'ನಕಲಿ ಚಿತ್ರ ತಯಾರಿಕಾ ವಿಭಾಗ ಕೆಪಿಸಿಸಿ: ಸಿಎಂ ಎಡಿಟಿಂಗ್ ಮಾಸ್ಟರ್: ಬಿಜೆಪಿ ಆರೋಪ
ಬೆಂಗಳೂರು, ಜನವರಿ 17: ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿಗಳನ್ನು ಸೃಷ್ಟಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿಯೇ "ಸಿದ್ದಿ"ಸಿದೆ. ಇವರು ಎಡಿಟಿಂಗ್ ಮಾಸ್ಟರ್ ಎಂದು ಕರ್ನಾಟಕ ಬಿಜೆಪಿ ಜರಿದಿದೆ.
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನುದಾನ, ಕರ್ನಾಟಕದ ನಿರ್ಲಕ್ಷ್ಯ, ಬರ ಪರಿಹಾರ ವಿಚಾರವಾಗಿ ದೂರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಕಿಡಿ ಕಾರಿದೆ. ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದೆ.

ನಕಲಿ ಸುದ್ದಿಗಳನ್ನು ರಚಿಸುತ್ತಾ ಕಾಲಹರಣ ಮಾಡುವ ಬದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಯೋಚಿಸಿದ್ದರೆ, ರೈತರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ. ಮಹಿಳೆಯರ ಮೇಲೆ ಹಲ್ಲೆ , ಮಾನಭಂಗಗಳು ನಡೆಯುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯರಿಗೆ ಬಿಜೆಪಿ ತಿರುಗೇಟು ಕೊಟ್ಟಿದೆ. ಸಿದ್ದರಾಮಯ್ಯರನ್ನು ಎಡಿಟಿಂಗ್ ಮಾಸ್ಟರ್ ಎನ್ನುವ ಪೋಟೋವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿರುವ ಬಿಜೆಪಿ 'ನಕಲಿ ಚಿತ್ರ ತಯಾರಿಕಾ ವಿಭಾಗ ಕೆಪಿಸಿಸಿ' ಎಂದು ಬಿಜೆಪಿ ದೂರಿದೆ.
ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿಗಳನ್ನು ಸೃಷ್ಟಿಸುವುದು ಸಿಎಂ @siddaramaiah ಅವರಿಗೆ ಚೆನ್ನಾಗಿಯೇ "ಸಿದ್ದಿ"ಸಿದೆ.
— BJP Karnataka (@BJP4Karnataka) January 17, 2024
ನಕಲಿ ಸುದ್ದಿಗಳನ್ನು ರಚಿಸುತ್ತಾ ಕಾಲಹರಣ ಮಾಡುವ ಬದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಯೋಚಿಸಿದ್ದರೆ, ರೈತರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ, ಮಹಿಳೆಯರ ಮೇಲೆ ಹಲ್ಲೆ ,… pic.twitter.com/uLozxThJrO
ಪ್ರಧಾನಿ ಅವಹೇಳನ ಜನ ನಂಬಲ್ಲ: ಬಿಜೆಪಿ
ಪ್ರಧಾನಿಯ ಗಾಢ ನಿದ್ರೆ ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯು, ಎಲ್ಲೆಂದರಲ್ಲಿ ಸದಾ ನಿದ್ದೆಗೆ ಜಾರುವುದು ನೀವು ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಯವರನ್ನು ಅವಹೇಳನ ಮಾಡಿದರೆ ಜನ ನಂಬುತ್ತಾರೆ ಎಂಬ ಭ್ರಮೆಯಿಂದ ಆದಷ್ಟು ಬೇಗ ಹೊರ ಬನ್ನಿ ಎಂದು ತಿವಿದಿದೆ.
ಕರ್ನಾಟಕದಲ್ಲಿ ನಿಮ್ಮ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಮಾದರಿಯಲ್ಲಿ ಮುನ್ನಡೆಸಿ ಜನರ ಸಮಸ್ಯೆಯನ್ನು ಬಗೆಹರಿಸುವಂತೆ ಬಿಜೆಪಿ ಆಗ್ರಹಿಸಿದೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ತಮಗೆ ತಾನೇ ಪ್ರಚಾರ ಮಾಡಲು ಜೊತೆಗೆ ಬಿಜೆಪಿ ಪ್ರಚಾರಕ್ಕಾಗಿ ಸದಾ ಎದ್ದಿರುವ ಪ್ರಧಾನಮಂತ್ರಿಗಳೂ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಪಂದಿಸದೇ ಸದಾ ತೂಕಡಿಸುತ್ತಾರೆ. ಕರ್ನಾಟಕದ ಬರಗಾಲ ಪರಿಹಾರ ನೀಡುವಲ್ಲಿ, ರಾಜ್ಯಕ್ಕೆ ನ್ಯಾಯು ಪಾಲನ್ನು ನೀಡುವಲ್ಲಿ ಪ್ರಧಾನಿಗಳು ಸ್ಪಂದಿಸುತ್ತಿಲ್ಲ.
ಪ್ರಧಾನಿ ಮೋದಿಯವರು ಕರ್ನಾಟಕವನ್ನು ಕಡೆಗಣಿಸು, ನಿರ್ಲಕ್ಷಿಸು, ನಿದ್ರಿಸು ಮತ್ತದನ್ನೆ ಮುಂದುವರಿಸು ಎಂಬ ಮಂತ್ರ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಜೊತೆಗೆ ಕರ್ನಾಟಕದ ಬಿಜೆಪಿ ಸಂಸದರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡು ಮಂಗಳವಾರ ಟ್ವೀಟ್ ಮಾಡಿದ್ದರು.
ಇದೀಗ ಕರ್ನಾಟಕದಲ್ಲಿನ ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ಹಲ್ಲೆ, ಮಾನಭಂಗಗಳ ವಿಷಯ ಪ್ರಸ್ತಾಪಿಸಿ ಆಡಳಿತವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಟಾಂಗ್ ನೀಡಿದೆ.












Click it and Unblock the Notifications