Karnataka Bandh LIVE: ಕಾವೇರಿಗಾಗಿ ಹೋರಾಟ, ಶಾಂತಿಯುತ ಕರ್ನಾಟಕ ಬಂದ್ ಮುಕ್ತಾಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲಿ ವಾರದಲ್ಲಿನ ಎರಡನೇ ಬಂದ್ ಈಗ ಮುಕ್ತಾಯಗೊಂಡಿದೆ. ಕಳೆದ ಮಂಗಳವಾರ ಬೆಂಗಳೂರು ಬಂದ್, ಇಂದು ( ಸೆ29) ಕರ್ನಾಟಕ ಬಂದ್ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಬಿಜೆಪಿ ಮತ್ತು ಜೆಡಿಎಸ್ ಈ ಬಂದ್ಗೆ ಬಾಹ್ಯ ಬೆಂಬಲವನ್ನು ನೀಡಿದ್ದವು. ಕಾವೇರಿ ಕಣಿವೆ ಭಾಗದಲ್ಲಿನ ಜಿಲ್ಲೆಗಳಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದವು.
ಅಗತ್ಯ ಸೇವೆ ಬಿಟ್ಟು ಉಳಿದೆಲ್ಲವೂ ಬಹುತೇಕ ಬಂದ್ ಆಗಿದ್ದವು, ಕರ್ನಾಟಕ ಬಂದ್ಗೆ ಸುಮಾರು ಎರಡು ಸಾವಿರ ಸಂಘಟನೆಗಳ ಸಾಥ್ ನೀಡಿದ್ದವು. ಹೊಟೇಲ್, ಮಾಲ್, ಚಲನಚಿತ್ರ ಮಂದಿರಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು ಬಂದ್ ಆಗಿದ್ದವು. ಎರಡೆರಡು ಬಂದ್ ನಡೆದರು ಕೂಡಾ ಕರ್ನಾಟಕದ ಸಂಕಷ್ಟ ಮುಗಿಯದೇ, ಅಕ್ಟೋಬರ್ 15ರವರೆಗೆ ಪ್ರತಿ ದಿನ 3000 ಕ್ಯೂಸೆಕ್ ನೀರು ಹರಿಸುವಂತೆ CWMA ಸೂಚನೆ ನೀಡಿದೆ

ವಾರದ ಎರಡನೇ ಬಂದ್ ಶಾಂತಿಯುತ ಮುಕ್ತಾಯ
ಸಿಎಂ ಮತ್ತು ಡಿಸಿಎಂ ಸುದೀರ್ಘ ಚರ್ಚೆ


ಕಾವೇರಿ ವಿಚಾರದಲ್ಲಿ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ದಿ ಬರುತ್ತಿದೆ : ಬೊಮ್ಮಾಯಿ
ಕಾವೇರಿ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ: ತೇಜಸ್ವಿ ಸೂರ್ಯ
ಸಂಕಷ್ಟ ಕಾಲದಲ್ಲಿ ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಅಗ್ರಹ: ಡಿ.ಕೆ.ಶಿವಕುಮಾರ್
ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ರೈತ ಮುಖಂಡ ಕುರುಬೂರು ಶಾಂತಕುಮಾರ್
ನಮ್ಮ ಕುಟುಂಬ ಯಾವಾಗಲು ಕಾವೇರಿ ಹೋರಾಟದಲ್ಲಿ ಇದೆ: ನಟ ಯುವರಾಜ್ ಕುಮಾರ್

ಬೆಂಗಳೂರಿನ ಜನರಿಗೆ ಕುಡಿಯಲು ನೀರು ಇರಲ್ಲ: ತೇಜಸ್ವಿ ಸೂರ್ಯ


ಬ್ಲೇಡ್‌ನಲ್ಲಿ ಕೈ ಕೊಯ್ದುಕೊಂಡ ಪ್ರತಿಭಟನಾಕಾರ

ಮಳೆಯನ್ನು ಲೆಕ್ಕಿಸದೆ ಹಮಾಲಿ ಕಾರ್ಮಿಕ ಪ್ರತಿಭಟನೆ
ಕಾವೇರಿ ನಮ್ಮದು ಎಂದು ತಮಿಳರು, ತಮಿಳುನಾಡು ವಿರುದ್ಧ ಅಕ್ರೋಶ
ಪೊಲೀಸರ ವಶಕ್ಕೆ ವಾಟಾಳ್ ನಾಗರಾಜ್

#WATCH | Bengaluru: Pro-Kannada activist Vatal Nagaraj detained by the Town Hall Police during the Karnataka Bandh protest pic.twitter.com/h7t20O0AgK
— ANI (@ANI) September 29, 2023
ಚಿಕ್ಕಬಳ್ಳಾಪುರ: ಬಂದ್ ಇಲ್ಲ..ಬಸ್ ಇದೆ..ಆದ್ರೂ ಜನ ಬರ್ತಿಲ್ಲ
ಚಿಕ್ಕಬಳ್ಳಾಪುರ: ಬಂದ್ ಇಲ್ಲ..ಬಸ್ ಇದೆ..ಆದ್ರೂ ಜನ ಬರ್ತಿಲ್ಲ
ಚಾಮರಾಜನಗರದಲ್ಲಿ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ರೈತರು
ತಮಿಳುನಾಡು ಗಡಿಯಲ್ಲಿ ಹೈ ಅಲರ್ಟ್
ಕಾವೇರಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿಕೆ ಶಿವಕುಮಾರ್ ಚರ್ಚೆ













Click it and Unblock the Notifications