ಲೋಕಸಭಾ ಚುನಾವಣೆ 2019 : ಕರ್ನಾಟಕ ಬಿಜೆಪಿ ಸಂಚಾಲಕರ ಪಟ್ಟಿ
Recommended Video

ಬೆಂಗಳೂರು, ನವೆಂಬರ್ 22 : 2019ರ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕರ್ನಾಟಕ ಬಿಜೆಪಿ 28 ಕ್ಷೇತ್ರಗಳಿಗೆ ಸಂಚಾಲಕರನ್ನು ನೇಮಿಸಿದೆ. ಪಕ್ಷದ ಅನುಭವಿ ಕಾರ್ಯಕರ್ತರನ್ನು ಸಂಚಾಲಕರಾಗಿ ನೇಮಿಸಲಾಗಿದೆ, ಇವರಲ್ಲಿ ಶಾಸಕರು, ಮಾಜಿ ಶಾಸಕರು ಇದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ 28 ಕ್ಷೇತ್ರಗಳಿಗೆ ಸಂಚಾಲಕರು ಮತ್ತು ಪ್ರಭಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಚುನಾವಣೆ ವೇಳೆ ಬಂಡಾಯದ ಬಾವುಟ ಹಾರಿಸಿ ಅಮಾನತುಗೊಂಡಿದ್ದ ಅಮರನಾಥ ಪಾಟೀಲ ಅವರಿಗೆ ಬೀದರ್‌ಗೆ ಪ್ರಭಾರಿಯನ್ನಾಗಿ ನೇಮಿಸಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರುವ ಅನುಭವಿ ಕಾರ್ಯಕರ್ತರನ್ನು ಪ್ರಭಾರಿ ಮತ್ತು ಸಂಚಾಲಕರಾಗಿ ನೇಮಕ ಮಾಡಲಾಗುತ್ತದೆ. ಕ್ಷೇತ್ರದ ಸಂಘಟನಾತ್ಮಕ ಕೆಲಸಗಳನ್ನು ನೋಡಿಕೊಳ್ಳುವುದು ಸಂಚಾಲಕರ ಕೆಲಸವಾಗಿರುತ್ತದೆ.
2019ರ ಲೋಕಸಭಾ ಚುನಾವಣೆಯಲ್ಲಿ 20+ ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಲಿವೆ. ಯಾವ ಕ್ಷೇತ್ರಕ್ಕೆ ಯಾರು ಸಂಚಾಲಕರು ಪಟ್ಟಿ ನೋಡಿ....

ಕೋಟಾ ಶ್ರೀನಿವಾಸ ಪೂಜಾರಿ
* ಮೈಸೂರು-ಕೊಡಗು - ಎನ್.ವಿ.ಫಣೀಶ್
* ಚಾಮರಾಜನಗರ - ಬಾಲಸುಬ್ರಮಣ್ಯ
* ಮಂಡ್ಯ - ಮಧು ಚಂದನ್
* ಹಾಸನ - ರೇಣು ಕುಮಾರ್
* ದಕ್ಷಿಣ ಕನ್ನಡ - ಗೋಪಾಲಕೃಷ್ಣ ಹೇರಳೆ
* ಉಡುಪಿ -ಚಿಕ್ಕಮಗಳೂರು - ಕೋಟಾ ಶ್ರೀನಿವಾಸ ಪೂಜಾರಿ

ಹರತಾಳು ಹಾಲಪ್ಪ - ಶಿವಮೊಗ್ಗ
* ಶಿವಮೊಗ್ಗ - ಹರತಾಳು ಹಾಲಪ್ಪ
* ಉತ್ತರ ಕನ್ನಡ - ವಿನೋದ್ ಪ್ರಭು
* ಹಾವೇರಿ - ಸಿದ್ದರಾಜ್ ಕಲಕೋಟೆ
* ಧಾರವಾಡ - ಡಾ.ಮಾ.ನಾಗರಾಜ್
* ಬೆಳಗಾವಿ - ಈರಣ್ಣ ಕಡಾಡಿ
* ಚಿಕ್ಕೋಡಿ - ಶಶಿಕಾಂತ ನಾಯಕ್

ಮಾಲೀಕಯ್ಯ ಗುತ್ತೇದಾರ್
* ಬಾಗಲಕೋಟೆ -ವೀರಣ್ಣ ಚರಂತಿಮಠ
* ವಿಜಯಪುರ - ಅರುಣ್ ಶಹಾಪುರ
* ಬೀದರ್ - ಸುಭಾಷ್ ಕಲ್ಲೂರ
* ಕಲಬುರಗಿ - ಮಾಲೀಕಯ್ಯ ಗುತ್ತೇದಾರ್
* ರಾಯಚೂರು - ರಮಾನಂದ ಯಾದವ್
* ಕೊಪ್ಪಳ - ಅಪ್ಪಣ್ಣ ಪದಕಿ
* ಬಳ್ಳಾರಿ - ಮೃತ್ಯುಂಜಯ ಜಿನಗಾ
* ದಾವಣಗೆರೆ - ಜೀವನಮೂರ್ತಿ

ಆರ್.ಅಶೋಕ್ - ಬೆಂಗಳೂರು ದಕ್ಷಿಣ
* ಚಿತ್ರದುರ್ಗ - ಟಿ.ಜಿ.ನರೇಂದ್ರನಾಥ್
* ತುಮಕೂರು - ಬೆಟ್ಟಸ್ವಾಮಿ
* ಬೆಂಗಳೂರು ಗ್ರಾಮಾಂತರ - ತುಳಸಿ ಮುನಿರಾಜುಗೌಡ
* ಚಿಕ್ಕಬಳ್ಳಾಪುರ - ಎಸ್.ಆರ್.ವಿಶ್ವನಾಥ್
* ಕೋಲಾರ - ವೈ.ಸಂಪಂಗಿ
* ಬೆಂಗಳೂರು ದಕ್ಷಿಣ - ಆರ್.ಅಶೋಕ
* ಬೆಂಗಳೂರು ಕೇಂದ್ರ - ಸಚ್ಚಿದಾನಂದ ಮೂರ್ತಿ
* ಬೆಂಗಳೂರು ಉತ್ತರ - ಎಸ್.ಮುನಿರಾಜು












Click it and Unblock the Notifications