ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿಗಾಗಿ ಕರ್ನಾಟಕ ಬಂದ್, ಏನಿರುತ್ತೆ? ಏನಿರಲ್ಲ?

By Mahesh
|
Google Oneindia Kannada News

Recommended Video

ಮಹದಾಯಿಗಾಗಿ ಕರ್ನಾಟಕ ಬಂದ್, ಏನಿರುತ್ತೆ? ಏನಿರಲ್ಲ? | Oneindia Kannada

ಬೆಂಗಳೂರು, ಜನವರಿ 24: ಬಯಲು ಸೀಮೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ವಾಟಾಳ್ ನಾಗರಾಜ್ ಅವರು ಮತ್ತೊಮ್ಮೆ ಬಂದ್ ಗೆ ಕರೆ ನೀಡಿದ್ದಾರೆ.

ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ವಾಟಾಳ್ ಅವರು ಈಗ ಮತ್ತೊಮ್ಮೆ ಮಹದಾಯಿ ನದಿ ಹಂಚಿಕೆ ವಿವಾದ ಬಗೆಹರಿಸಲು ಪ್ರಧಾನಿ ಮೋದಿ ಮುಂದಾಗಬೇಕು ಎಂದು ಆಗ್ರಹಿಸಿ ಜನವರಿ 25ರಂದು ಬಂದ್ ಗೆ ಕರೆ ನೀಡಿದ್ದಾರೆ.

ಜ.25 ರಂದು ಕರ್ನಾಟಕ ಬಂದ್, ಫೆ.4 ರಂದು ಬೆಂಗಳೂರು ಬಂದ್ಜ.25 ರಂದು ಕರ್ನಾಟಕ ಬಂದ್, ಫೆ.4 ರಂದು ಬೆಂಗಳೂರು ಬಂದ್

ಈ ಬಂದ್ ಗೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ನೀಡಿವೆ. ಬಂದ್ ದಿನ ಯಾವ ಸೇವೆ ಇರುತ್ತದೆ ಯಾವ ಸೇವೆ ಇರಲ್ಲ, ಬಸ್ ಸಂಚಾರ, ಶಾಲೆ-ಕಾಲೇಜು, ಕಚೇರಿ ಬಗ್ಗೆ ವಿವರ ಇಲ್ಲಿದೆ...

ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಬಂದ್ ಕಾಂಗ್ರೆಸ್ ಪ್ರಾಯೋಜಿತ ಎಂದು ಬಿಜೆಪಿ ಆರೋಪಿಸಿದೆ. ಈ ಹಿಂದೆ ಬಂದ್ ಮಾಡಿದ್ದಾಗ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದರು. ಈಗ ಅಮಿತ್ ಶಾ ಅವರು ನಾಳೆ ದಿನ ಸುತ್ತೂರು ಮಠಕ್ಕೆ ಬರುತ್ತಿದ್ದಾರೆ.

18 ತಿಂಗಳಲ್ಲಿ 6ಬಂದ್! ರಾಜ್ಯಕ್ಕಾದ ಲಾಭವಾದರೂ ಏನು ವಾಟಾಳರೇ?18 ತಿಂಗಳಲ್ಲಿ 6ಬಂದ್! ರಾಜ್ಯಕ್ಕಾದ ಲಾಭವಾದರೂ ಏನು ವಾಟಾಳರೇ?

ಗುರುವಾರದ ಬಂದ್ ಯಾರೆಲ್ಲ ಬೆಂಬಲ ನೀಡಿದ್ದಾರೆ? ಅಗತ್ಯ ವಸ್ತುಗಳ ಪೂರೈಕೆ ಅಲ್ಲದೆ, ಯಾವೆಲ್ಲ ಸೌಲಭ್ಯಗಳು ಲಭ್ಯವಿರಲಿದೆ? ಯಾವೆಲ್ಲ ಸೇವೆಗಳು ಸ್ಥಗಿತಗೊಳ್ಳಲಿದೆ? ಪ್ರತಿಭಟನೆ ಎಲ್ಲೆಲ್ಲಿ? ವಿವರಗಳಿಗಾಗಿ ಮುಂದೆ ಓದಿ...

ಬೆಂಬಲ ಯಾರು ನೀಡಿದ್ದಾರೆ?

ಬೆಂಬಲ ಯಾರು ನೀಡಿದ್ದಾರೆ?

