ಎಂಕೆ ಗಣಪತಿ ಕುಟುಂಬಕ್ಕೆ ಬಿಜೆಪಿ ನಾಯಕರ ಸಾಂತ್ವನ

Written By:
Subscribe to Oneindia Kannada

ಮಡಿಕೇರಿ, ಜುಲೈ 16: ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿ ಎಂಕೆ ಗಣಪತಿ ಅವರ ರಂಗಸಮುದ್ರದ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ರಾಜ್ಯ ಬಿಜೆಪಿ ನಾಯಕರು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ, ಆರ್ ಅಶೋಕ್, ವಿ ಸೋಮಣ್ಣ, ಕೆಜಿ ಬೋಪಯ್ಯ ಸೇರಿದಂತೆ ವಿವಿಧ ಮುಖಂಡರು ಎರಡು ತಂಡವಾಗಿ ಭೇಟಿ ನೀಡಿ ಗಣಪತಿ ಅವರ ಪತ್ನಿ ಪಾವನಾ ಅವರಿಗೆ ಸಾಂತ್ವನ ಹೇಳಿದರು.[ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?]

bjp

ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಈಶ್ವರಪ್ಪ ಮತ್ತು ಅಶೋಕ್, ರಾಜ್ಯ ಸರ್ಕಾರ ಯಾವ ಹೋರಾಟಕ್ಕೂ ಬೆಲೆ ನೀಡುತ್ತಿಲ್ಲ. ಸಿಬಿಐ ತನಿಖೆಗೆ ಆದೇಶ ನೀಡುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.['ಗಣಪತಿ ಅವರಿಗೆ ಅವರ ವಿರುದ್ಧದ ಕೇಸ್ ಗಳು ಕಾಡುತ್ತಿತ್ತು']

bjp

ಆರೋಪ ಕೇಳಿಬಂದಿರುವುದರಿಂದ ಸಚಿವ ಕೆಜೆ ಜಾರ್ಜ್ ರಾಜೀನಾಮೆ ನೀಡಬೇಕು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಸದನದಲ್ಲೂ ಹೋರಾಟ ನಡೆಸಿದ್ದವು. ಅಹೋರಾತ್ರಿ ಧರಣಿಯನ್ನು ನಡೆಸಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Madikeri: Karnataka BJP leaders visited DySP M K Ganapathi house on 16, July 2016. BJP leaders including K.S.Eshwarappa, R Ashok demands for a CBI probe and minister K J George resignation.
Please Wait while comments are loading...