'ನಮ್ಮ ಪ್ರಣಾಳಿಕೆಗೆ ನಿಮ್ಮ ಸಲಹೆ': ಬಿಜೆಪಿ ವಿನೂತನ ಕಾರ್ಯಕ್ರಮ
ಬೆಂಗಳೂರು, ಮಾರ್ಚ್ 12: ಆಯಾ ಕ್ಷೇತ್ರದ ಅಭಿವೃದ್ಧಿಯ ಕುರಿತು ಸ್ಥಳೀಯರ ಬಳಿಯೇ ಸಲಹೆ ಕೇಳಿ, ಅವುಗಳಲ್ಲಿ ಆಯ್ದವನ್ನು ಪ್ರಣಾಳಿಕೆಯನ್ನು ಸೇರಿಸಿಕೊಳ್ಳುವ ವಿನೂತನ ಕಾರ್ಯಕ್ರಮವನ್ನು ನವ ಕರ್ನಾಟಕ ಜನಪರ ಶಕ್ತಿಯ ಮೂಲಕ ಕರ್ನಾಟಕ ಬಿಜೆಪಿ ಏರ್ಪಡಿಸಿದೆ.
ಬೆಂಗಳೂರಿನ ವಿವಿ ಪುರಂನ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಶನ್ ನಲ್ಲಿ ಮಾ.12 ರದು ಸಂಜೆ 5:00 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ನಿರೀಕ್ಷಿಸಲಾಗುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವುದರಿಂದ ಎಲ್ಲ ಪಕ್ಷಗಳೂ ಪ್ರಣಾಳಿಕೆಯ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಆದರೆ ಈ ಕುರಿತು ಬಿಜೆಪಿ ವಿನೂತನ ಯೋಜನೆಯೊಂದನ್ನು ರೂಪಿಸಿದ್ದು, ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಆಯಾ ಕ್ಷೇತ್ರಗಳಲ್ಲಿನ ಸಮಸ್ಯೆಗಳು, ಅವನ್ನು ಪರಿಹರಿಸುವಲ್ಲಿ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಸಾರ್ವಜನಿಕರಿಂದಲೇ ಸಲಹೆಗಳನ್ನು ಕೇಳಿ, ಅವುಗಳಲ್ಲಿ ಕೆಲವನ್ನು ಆಯ್ಕೆ ಮಾಡಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಿದೆ.












Click it and Unblock the Notifications