* ನಮ್ಮ ಪರೋಕ್ಷ ಬೆಂಬಲ ಸಿಗಲಿದೆ' ಎಂದು ಬೆಂಗಳೂರು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ತಿಳಿಸಿದ್ದಾರೆ.
* ಬಂದ್‍ ಗೆ ಎಐಟಿಯುಸಿ ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿದೆ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ತಿಳಿಸಿದ್ದಾರೆ.
* ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬೆಂಬಲ ಸಿಕ್ಕಿದೆ. ಡಾ.ರಾಜ್ ಕುಮಾರ್ ಅಭಿಮಾನಗಳ ಸಂಘದ ಅಧ್ಯಕ್ಷ ಸಾರಾ ಗೋವಿಂದು ಅವರು ವಾಟಾಳ್ ಅವರಿಗೆ ಫೂರ್ಣ ಬೆಂಬಲ ನೀಡಿದ್ದಾರೆ.
* ಕೆಲ ಆಟೋರಿಕ್ಷಾ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿವೆ.

ಕೆಎಸ್ ಆರ್‌ಟಿಸಿ ಹಾಗೂ ಬಿಎಂಟಿಸಿ

ಕೆಎಸ್ ಆರ್‌ಟಿಸಿ ಹಾಗೂ ಬಿಎಂಟಿಸಿ

ರಾಜ್ಯದಲ್ಲಿ ಕೆಎಸ್ ಆರ್‌ಟಿಸಿ ಹಾಗೂ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಸೇವೆಗಳು ಎಂದಿನಂತೆ ಇರಲಿವೆ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಈಶಾನ್ಯ ಕರ್ನಾಟಕ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಬೆಂಬಲ ವ್ಯಕ್ತಪಡಿಸಿಲ್ಲ. ಕೆಎಸ್ಸಾರ್ಟಿಸಿ ಆನ್‍ಲೈನ್ ಬುಕಿಂಗ್ ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಕಾರ್ಮಿಕರ ಯೂನಿಯನ್ ಗಳ ನೈತಿಕ ಬೆಂಬಲವಿರುವುದರಿಂದ ಯಾವುದೇ ಕ್ಷಣದಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಬ್ಯಾಂಕಿಗೆ ಸಾಲು ಸಾಲು ರಜೆ

ಬ್ಯಾಂಕಿಗೆ ಸಾಲು ಸಾಲು ರಜೆ

ಬ್ಯಾಂಕ್ ಓಪನ್ ಇರಲಿದೆ. ಎಸ್‌ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕ್ ಗಳು, ಭಾರತೀಯ ಜೀವ ವಿಮಾನಿಗಮ (ಎಲ್‌ಐಸಿ) ಕಚೇರಿಗಳು, ಅಂಚೆ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಇದಲ್ಲದೆ ಜನವರಿ 26ರಿಂದ ಸಾಲು ಸಾಲು ರಜೆಯಿದೆ.

ಖಾಸಗಿ ಶಾಲೆಗಳಿಗೆ ರಜೆ

ಖಾಸಗಿ ಶಾಲೆಗಳಿಗೆ ರಜೆ

ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ (ಕುಸ್ಮಾ) ರಂದು ಶಾಲೆಗಳಿಗೆ ರಜೆ ಘೋಷಿಸಿದೆ. ಒಂದು ಗಂಟೆ ಹೆಚ್ಚು ಕಾರ್ಯ ನಿರ್ವಹಿಸಲಿವೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಎಂದು ಹೇಳಿದರು. ಬೆಂಗಳೂರು ನಗರದಲ್ಲಿ 700 ಮತ್ತು ರಾಜ್ಯಾದ್ಯಂತ 1,400 ಶಾಲೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.

ಸರ್ಕಾರಿ ಶಾಲೆಗಳು

ಸರ್ಕಾರಿ ಶಾಲೆಗಳು

ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಆದ್ದರಿಂದ, ಗುರುವಾರ (ಜನವರಿ 25) ದಂದು ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಎಂದಿನಂತೆ ಸಿಗಲಿದೆ. ಆಶಾ ಕಾರ್ಯಕರ್ತೆಯರು ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಮೇಲಾಗಿ, ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬಿಇಒಗಳಿಗೆ ನೀಡಲಾಗಿದೆ.

ಹೋಟೆಲ್ ಗಳು ಬಂದ್ ಆಗಲ್ಲ

ಹೋಟೆಲ್ ಗಳು ಬಂದ್ ಆಗಲ್ಲ

ಹೋಟೆಲ್, ಮಾಲ್ ಗಳು ಕಾರ್ಯನಿರ್ವಹಿಸಲಿವೆ. ಸರ್ಕಾರಿ ಕಚೇರಿಗೆ ಬಂದವರಿಗೆ ಹೋಟೆಲ್‌ನಲ್ಲಿ ಊಟ ಸಿಗುತ್ತದೆ. ರಸ್ತೆ ಬದಿ ತಳ್ಳುಗಾಡಿ ಹೋಟೆಲ್ ಗಳಂತೂ ಬಂದ್ ಆಗುವುದಿಲ್ಲ. ಮಾಲ್ ಗಳ ಫುಡ್ ಕೋರ್ಟ್, ಆನ್ ಲೈನ್ ಫುಡ್ ಕೂಡಾ ಲಭ್ಯವಿರಲಿದೆ.

