಲ್ಲಿ ಶಿಶುವಿಹಾರಗಳನ್ನು ಕಡ್ಡಾಯವಾಗಿ ತೆರೆಯುತ್ತೇವೆ.

Karnataka BJP Manifesto 2023: Analysis of Benefits for Women and Child Welfare

6.'ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆ'ಯನ್ನು ಪ್ರಾರಂಭಿಸುತ್ತೇವೆ. ಈ ಯೋಜನೆಯಡಿ ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರು 5 ವರ್ಷಗಳ ಅವಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ 10 ಸಾವಿರದವರೆಗೆ ತಾಳೆಯಾಗುವ ಠೇವಣಿ ನೀಡುತ್ತೇವೆ.

2023-24ನೇ ಸಾಲಿನಲ್ಲಿ ಸಂಘಟಿತ ವಲಯದ 30 ಲಕ್ಷ ಉದ್ಯೋಗಸ್ಥ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು 1 ಸಾವಿರ ಕೋಟಿ ಮತ್ತು ವಿದ್ಯಾ ವಾಹಿನಿ ಯೋಜನೆ ಅಡಿ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಲು 350 ಕೋಟಿ ಹಂಚಿಕೆ ಮಾಡಿದ್ದೇವೆ ಎಂದು ಪ್ರಣಾಳಿಕೆಯಲ್ಲಿ ಬಿಜೆಪಿ ಉಲ್ಲೇಖಿಸಿದೆ.

ರಾಜ್ಯದಲ್ಲಿ ಇದುವರೆಗೆ 9.35 ಲಕ್ಷ ಮಹಿಳೆಯರು 'ಮಾತೃಪೂರ್ಣ ಯೋಜನೆ'ಯ ಪ್ರಯೋಜನ ಪಡೆದಿದ್ದಾರೆ. ಇನ್ನೂ ಅಮೃತ್ ಸ್ವಸಹಾಯ ಮೈಕ್ರೋ ಎಂಟರ್‌ಪ್ರೈಸಸ್' ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ 500 ಕೋಟಿ ನಿಧಿ ಸ್ಥಾಪಿಸಿದ್ದೇವೆ. ಇದರಿಂದ 3.9 ಲಕ್ಷ ಮಹಿಳೆಯರಿಗೆ ನೆರವಾಗಲಿದೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.

ರಾಜ್ಯದಲ್ಲಿ 'ಉಜ್ವಲ ಯೋಜನೆ' ಅಡಿ 37 ಲಕ್ಷ ಉಚಿತ ಎಲ್‌ಪಿಜಿ ಸಂಪರ್ಕ ನೀಡಿದ್ದೇವೆ. ಮಿಷನ್ ಇಂದ್ರ ಧನುಷ್ ಲಸಿಕೆ' ಮೂಲಕ 10 ಲಕ್ಷ ಮಕ್ಕಳು, 2ಲಕ್ಷ ಗರ್ಭಿಣಿಯರ ರೋಗ ನಿರೋಧಕತೆಯನ್ನು ಹೆಚ್ಚಿಸಿದ್ದೇವೆ ಎಂದು ಬಿಜೆಪಿ ಪ್ರಣಾಳಿಕೆಯಿಂದ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+