ರಾಜ್ಯದಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಮುಂದಿರುವ ಟಾಸ್ಕ್‌ಗಳು : ಬಿಜೆಪಿ

ಬೆಂಗಳೂರು, ಫೆಬ್ರವರಿ 03: ದೇಶದಲ್ಲಿ ಮತ್ತೊಮ್ಮೆ ಬಿಜೆಪಿಗೆ ದಾಖಲೆಯ 400 ಸ್ಥಾನಗಳು ಸಿಗಲಿದೆ ಎಂದು ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ್‌ ಖರ್ಗೆ ಸಾಹೇಬರೇ ಒಪ್ಪಿಕೊಂಡಿದ್ದಾರೆ. ಆದರೂ ಕಾಂಗ್ರೆಸ್ಸಿಗರು ಅಭಿವೃದ್ಧಿ ಮಾಡುವುದು ಬಿಟ್ಟು ದಿಗಿಲು ಬಡಿದು ಮಂಗಗಳಂತೆ ಸರ್ಕಸ್‌ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಹೇಳಿದೆ.

ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಮುಂದಿರುವ ಟಾಸ್ಕ್‌ಗಳು

▪️ಕೋಮುಗಲಭೆ ಸೃಷ್ಟಿಸುವುದು
▪️ದೇಶ ವಿಭಜನೆಯ ಚರ್ಚೆ ಹುಟ್ಟು ಹಾಕುವುದು
▪️ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು
▪️ವಾಕ್‌ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು
▪️ಐಟಿ ಸೆಲ್‌ ಮೂಲಕ ಸುಳ್ಳು ಸುದ್ದಿ ಹಬ್ಬಿಸುವುದು
▪️ಭಾರತೀಯ ಪರಂಪರೆಯನ್ನು ಅವಮಾನಿಸುವುದು

Karnataka BJP Lashed Out At The State Congress

ಅಭಿವೃದ್ಧಿ ಮಾತ್ರ ಕೇಳಬೇಡಿ - ಬಿಟ್ಟಿ ಪ್ರಚಾರ ಮಾತ್ರ ಮರಿಬೇಡಿ'! ಸುಳ್ಳಿನ ಮೇಲೆ ಸುಳ್ಳನ್ನು ಪೋಣಿಸುತ್ತಾ ಜನರ ಕಿವಿ ಮೇಲೆ ಹೂವಿಡುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲ ಉದ್ದೇಶ. ಸನ್ಮಾನ್ಯ ಮಜಾವಾದಿ ಸಿಎಂ ಸಿದ್ದರಾಮಯ್ಯ ಅವರ ನಿದ್ದೆಯಲ್ಲಿಯೂ ತುಷ್ಟೀಕರಣದ ರಾಜಕೀಯ ಅಡಗಿದೆ. ರೈತರು, ಬಡವರು, ಮಹಿಳೆಯರು, ಶ್ರಮಿಕರ ಕಷ್ಟ ಹೇಳಿಕೊಂಡರೆ ನಿದ್ರೆಗೆ ಶರಣಾಗುವ ಸಿದ್ದರಾಮಯ್ಯ ಸರ್ಕಾರ, ಅದೇ ಮತಾಂಧರು, ನಾಡ ದ್ರೋಹಿಗಳು, ಸಮಾಜಘಾತುಕರು ಬಳಿ ಬಂದರೆ ಸಾಕು ದಿಢೀರ್ ಅಂತ ನಿದ್ರೆಯಿಂದ ಎಚ್ಚರಗೊಳ್ಳುತ್ತಾರೆ‌ ಎಂದು ಬಿಜೆಪಿ ಹೇಳಿದೆ.

ಇನ್ನೂ ಮತ್ತೊಂದು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ತಿಲಕ ಕಂಡರೆ ಭಯ, ಕೇಸರಿ ಕಂಡರೆ ಕಳವಳ, ಹನುಮ ಧ್ವಜ ಕಂಡರೆ ಭೀತಿ, ರಾಮಮಂದಿರ ಎಂದರೆ ಕಿರಿಕಿರಿ, ಹಿಂದೂಗಳು ಎಂದರೆ ದ್ವೇಷ ಸಾಧಿಸುವ ಕಲೆಯನ್ನು ಇತ್ತೀಚೆಗೆ ಭಯಾನಕವಾಗಿ ರೂಢಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಸಾಹೇಬರಿಗೆ ಟೋಪಿ ಕಂಡರೆ ಇರುವ ವ್ಯಾಮೋಹ ಹಿಂದೂ ನಂಬಿಕೆಗಳ ಮೇಲೆ ಇಲ್ಲದೆ ಇರುವುದು ಹಿಂದೂಗಳಿಗೆ ಮಾಡುತ್ತಿರುವ ದ್ರೋಹ, ವಂಚನೆ!

ಚುನಾವಣೆಗೂ ಮುನ್ನ ಟೆಂಪಲ್ ರನ್ ಮಾಡಿದ ನಕಲಿ ಹಿಂದೂ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆದ ಕೂಡಲೇ ಹಿಂದೂಗಳ ಮೇಲೇಕೆ ಇಷ್ಟೊಂದು ದ್ವೇಷ ಕಾರುತ್ತಿದಾರೆ ಎನ್ನುವ ಪ್ರಶ್ನೆ ನಾಡಿನ ಜನತೆಯನ್ನು ಕಾಡುತ್ತಿದೆ ಎಂದು ಬಿಜೆಪಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+