ರೈಲು ಸಂಚಾರ ವ್ಯತ್ಯಯ ಇಲ್ಲ

ರೈಲು ಸಂಚಾರ ವ್ಯತ್ಯಯ ಇಲ್ಲ

ರೈಲುಗಳು ಎಂದಿನಂತೆ ಸಂಚಾರ ನಡೆಸಲಿವೆ. ಜನರು ತುರ್ತು ಪ್ರಯಾಣಕ್ಕಾಗಿ ರೈಲು ಮತ್ತು ಖಾಸಗಿ ಬಸ್ಸುಗಳನ್ನು ಅವಲಂಬಿಸಬಹುದು. ಮೆಟ್ರೋ ಸಂಚಾರದಲ್ಲೂ ಯಾವುದೇ ವ್ಯತ್ಯಯ ಇಲ್ಲ. ಮೆಟ್ರೋ ರೈಲು ಎಂದಿನಂತೆ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ಓಡಲಿದೆ

ಮೇರು ಕ್ಯಾಬ್, ಓಲಾ, ಉಬರ್

ಮೇರು ಕ್ಯಾಬ್, ಓಲಾ, ಉಬರ್

ಆಪ್ ಆಧಾರಿತ ಆಟೋ, ಕ್ಯಾಬ್ ಗಳು ಸಹ ನಿತ್ಯದಂತೆ ಓಡಾಡಲಿವೆ. ಟ್ಯಾಕ್ಸಿ ಸೇವೆ ಎಂದಿನಂತೆ ಇರಲಿದೆ. ನಾವು ಮುಷ್ಕರಕ್ಕೆ ಬೆಂಬಲ ನೀಡಿಲ್ಲ ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಸಂಘಟನೆಯ ಕಾರ್ಯದರ್ಶಿ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಮೇರು ಕ್ಯಾಬ್ ಗಳು ಲಭ್ಯವಿರಲಿದೆ.

ಆಟೋರಿಕ್ಷಾ ಸಂಚಾರ ಎಂದಿನಂತೆ ಇರಲಿದೆ

ಆಟೋರಿಕ್ಷಾ ಸಂಚಾರ ಎಂದಿನಂತೆ ಇರಲಿದೆ

ಆಟೋರಿಕ್ಷಾ ಸಂಚಾರ ಎಂದಿನಂತೆ ಇರಲಿದೆ ಎಂದು ಆದರ್ಶ ಆಟೋರಿಕ್ಷಾ ಮಾಲೀಕರ ಸಂಘ ಪ್ರಕಟಿಸಿದೆ. ಆಪ್ ಆಧಾರಿತ ಓಲಾ ಆಟೋರಿಕ್ಷಾಗಳು ಕೂಡಾ ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ.

ನಂದಿನ ಹಾಲು, ದಿನಪತ್ರಿಕೆ

ನಂದಿನ ಹಾಲು, ದಿನಪತ್ರಿಕೆ

ಅಗತ್ಯ ವಸ್ತುಗಳಾದ ಹಾಲು, ಔಷಧಗಳು ದೊರೆಯಲಿವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತೆರೆದಿರುತ್ತವೆ. ಆಂಬ್ಯುಲೆನ್ಸ್ ಸೇವೆ ಲಭ್ಯವಿರುತ್ತದೆ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ಲಾರಿಗಳು ಬಂದ್‌ಗೆ ಬೆಂಬಲ ನೀಡಿಲ್ಲ. ಬೆಳಗ್ಗೆದ್ದು ಎಂದಿನಂತೆ ಕಾಫಿ ಹೀರುತ್ತಾ ದಿನಪತ್ರಿಕೆ ಓದಬಹುದು. ಎಪಿಎಂಸಿ ವರ್ತಕರು ಬೆಂಬಲ ವ್ಯಕ್ತಪಡಿಸಿಲ್ಲ. ತರಕಾರಿ ಮನೆ ಮುಂದೆ ಎಂದಿನಂತೆ ಸಿಗಲಿದೆ.

English summary
Karnataka Bandh on January 25 : What will be closed, what will be open?. KSRTC and BMTC employees not supporting for Bandh. No holiday for government Schools, Colleges, Government employees. Then who is supporting the Bandh called by Vatal Nagaraj, Check this article to know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X